ಜಾರಕಿಹೊಳಿ ರಾಸಲೀಲೆ CD: ಶೇ. 60ರಷ್ಟು ಶಾಸಕರಿಗೆ ಇದೆ ಅದೇ ಪ್ರವೃತ್ತಿ, ಸ್ಫೋಟಕ ಹೇಳಿಕೆ

By Suvarna News  |  First Published Mar 5, 2021, 8:39 PM IST

ರಮೇಶ್​ ಜಾರಕಿಹೊಳಿ ಅಶ್ಲೀಲ ಸಿ.ಡಿ. ಬಯಲಿಗೆ ಬಿದ್ದ ನಂತರ ಸಂತ್ರಸ್ತ ಮಹಿಳೆಯರು ನನ್ನನ್ನು ಸಂಪರ್ಕಿಸಿದರೆ ಸಿ.ಡಿ. ಬಿಡುಗಡೆ ಮಾಡಲು ಸಹಾಯ ಮಾಡುತ್ತೇನೆ ಎಂಬ ಹೇಳಿಕೆ ಕೊಟ್ಟು ಸಂಚಲನ ಮೂಡಿಸಿದ್ದ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ,  ಅದೇ ವಿಚಾರದ ಕುರಿತಾಗಿ ಮತ್ತೆ ಪ್ರತಿಕ್ರಿಯಿಸಿದ್ದಾರೆ.


ಯಾದಗಿರಿ, (ಮಾ.05): ಈ ಹಿಂದೆ ಕಾಂಗ್ರೆಸ್ ನಾಯಕ ಎಚ್‌ವೈ ಮೇಟಿ ರಾಸಲೀಲೆ ಸಿ.ಡಿ. ರಿಲೀಸ್ ಮಾಡಿದ್ದ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್ ಮುಲಾಲಿ ಅವರು ಇಂದು (ಶುಕ್ರವಾರ) ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Tap to resize

Latest Videos

undefined

MLA,MP ಸೇರಿದಂತೆ ಹಲವರ ಸಿ.ಡಿ. ಇವೆ: ಹೊಸ ಬಾಂಬ್ ಸಿಡಿಸಿದ ಮತ್ತೋರ್ವ ಸಾಮಾಜಿಕ ಕಾರ್ಯಕರ್ತ

ಉತ್ತರ ಕರ್ನಾಟಕದ ಶಾಸಕರನ್ನು ಸಿಲುಕಿಸಲು ಬೆಂಗಳೂರಿನಲ್ಲಿ ಇಂತಹ ದೊಡ್ಡ ಜಾಲವಿದೆ. ಶೇ. 60ರಷ್ಟು ಶಾಸಕರು ಇಂತಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ಮುಗ್ಧರು, ಪಾಪದವರು ಬೆಂಗಳೂರಿನವರಂತೆ ಸ್ಮಾರ್ಟ್ ಅಲ್ಲ ಎಂದು ಎಂದು ಅಚ್ಚರಿ ಹೇಳಿಕೆ ನೀಡಿದರು. 

ಈ ಶಾಸಕರೆಲ್ಲರೂ ಪ್ರವೃತ್ತಿಯಿಂದಲೇ ಇಂತಹ ಕೆಲಸ ಮಾಡುತ್ತಿದ್ದಾರೆ. ಧೂಮಪಾನ, ಮದ್ಯಪಾನದಂತೆ ಇದನ್ನೂ ಮಾಡುತ್ತಿದ್ದಾರೆ. ಇಂಥವರನ್ನ ಟಾರ್ಗೆಟ್ ಮಾಡುವ ಜಾಲ ಬೆಂಗಳೂರಿನಲ್ಲಿದೆ. ಈ ಜಾಲಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಶಾಸಕರೇ ಟಾರ್ಗೆಟ್‌. ನಮ್ಮ ಭಾಗದ ಶಾಸಕರು ಮೈ ಮರೆಯದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

 ಶಾಸಕರಾದವರಿಗೆ ಸಂಸ್ಕೃತಿ, ಸಂಸ್ಕಾರ, ಬುದ್ಧಿ ಇರಬೇಕು‌, ಭಾಗಿಯಾಗುವ ಮುನ್ನ ಹೆಂಡತಿ, ಮಕ್ಕಳನ್ನು ನೆನಪಿಸಿಕೊಳ್ಳಲಿ. ಒಂದು ವೇಳೆ ಯಾವುದೇ ಸಂತ್ರಸ್ತರಿಗೆ ಜೀವ ಭಯವಿದ್ದರೆ ನಾನು ನ್ಯಾಯ ಒದಗಿಸುವೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಅನುಮಾನದ ಹೊಗೆ ಎಬ್ಬಿಸಿದ್ದಾರೆ.

click me!