ಪ್ರಜ್ವಲ್‌ ರೇವಣ್ಣ ಅನರ್ಹತೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮ​ನ​ವಿ: ದೇವೇ​ಗೌ​ಡ

Published : Sep 03, 2023, 09:04 AM IST
ಪ್ರಜ್ವಲ್‌ ರೇವಣ್ಣ ಅನರ್ಹತೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮ​ನ​ವಿ: ದೇವೇ​ಗೌ​ಡ

ಸಾರಾಂಶ

ಅನ​ರ್ಹ​ತೆಯ ಆದೇ​ಶದ ಪ್ರತಿ ಇನ್ನೂ ಸಿಕ್ಕಿಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ ಮತ್ತು ಮಾಜಿ ಪ್ರಧಾನಿಯಾಗಿ ಪೂರ್ಣ ಆದೇಶ ಓದದೆ ಪ್ರತಿ​ಕ್ರಿ​ಯಿ​ಸು​ವು​ದು ಯೋಗ್ಯ ಹಾಗೂ ಸಮಂಜಸವಲ್ಲ. ಅನ​ರ್ಹತೆ ತೀರ್ಪಿನ ವಿರುದ್ಧ ಸ್ಟೇ ತರ​ಲು ಸುಪ್ರೀಂ ಕೋರ್ಟ್‌ಗೆ ಹೋಗುವುದು ಸ್ವಾಭಾವಿಕವಾಗಿಯೇ ನಡೆಯುತ್ತದೆ. ಅಲ್ಲಿ ಏನಾಗುತ್ತೆ ಎಂದು ನಾನು ಈಗ​ಲೇ ಹೇಳಲು ಸಾಧ್ಯ​ವಿ​ಲ್ಲ. ನಾನು ಆ ಕುರಿತು ಮಾತ​ನಾ​ಡು​ವು​ದಿಲ್ಲ: ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ 

ಹೊಳೆನರಸೀಪುರ(ಹಾ​ಸ​ನ​)(ಸೆ.03): ಸಂಸದ ಪ್ರಜ್ವಲ್‌ ರೇವಣ್ಣ ಅನರ್ಹತೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಚ್‌ಗೆ ಮನವಿ ಸಲ್ಲಿ​ಸು​ವುದು ಸಹಜ ಎಂದು ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಹೇಳಿ​ದ​ರು.

ತಾಲೂಕಿನ ಹರದನಹಳ್ಳಿಯಲ್ಲಿರುವ ಕುಲದೇವರು ದೇವೇಶ್ವರ ದೇವಾಲಯ ಹಾಗೂ ಹಳೇಕೋಟೆ ಹೋಬಳಿಯ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪತ್ನಿ ಚೆನ್ನಮ್ಮ ಹಾಗೂ ಕುಟುಂಬ ಸದಸ್ಯರ ಜತೆಗೆ ಶ್ರಾವಣ ಶನಿವಾರದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ನಂತರ ಮಾತ​ನಾ​ಡಿ​ದ​ರು.

ಸಂಸದ ಪ್ರಜ್ವಲ್‌ ರೇವಣ್ಣ ಅನರ್ಹತೆ: ಪರಾಜಿತ ಅಭ್ಯರ್ಥಿ ಎ.ಮಂಜು ಕೂಡ ಅಕ್ರಮ ಎಸಗಿದ್ದು ಸಾಬೀತು..!

ಅನ​ರ್ಹ​ತೆಯ ಆದೇ​ಶದ ಪ್ರತಿ ಇನ್ನೂ ಸಿಕ್ಕಿಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ ಮತ್ತು ಮಾಜಿ ಪ್ರಧಾನಿಯಾಗಿ ಪೂರ್ಣ ಆದೇಶ ಓದದೆ ಪ್ರತಿ​ಕ್ರಿ​ಯಿ​ಸು​ವು​ದು ಯೋಗ್ಯ ಹಾಗೂ ಸಮಂಜಸವಲ್ಲ. ಅನ​ರ್ಹತೆ ತೀರ್ಪಿನ ವಿರುದ್ಧ ಸ್ಟೇ ತರ​ಲು ಸುಪ್ರೀಂ ಕೋರ್ಟ್‌ಗೆ ಹೋಗುವುದು ಸ್ವಾಭಾವಿಕವಾಗಿಯೇ ನಡೆಯುತ್ತದೆ. ಅಲ್ಲಿ ಏನಾಗುತ್ತೆ ಎಂದು ನಾನು ಈಗ​ಲೇ ಹೇಳಲು ಸಾಧ್ಯ​ವಿ​ಲ್ಲ. ನಾನು ಆ ಕುರಿತು ಮಾತ​ನಾ​ಡು​ವು​ದಿಲ್ಲ ಎಂದ​ರು.

ತಾವರೆ ಹೂವು ಅರ್ಪಿಸಿ ತಾಯಿ ಭವಾನಿ ಪೂಜೆ

ಹಾಸನ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಶ್ರಾವಣ ಶನಿವಾರದಂದು ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ರಂಗನಾಥನಿಗೆ ಪ್ರಿಯವಾದ ತಾವರೆ ಹೂವು ಅರ್ಪಿಸಿ, ಸಂಸದ ಸ್ಥಾನದಿಂದ ಅನರ್ಹಗೊಂಡ ತಮ್ಮ ಪುತ್ರ ಪ್ರಜ್ವಲ್‌ ರೇವಣ್ಣಗೆ ಸುಪ್ರೀಂಕೋರ್ಟ್‌ನಲ್ಲಿ ಜಯ ಸಿಗಲೆಂದು ಪ್ರಾರ್ಥಿಸಿದರು. ಬಳಿಕ, ದೇವಾಲಯದಲ್ಲಿ ಶ್ರೀ ಗರುಡಧ್ವಜಕ್ಕೆ ಪ್ರದಕ್ಷಿಣೆ ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್