ಯತ್ನಾಳ್‌ಗೆ ಬೇರೆ ಕ್ಷೇತ್ರಕ್ಕೆ ಕಳುಹಿಸಿ, ವಿಜಯಪುರ ನಗರ ಟಿಕೆಟ್ ನನಗೆ ನೀಡಿ: ಅಪ್ಪು ಪಟ್ಟಣಶೆಟ್ಟಿ

By Girish Goudar  |  First Published Apr 12, 2023, 1:36 PM IST

ಹಿಂದೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಪುತ್ರನಿಗೂ ಬ್ಲ್ಯಾಕ್‌ಮೇಲ್‌ ಮೇಲ್ ಮಾಡಿದ್ದರು. ಆ ಕ್ಷೇತ್ರಗಳಲ್ಲಿ ತಮ್ಮ ಸಮಾಜದ ಮತದಾರರು 50 ಸಾವಿರ ಇದೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದರು: ಅಪ್ಪು ಪಟ್ಟಣಶೆಟ್ಟಿ 


ವಿಜಯಪುರ(ಏ.12): ಶಾಸಕ ಬಸನಗೌಡ ಯತ್ನಾಳ್‌ಗೆ ವಿಜಯಪುರ ನಗರ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಧಾನ ಬುಗಿಲೆದ್ದಿದೆ. ಹೌದು, ಟಿಕೆಟ್ ಕೈ ತಪ್ಪುತ್ತಿದ್ದಂತೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿರುಗಿ ಬಿದ್ದಿದ್ದಾರೆ. ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿ ಯತ್ನಾಳ್ ಟಿಕೆಟ್ ತಂದಿದ್ದಾರೆ ಅಂತ ಹೇಳುವ ಮೂಲಕ ಯತ್ನಾಳ್ ವಿರುದ್ಧ ಅಪ್ಪು ಪಟ್ಟಣಶೆಟ್ಟಿ ಗಂಭೀರವಾದ ಆರೋಪ ಮಾಡಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ ಅವರು, ಹಿಂದೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಪುತ್ರನಿಗೂ ಬ್ಲ್ಯಾಕ್‌ಮೇಲ್‌ ಮೇಲ್ ಮಾಡಿದ್ದರು. ಆ ಕ್ಷೇತ್ರಗಳಲ್ಲಿ ತಮ್ಮ ಸಮಾಜದ ಮತದಾರರು 50 ಸಾವಿರ ಇದೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಪಂಚಮಸಾಲಿ ಓಟು ಬಹಳ ಇವೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದರು ಅಂತ ಆರೋಪಿಸಿದ್ದಾರೆ. 

Latest Videos

undefined

ನುಡಿದಂತೆ ನಡೆಯೋದು ಕಾಂಗ್ರೆಸ್‌ ಜಾಯಮಾನ: ಎಂ.ಬಿ.ಪಾಟೀಲ

ಕಾರ್ಯಕರ್ತರು, ಪದಾಧಿಕಾರಿಗಳು ನನಗೆ ಓಟ್ ಮಾಡಿದ್ದರು, ಆದರೂ ಟಿಕೆಟ್ ಸಿಕ್ಕಿಲ್ಲ. ನಿರೀಕ್ಷೆ ಸುಳ್ಳಾಗಿದೆ. ಯತ್ನಾಳ್‌ಗೆ ಬೇರೆ ಕ್ಷೇತ್ರಕ್ಕೆ ಕಳುಹಿಸಿ, ನನಗೆ ನಗರ ಟಿಕೆಟ್ ನೀಡಿ. ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಕ್ಷೇತ್ರ ಖಾಲಿ ಇವೆ. ಬೇರೆ ಕಡೆಗೆ ಯತ್ನಾಳ್‌ಗೆ ಕಳುಹಿಸಿ ನನಗೆ ಟಿಕೆಟ್ ನೀಡಿ ಎಂದು ಅಪ್ಪು ಪಟ್ಟಣಶೆಟ್ಟಿ ಪಟ್ಟು ಹಿಡಿದಿದ್ದಾರೆ. ನನಗೆ ಡಿಕೆಟ್‌ ನೀಡದಿದ್ದರೆ ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ತೇನೆ. ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ತೀರ್ಮಾನ ತೆಗದುಕೊಳ್ಳುತ್ತೇನೆ ಅಂತ ಅಪ್ಪು ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!