ಮತ್ತೆ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ: ಖಚಿತಪಡಿಸಿದ ಬಿಜೆಪಿ ನಾಯಕ

By Suvarna News  |  First Published Feb 19, 2021, 10:33 PM IST

 ಮತ್ತೆ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಸ್ವತಃ ಬಿಜೆಪಿ ನಾಯಕ ಭವಿಷ್ಯ ನುಡಿದಿದ್ದಾರೆ.


ಪುದುಚೆರಿ, (ಫೆ.19):  ಕಾಂಗ್ರೆಸ್‌ನ ಮತ್ತೆ ಮೂವರು ಶಾಸಕರು ರಾಜೀನಾಮೆ ನೀಡಲಿದ್ದು, ವಿಧಾನಸಭೆಯಲ್ಲಿ ಆಡಳಿತದ ಸರ್ಕಾರ ಯಾವುದೇ ಕಾರಣಕ್ಕೂ ಬಹುಮತ ಸಾಬೀತು ಪಡಿಸುವುದಿಲ್ಲ ಎಂದು ಬಿಜೆಪಿ ನಾಯಕ ನಿರ್ಮಲ್​ ಕುಮಾರ್ ಸುರನಾ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಲ್ವರು ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಿದ್ದು, ಇದರಲ್ಲಿ ಇಬ್ಬರು ಶಾಸಕರು ಈಗಾಗಲೇ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ಮಲ್​​ ಕುಮಾರ್​, ಕೃಷ್ಣರಾವ್, ಜಾನ್ ಕುಮಾರ್ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

Tap to resize

Latest Videos

ಫೆ.22ಕ್ಕೆ ವಿಶ್ವಾಸಮತ ಯಾಚನೆಗೆ ಪುದುಚೇರಿ ಸಿಎಂಗೆ ಸೂಚನೆ

ಹೊಸದಾಗಿ ಪುದುಚೆರಿ ಲೆಫ್ಟಿನೆಂಟ್​​ ಗವರ್ನರ್​ ಆಗಿ ತಮಿಳಿಸಾಯಿ ಸುಂದರರಾಜನ್​​​ ಅವರು ಆಯ್ಕೆಯಾದ ಬಳಿಕ, ಫೆ.22ರಂದು ವಿಶ್ವಾಸ ಮತಯಾಚನೆ ಮಾಡಲು ಸೂಚನೆ ನೀಡಿದ್ದಾರೆ. 33 ಸಂಖ್ಯಾಬಲದ ವಿಧಾನಸಭೆಯಲ್ಲಿ 30 ಜನವರು ನೇರವಾಗಿ ಆಯ್ಕೆ ಆಗುತ್ತಾರೆ. ಉಳಿದ ಮೂವರನ್ನು ನಾಮಿನೆಟ್​ ಮಾಡುತ್ತಾರೆ. 

ವಿಶ್ವಾಸಮತ ಸಾಬೀತು ಪಡಿಸಲು 16 ಶಾಸಕರ ಬೆಂಬಲ ಅಗತ್ಯವಿದ್ದು, ಈ ಹಿಂದೆ 15 ಕಾಂಗ್ರೆಸ್​, ಡಿಎಂಕೆ ಮೂರು ಶಾಸಕರು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಬೆಂಬಲದಿಂದ ಬಹುಮತ ಪಡೆದುಕೊಂಡಿತ್ತು.  ಆದರೆ ಈಗ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದು, ವಿಶ್ವಾಸ ಮತ ಸಾಬೀತು ಪಡಿಸಿರುವ ಅಗತ್ಯ ಎದುರಾಗಿದೆ.

ಸದ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್​​ನ 10 ಸದಸ್ಯರು (ಸ್ಪೀಕರ್​ ಸೇರಿ), ಡಿಎಂಕೆಯ ಮೂವರು, ಆಲ್​​​ಇಂಡಿಯಾ ಕಾಂಗ್ರೆಸ್​ ಪಕ್ಷ 7, ಎಐಎಎಂಡಿಕೆ 4 ಮತ್ತು ಬಿಜೆಪ 3 (ನಾಮನಿರ್ದೇನ) ಹಾಗೂ ಸ್ವತಂತ್ರ ಅಭ್ಯರ್ಥಿ ಒಬ್ಬರು ಇದ್ದು, ಇದೇ  ಫೆ.22ರಂದು. ವಿಶ್ವಾಸ ಮತಯಾಚನೆಗೆ ಮುಹೂರ್ತ ಫಿಕ್ಸ್ ಆಗಿದೆ. 

click me!