ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ನಿಧನ

By Suvarna NewsFirst Published Apr 30, 2022, 12:45 PM IST
Highlights

* ಕಾಂಗ್ರೆಸ್ ‌ಮುಖಂಡ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕ(INTUC) ಅಧ್ಯಕ್ಷ ನಿಧನ
* ಎಸ್.ಎಸ್.ಪ್ರಕಾಶಂ(70)  ಹೃದಯಾಘಾತದಿಂದ ನಿಧನ
* ಎಸ್.ಎಸ್. ಪ್ರಕಾಶಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ 

ಬೆಂಗಳೂರು, (ಏ.30): ಕಾಂಗ್ರೆಸ್ ‌ಮುಖಂಡ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕ(INTUC)ದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ(70) ಇಂದು(ಶುಕ್ರವಾರ) ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರನ ಸಹಿತ ಅಪಾರ ಸಂಖ್ಯೆಯ ಬಂಧು-ಮಿತ್ರರು ಮತ್ತು ಒಡನಾಡಿಗಳನ್ನು ಅಲಿದ್ದಾರೆ. ಎಸ್.ಎಸ್.ಪ್ರಕಾಶಂ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ 'ಜ್ಯೋತಿಯಾತ್ರೆ'ಯನ್ನು 1991ರಲ್ಲಿ ಆರಂಭಿಸಿ ಶ್ರೀಪೆರಂಬತ್ತೂರಿನಿಂದ 13 ರಾಜ್ಯಗಳ ಮೂಲಕ 'ವೀರ್ ಭೂಮಿ' ಹೊಸದಿಲ್ಲಿಯವರೆಗೆ ರಸ್ತೆ ಮೂಲಕ ಸತತ 21 ವರ್ಷಗಳ ಕಾಲ ಮುನ್ನಡೆಸಿದ್ದರು. ಅವರು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಿಂದ ಕರ್ನಾಟಕ ರಾಜ್ಯ INTUC ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

Latest Videos

Congress Politics: 1 ವರ್ಷ ಕರ್ನಾಟಕದಲ್ಲೇ ಸುರ್ಜೇವಾಲಾ ಠಿಕಾಣಿ!

ಕರ್ನಾಟಕ ರಾಜ್ಯ ಮಾಂಸ ಮತ್ತು ಕೋಳಿ ಮಂಡಳಿಯ ಅಧ್ಯಕ್ಷರಾಗಿದ್ದರು ಮತ್ತು ಅವರು ಕರ್ನಾಟಕ ರಾಜ್ಯ ಟ್ರಕ್ ಮತ್ತು ಟರ್ಮಿನಲ್ ಕಾರ್ಪೊರೇಷನ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಏ.30ರಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಸಂತಾಪ
ಎಸ್.ಎಸ್. ಪ್ರಕಾಶಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
'ಪ್ರಕಾಶಂ ಅವರು ಪಕ್ಷದ ನಿಷ್ಠವಂತ ನಾಯಕ ಹಾಗೂ ಕಾರ್ಯಕರ್ತರಾಗಿದ್ದು, ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಕಾರ್ಮಿಕರ ಪರ ಕಾಳಜಿ ಹೊಂದಿದ್ದ ಪ್ರಕಾಶಂ ಅವರು ಉತ್ತಮ ಸಂಘಟಕರರೂ ಹೌದು. ಅವರ ನಿಧನದಿಂದ ಪಕ್ಷಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಕುಟುಂಬ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರೂ, ಕೆಪಿಸಿಸಿ INTUC ವಿಭಾಗದ ಅಧ್ಯಕ್ಷರಾದ ಶ್ರೀ ಎಸ್.ಎಸ್ ಪ್ರಕಾಶಂ ಅವರ ನಿಧನದ ಸುದ್ದಿ ತಿಳಿದು ಅಪಾರ ನೋವುಂಟಾಯಿತು‌. ಪಕ್ಷಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪದಗಳಲ್ಲಿ ಹಿಡಿದಿಡಲಾಗದು. ಶ್ರೀಯುತರ ಕುಟುಂಬವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/d9WSIzgyze

— DK Shivakumar (@DKShivakumar)
click me!