BJP ಜೊತೆಗೆ ಜೆಡಿಎಸ್ ವಿಲೀನವಾಗುತ್ತಾ? ಬಿಜೆಪಿ ಉಪಾಧ್ಯಕ್ಷ ಸ್ಫೋಟಕ ಸುಳಿವು

By Suvarna NewsFirst Published Dec 20, 2020, 3:45 PM IST
Highlights

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಥವಾ ವಿಲೀನವಾಗುತ್ತಾ ಎನ್ನುವ ಚರ್ಚೆಗಳು ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಇನ್ನು ಈ ಬಗ್ಗೆ ಬಿಜೆಪಿ ಉಪಾಧ್ಯಕ್ಷ ಸುಳಿವು ಕೊಟ್ಟಿದ್ದಾರೆ.

ಬೆಂಗಳೂರು, (ಡಿ.20):  ರಾಜ್ಯದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್‌ ವಿಲಿನದ ಬಗ್ಗೆ ಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಸ್ಫೋಟಕ ಸುಳಿವು ಒಂದನ್ನು ಕೊಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕರ್ನಾಟಕದಲ್ಲೂ ಧ್ರುವೀಕರಣ ಆರಂಭವಾಗಲಿದೆ. ಅಭಿವೃದ್ಧಿ ಮಾಡುವ ಪಕ್ಷದ ಕಡೆಗೆ ಎಲ್ಲರೂ ಮುಖ ಮಾಡುತ್ತಾರೆ ಎಂದು ಹೇಳಿದರು.

BJP ಜೊತೆ JDS ವಿಲೀನ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಕುಮಾರಸ್ವಾಮಿ

ರಾಜಕೀಯ ಪಕ್ಷವೊಂದು ವಿಲೀನ ಆಗುತ್ತಾ ಅನ್ನೋ ಪ್ರಶ್ನೆಗೆ ಸುಳಿವು ಕೊಟ್ಟ ಬಿಜೆಪಿ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಈ ವೇಳೆ, ನಾನೂ ಮಾಧ್ಯಮದಲ್ಲೇ ನೋಡಿದ್ದೇನೆಂದು ಸ್ಮೈಲ್ ಮಾಡಿ ಸುಮ್ಮನಾದರು.

ಕರ್ನಾಟಕದಲ್ಲಿ ಈಗ ಸ್ಥಿರ ಸರ್ಕಾರ ಇದೆ. ಬರುವಂತ ದಿನಗಳಲ್ಲಿ ರಾಜಕೀಯ ಧ್ರುವೀಕರಣ ಮತ್ತಷ್ಟು ಹೆಚ್ಚಾಗಲಿದೆ. ಮೋದಿ ಅಲೆ, ಬಿಜೆಪಿ ಅಲೆ ಸ್ಪಷ್ಟವಾಗಿದೆ. ಕರ್ನಾಟಕದಲ್ಲೂ ಧ್ರುವೀಕರಣ ಆರಂಭವಾಗಲಿದೆ. ಸಮ್ಮಿಶ್ರ ಸರ್ಕಾರ ಮಾಡಿದವರೇ ಪರಸ್ಪರ ಕಿತ್ತಾಡ್ತಿರೋದು ನೋಡಿದರೆ ಬರುವಂತ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಮಾಡುವ ಪಕ್ಷದ ಕಡೆಗೆ ಎಲ್ಲರು ಮುಖ ಮಾಡ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಸದ್ಯ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ವಿಲೀನವಾಗುತ್ತಾ? ಅಥವಾ ಮೈತ್ರಿ ಮಾಡಿಕೊಳ್ಳುತ್ತಾ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

click me!