2ನೇ ಹಂತದ ಚುನಾವಣೆ: ನಾಮಪತ್ರಕ್ಕೆ ಇಂದು ಕೊನೆಯ ದಿನ

By Kannadaprabha NewsFirst Published Apr 19, 2024, 9:00 AM IST
Highlights

ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ 90 ಅಭ್ಯರ್ಥಿಗಳ ಪೈಕಿ 83 ಪುರುಷರು, 1 ಮಹಿಳೆಯರಿದ್ದಾರೆ. ಈವರೆಗೆ ನಾಮಪತ್ರ ಸಲ್ಲಿಕೆ ಮಾಡಿದ 241 ಅಭ್ಯರ್ಥಿ ಗಳಲ್ಲಿ 221 ಪುರುಷರು, 20 ಮಹಿಳೆಯರಿದ್ದಾರೆ. ಬಿಜೆಪಿಯಿಂದ 45, ಕಾಂಗ್ರೆಸ್‌ನಿಂದ 48, ಬಿಎಸ್‌ಪಿ 15. ಎಎಪಿ 1, ಜೆಡಿಎಸ್‌ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳಿಂದ 98, ಪಕ್ಷೇತರರಿಂದ 143 ನಾಡುಪತ್ರಗಳು ಸಲ್ಲಿಕೆಯಾಗಿವೆ.

ಬೆಂಗಳೂರು(ಏ.19): ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬಿರುಸಾಗಿದ್ದು ಗುರುವಾರ ಬಿ.ವೈ, ರಾಘವೇಂದ್ರ, ಉಮೇಶ್ ಜಾಧವ್ ಸೇರಿ 90 ಅಭ್ಯರ್ಥಿಗಳಿಂದ 104 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಈವರೆಗೆ ಒಟ್ಟು 241 ಅಭ್ಯರ್ಥಿಗಳಿಂದ 351 ನಾಮಪತ್ರ ಸಲ್ಲಿಕೆಯಾದಂತಾಗಿದೆ. ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ.

ಗುರುವಾರ ವಿವಿಧ ಪಕ್ಷದ ಅಭ್ಯರ್ಥಿಗಳು ಬೃಹತ್ ಯಾಲಿ ಮತ್ತು ಸಮಾವೇಶಗಳನ್ನು ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಕಲಬುರಗಿಯಲ್ಲಿ ಬಿಜೆಪಿ ಉಮೇಶ್ ಜಾಧವ್, ಬಾಗಲಕೋಟೆಯಲ್ಲಿ ಬಿಜೆಪಿ ಸಂಸದ ಗದ್ದಿಗೌಡರ್, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ, ಧಾರವಾಡದಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಸಿದರು.

2ನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ಭರಾಟೆ ಜೋರು; ಜೋಶಿ, ಶೆಟ್ಟರ್, ಬೊಮ್ಮಾಯಿ ಸೇರಿ 52 ಮಂದಿ ಉಮೇದುವಾರಿಕೆ

ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ 90 ಅಭ್ಯರ್ಥಿಗಳ ಪೈಕಿ 83 ಪುರುಷರು, 1 ಮಹಿಳೆಯರಿದ್ದಾರೆ. ಈವರೆಗೆ ನಾಮಪತ್ರ ಸಲ್ಲಿಕೆ ಮಾಡಿದ 241 ಅಭ್ಯರ್ಥಿ ಗಳಲ್ಲಿ 221 ಪುರುಷರು, 20 ಮಹಿಳೆಯರಿದ್ದಾರೆ. ಬಿಜೆಪಿಯಿಂದ 45, ಕಾಂಗ್ರೆಸ್‌ನಿಂದ 48, ಬಿಎಸ್‌ಪಿ 15. ಎಎಪಿ 1, ಜೆಡಿಎಸ್‌ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳಿಂದ 98, ಪಕ್ಷೇತರರಿಂದ 143 ನಾಡುಪತ್ರಗಳು ಸಲ್ಲಿಕೆಯಾಗಿವೆ.

ಸುರಪುರ ವಿಧಾನಸಭೆ: 

ಈ ನಡುವೆ, ಸುರಪುರ ವಿಧಾನಸಭಾ ಉಪಚುನಾವಣೆಗೆ ಮೂವರು ಅಭ್ಯರ್ಥಿಗಳಿಂದ ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‌, ಬಿಜೆಪಿ ಮತ್ತು ಪಕ್ಷೇತರರಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ.

click me!