
ವಿಜಯಪುರ (ಜು.23): ಪ್ರಜಾಪ್ರಭುತ್ವ ಇಲ್ಲ ಎಂದು ಈಗ ಉಪರಾಷ್ಟ್ರಪತಿಗಳಿಗೆ ಅರ್ಥವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ವಿಜಯಪುರ ನಗರದಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ಈ ದೇಶದ ವ್ಯವಸ್ಥೆಯಲ್ಲಿ ಯಾಕೆ? ರಾಜೀನಾಮೆ ಕೊಡಿಸಿದರು. ಧನಕರ್ ಅವರಿಗೆ ಒತ್ತಡ ಯಾಕೆ ಬಂದಿದೆ. ಸ್ವ ಇಚ್ಛೆಯಿಂದ ಯಾಕೆ ರಾಜೀನಾಮೆ ಕೊಟ್ಟರು ಎಂದು ಬಿಜೆಪಿಯವರನ್ನು ಕೇಳಿ ಎಂದು ಸಂತೋಷ ಲಾಡ್ ಒತ್ತಾಯಿಸಿದರು.
ಧರ್ಮಸ್ಥಳ ಸರಣಿ ಕೊಲೆ ಆರೋಪ ಕುರಿತು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅದಕ್ಕಾಗಿ ಧರ್ಮಸ್ಥಳ ಶಾಪದಿಂದ ಸರ್ಕಾರ ಪತನವಾಗುತ್ತದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ವಿಚಾರವಾಗಿ, ಧರ್ಮಸ್ಥಳದಲ್ಲಿ ಸರಣಿ ಕೊಲೆ ಆರೋಪ ಎಸ್ಐಟಿ ತನಿಖೆಯಲ್ಲಿದೆ. ಸೌಜನ್ಯಾ ಕೊಲೆ ಕೇಸ್ ಇಲ್ಲ ಎಂಬ ವಿಚಾರವಾಗಿ ಯಾವ ಕೇಸ್ ಬಿಡೋ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಹಾಗೂ ಹೋಂ ಮಿನಿಸ್ಟರ್ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಯಾವುದೇ ಅಪರಾಧಿಗೆ ಬೆಂಬಲ ನೀಡಲ್ಲ. ಯಾರೇ? ಎಷ್ಟೇ? ಪ್ರಭಾವಿ ಅಪರಾಧಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಗ್ಯಾರಂಟಿ ಎಂದರು.
ಅಸಂಘಟಿತ ವಲಯಕ್ಕೆ ಸೇರುವ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಕಾರ್ಮಿಕ ಇಲಾಖೆಯಿಂದ ಅನಕೂಲ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬಿಲ್ ಪಾಸ್ ಮಾಡಿ ತರುತ್ತೇವೆಂದು ಹೇಳಿದರು. ಸಿಗಂದೂರು ದೇವಸ್ಥಾನ ಹೇಗೆ ಹಾಳು ಮಾಡುತ್ತಾರೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ವಿಚಾರವಾಗಿ, ಮಧು ಬಂಗಾರಪ್ಪ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ ಎಂದರಲ್ಲದೇ ಕೆಲ ಸಚಿವರು ಸಿಎಂ ಆಗಬೇಕೆಂಬ ವಿಚಾರ ಬೆಂಬಲಿಗರು ಸ್ವಾಮೀಗಳಿಂದ ಹೇಳಿಕೆ ವಿಚಾರವಾಗಿ ಇದೆಲ್ಲ ಹಳೆಯ ಸುದ್ದಿಯಾಗಿದೆ, ಯಾರಾದರೂ ಮಾತನಾಡಲಿ. ನಾನು ಈ ನಿಟ್ಟಿನಲ್ಲಿ ಮಾತನಾಡಲ್ಲ. ಹೈಕಮಾಂಡ್ ನಿರ್ದೇಶನದಂತೆ ನಾನು ಮೊದಲು ಮಾತನಾಡಿಲ್ಲ,, ಮುಂದೆಯೂ ಮಾತನಾಡಲ್ಲ ಎಂದು ಸಚಿವ ಲಾಡ್ ಹೇಳಿದರು.
ಕಾರ್ಮಿಕರಲ್ಲದವರಿಗೆ ಕಾರ್ಮಿಕ ಕಾರ್ಡ್ ನೀಡಲಾಗಿದೆ ಎಂಬ ವಿಚಾರವಾಗಿ ಈ ನಿಟ್ಟಿನಲ್ಲಿ ಈಗಾಗಲೇ ನಾವು ಕ್ರಮ ತೆಗೆದುಕೊಂಡಿದ್ದೇವೆ. 56 ಲಕ್ಷ ಕಾರ್ಡ್ ಗಳಲ್ಲಿ 20 ಲಕ್ಷ ಕಾರ್ಡ್ ತೆಗೆದಿದ್ದೇವೆ. 36 ಲಕ್ಷ ಜನರಿಗೆ ಕಾರ್ಮಿಕ ಕಾರ್ಡ್ ನೀಡಿದ್ದೇವೆ. ಕಾರ್ಮಿಕರು ಹೌದೋ ಅಲ್ಲವೋ ಎಂಬುದನ್ನು ನಿಖರವಾಗಿ ತಿಳಿದುಕೊಂಡು ಕಾರ್ಡ್ ನೀಡುತ್ತಿದ್ದೇವೆ ಎಂದರು. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿರೋ ವಿಚಾರವಾಗಿ ಬೋರ್ಡ್, ಕಾರ್ಪೋರೇಷನ್ ಹಾಗೂ ಎಂಎಲ್‌ಸಿ ವಿಚಾರಕ್ಕೆ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗುತ್ತಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.