ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ.ಸ್ಫೋಟ ಹಾಗೂ ಬಜೆಟ್ ಅಧಿವೇಶನ ಮಧ್ಯೆ ಹೈಕಮಾಂಡ್ ಕರೆ ಮೇರೆಗೆ ಸಚಿವ ಅರವಿಂದ ಲಿಂಬಾವಳಿಗೆ ದಿಢೀರ್ ದೆಹಲಿಗೆ ಹಾರಿದ್ದಾರೆ.
ಬೆಂಗಳೂರು, (ಮಾ.05): ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ದೆಹಲಿಯಿಂದ ತುರ್ತು ಬುಲಾವ್ ಬಂದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ತೆರಳಿದ್ದಾರೆ.
ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಕರೆಯ ಮೇರೆಗೆ ಅರವಿಂದ ಲಿಂಬಾವಳಿ ಅವರು ಇಂದು (ಶುಕ್ರವಾರ) ಕಲಬುರಗಿ ರದ್ದು ಮಾಡಿ ದಿಲ್ಲಿಗೆ ಹಾರಿದ್ದಾರೆ.
ರಾಸಲೀಲೆ CD ಸ್ಫೋಟ: ಕೋರ್ಟ್ ಮೆಟ್ಟಿಲೇರಿದ 6 ಸಚಿವರು, ಅಚ್ಚರಿ ಮೂಡಿಸಿದ ನಡೆ
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿ ಅವರಿಗೆ ವಹಿಸಿದೆ. ಕರ್ನಾಟಕದ ಮೊದಲ ಹಂತದ ಉಪಚುನಾವಣೆಗಳಲ್ಲಿ, ತೆಲಂಗಾಣ ಲೋಕಸಭಾ ಚುನಾವಣೆಗಳಲ್ಲಿ ಅರವಿಂದ ಲಿಂಬಾವಳಿ ಯಶ ಸಾಧಿಸಿದ್ದರು.
ತೃಣಮೂಲ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ ಪ್ರಾಬಲ್ಯ ಸಾಬೀತುಪಡಿಸುವ ಮತ್ತು ಅದನ್ನು ಬೆಳೆಸುವ ಮಹತ್ವದ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ.
ಚುನಾವಣಾ ಕಾರ್ಯತಂತ್ರವನ್ನು ಹೆಣೆಯಲೆಂದೇ ಹೈಕಮಾಂಡ್, ಅವರನ್ನು ದಿಲ್ಲಿಗೆ ಕರೆಸಿಕೊಂಡಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.