ಧರ್ಮಸ್ಥಳ ಪ್ರಕರಣ: ಕೇರಳ ಸರ್ಕಾರದ ಮಧ್ಯಪ್ರವೇಶ ಸಲ್ಲದು, ನಗರ ನಕ್ಸಲರ ಮಧ್ಯಸ್ಥಿಕೆಯಿಂದ ತನಿಖೆ ದಿಕ್ಕು ತಪ್ಪಲಿದೆ!

Published : Jul 23, 2025, 04:12 PM ISTUpdated : Jul 23, 2025, 04:59 PM IST
Araga Jnanendra Dharmasthala Entry Gate

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆಯಲ್ಲಿ ಕೇರಳ ಸರ್ಕಾರ ಮಧ್ಯಪ್ರವೇಶಿಸುತ್ತಿದೆ. ಇಂತಹ ನಗರ ನಕ್ಸಲರು ಭಾಗವಹಿಸುವಿಕೆಯಿಂದ ಎಸ್‌ಐಟಿ ತನಿಖೆಗೆ ತೊಂದರೆಯಾಗಲಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.23): ಧರ್ಮಸ್ಥಳದ ನೂರಾರು ಮಹಿಳೆಯರನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ಪ್ರಕರಣದಲ್ಲಿ ಕೇರಳ ಸರ್ಕಾರಒಲ ಮಧ್ಯ ಪ್ರವೇಶ ಮಾಡುತ್ತಿದೆ. ನಗರ ನಕ್ಸಲರು ಪ್ರಕರಣದಲ್ಲಿ ಎಂಟ್ರಿಯಾಗುತ್ತಿದ್ದಾರೆ. ಅವರ ಈ ಭಾಗವಹಿಸುವಿಕೆ ತನಿಖೆಗೆ ತೊಂದರೆಯಾಗಲಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಕುರಿತಾಗಿ ರಾಜ್ಯ ಸರ್ಕಾರ ತನಿಖೆ ಮಾಡಿರುವುದಕ್ಕೆ ಸ್ವತಂತ್ರ ತನಿಖಾ ತಂಡ (SIT) ರಚನೆ ಮಾಡಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ, ನ್ಯಾಯಸಮ್ಮತವಾದ ತನಿಖೆ ಮಾಡಿ, ವರದಿ ಸಲ್ಲಿಕೆ ಮಾಡಬೇಕು. ಆದರೆ, ಅನೇಕರು ಇದರ ಹಿಂದೆ ಕೆಲಸ ಮಾಡುವುದು ಸರಿಯಲ್ಲ. ಎಸ್‌ಐಟಿ ತಂಡದವರೇ ತನಿಖೆಮಾಡಿ, ಅವರೇ ವರದಿ ಕೊಡುತ್ತಾರೆ‌. ಧರ್ಮಸ್ಥಳ ನಮ್ಮೆಲ್ಲರ ಶ್ರದ್ಧಾ ಕೇಂದ್ರವಾಗಿದೆ. ಅದಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಕೇರಳ ಸರ್ಕಾರ ಮಧ್ಯಪ್ರವೇಶ ಮಾಡುತ್ತಿದ್ದಾರೆ. ನಗರ ನಕ್ಸಲರು ಪ್ರಕರಣದಲ್ಲಿ ಎಂಟ್ರಿ ಆಗುತ್ತಿದ್ದಾರೆ. ಅವರ ಪ್ರವೇಶದಿಂದ ತನಿಖೆಯಲ್ಲಿ ತೊಡಕು ಆಗುವುದಕ್ಕೆ ಕಾರಣವಾಗಲಿದೆ. ಪೊಲೀಸರು ಪಾರದರ್ಶಕ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ಜಾತಿಗಣತಿ ಮರು ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿ, ಒಂದು ಜಾತಿ ಗಣತಿ ನೂರಾರು ಕೋಟಿ ಖರ್ಚು ಮಾಡಿ ಮೂಲೆಗೆ ಹಾಕಿದ್ದಾರೆ. ಅವರು ಯಾಕೆ ಗಣತಿ ಕೈ ಬಿಟ್ಟರು ಅಂತ ಅವರನ್ನೇ ಕೇಳಬೇಕು. ಶಿಕ್ಷಕರನ್ನೇ ನೇಮಕ ಮಾಡಬೇಕು ಅಂತ ಹೇಳಿದ್ದಾರೆ. ಶಿಕ್ಷಕರನ್ನ‌ ಹೊರತುಪಡಿಸಿ ಬೇರೆ ಯಾರಿಂದ ಸಾಧ್ಯವಿಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡುತ್ತಿದೆ. ಏನಾದರೂ ಮಾಡಿ 5 ವರ್ಷ ದಾಟಬೇಕು. ಇವರ ಲಂಚಕೋರತನ ಎಲ್ಲೆ ಮೀರಿದೆ. ಅವರ ಬಾಯಿ ಮುಚ್ಚಿಸಲು ಹೈಕಮಾಂಡ್ ಕಡೆಯಿಂದ ನಾಯಕರನ್ನ ಕಳಿಸುತ್ತಿದ್ದಾರೆ. ಜನರ ಮನಸ್ಸನ್ನ ಬೇರೆ ಕಡೆ ಡೈವರ್ಟ್ ಮಾಡಲು ಜಾತಿಗಣತಿ ಮರು ಸಮೀಕ್ಷೆ ಮಾಡುತ್ತಿದ್ದಾರೆ.

ಅನುದಾನ ಹಂಚಿಕೆ ತಾರತಮ್ಯ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಶಾಸಕರು ಉಲ್ಟಾ ಹೊಡೀತಾರೆ ಅಂತ ಗೊತ್ತಾಗಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡುತ್ತಿತ್ತು. ಗ್ಯಾರಂಟಿ ಕೊಡೋಕೆ ಇನ್ನೂ ಆಗುತ್ತಿಲ್ಲ. ಅಭಿವೃದ್ಧಿಗೆ ಹಣ ಕೊಡಲು ಆಗುತ್ತಿಲ್ಲ. ಎಲ್ಲ ಕಾಂಗ್ರೆಸ್ ಶಾಸಕರಿಗೆ 50 ಕೋಟಿ‌ ರೂ. ಕೊಡುತ್ತೀನಿ ಎಂದು ಹೇಳಿದ್ದಾರೆ. ಅವರು ಸಾಲ ಮಾಡಿ ಬಜೆಟ್ ಮಾಡಿದ್ದಾರೆ. ಇವರ ಬಳಿ ಹಣ ಇಲ್ಲ. ಆಡಳಿತ ಪಕ್ಷಕ್ಕೆ‌ ಮಾತ್ರ ಕೊಡೋದಾಗಿ ಹೇಳಿದ್ದಾರೆ. ಇದು ಸಾರ್ವಜನಿಕರ ತೆರಿಗೆ ಹಣ. ಎಲ್ಲರ ಕ್ಷೇತ್ರಕ್ಕೂ ಹಣ ಕೊಡುವ ಅಗತ್ಯತೆ ಇದೆ. ನಾವು ನಿರೀಕ್ಷೆ ಮಾಡಿದ್ದೇವೆ. ಅವರು ಏನೂ ಹೇಳದಿದ್ದರೂ ಜನ ಸುಮ್ಮನಿರುತ್ತಿದ್ದರು. ಜನ ಈಗ ಹಣ ಬಿಡುಗಡೆ ಮಾಡಿದ್ದಾರೆ, ಕಾಮಗಾರಿ ಮಾಡಿ ಅಂತ ಕೇಳುತ್ತಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!