ಮೈಸೂರು, (ಫೆ.19): ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ. 100 ಪರ್ಸೆಂಟ್ ವಿ ವಿಲ್ ಬ್ಯಾಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ 260 ಕೋಟಿ ರೂ. ವೆಚ್ಚದಲ್ಲಿ ರಾಯಣ್ಣ ಸೈನಿಕ ಶಾಲೆ ತೆರೆಯಲು ಅಡಿಗಲ್ಲು ಹಾಕಿದೆ. ಆದರೆ ಇನ್ನೂ ಅದು ಪೂರ್ಣಗೊಂಡಿಲ್ಲ. ಈಗಿನ ಸರ್ಕಾರದಲ್ಲಿ ನಾಲ್ಕು ಜನ ಮಂತ್ರಿಗಳಿದ್ದೀರಾ, ಕೆಲ್ಸ ಮಾಡ್ಸಿ. ಎಲ್ಲವಾದರೆ ಯಡಿಯೂರಪ್ಪ ಕುತ್ತಿಗೆ ಮೇಲೆ ಕೂತುಕೊಳ್ಳಿ. ನೀವು ಮಾಡಿಲ್ಲ ಅಂದರೆ ನಾವೇ ಅಧಿಕಾರಕ್ಕೆ ಬಂದು ಮುಂದೆ ಕೆಲಸ ಮಾಡುತ್ತೇವೆ. ನಾವೇ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ ಸಿದ್ದು
ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾಡಿ ಸಿಂಹಸ್ವಪ್ನವಾಗಿದ್ದ ರಾಯಣ್ಣಗೆ ಜೊತೆಗಿದ್ದವರೇ ಮುಳುವಾದರು. ದೇಶದ್ರೋಹಿಗಳು ಯಾವಾಗಲು ಇರ್ತಾರೆ ಸಮಾಜದಲ್ಲಿ. ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರ. ತನ್ನದೇ ಆದ ಸೈನ್ಯ ಕಟ್ಟಿಕೊಂಡು ಹೋರಾಡುತ್ತಿದ್ದ. ಅದಕ್ಕೆ ಸಾಮಾನ್ಯ ಗುಂಡಿಗೆ ಅಲ್ಲ, ದೊಡ್ಡ ಗುಂಡಿಗೆ ಬೇಕು ಎಂದು ತಮ್ಮ ಸ್ವಜಾತಿ ವಿರೋಧಿ ಬಣಕ್ಕೆ ಪರೋಕ್ಷವಾಗಿ ಟಾಮಗ್ ಕೊಟ್ಟರು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನಾನು 7 ಕೆ.ಜಿ ಅಕ್ಕಿ ಉಚಿತವಾಗಿ ಕೊಟ್ಟೆ. ಅವನ್ಯಾವನೋ ಕತ್ತಿ ಬಂದು ಟಿವಿ, ಬೈಕ್ ಇದ್ದವರಿಗೆ ಕಾರ್ಡ್ ರದ್ದು ಮಾಡ್ತೀವಿ ಅಂತಾನೆ. ಅವನು ಯಾವ್ ಕತ್ತಿನೋ ನನಗೆ ಗೊತ್ತಿಲ್ಲ ಎಂದು ಕುಟುಕಿದರು.
ಕೆಲ ಅಧಿಕಾರಿಗಳು ನನ್ನ ಬಳಿ ಚೆನ್ನಾಗಿದ್ದಾರೆ. ಗಂಧನಹಳ್ಳಿ ಗ್ರಾಮಕ್ಕೆ ಬ್ರಿಡ್ಜ್ ಬಾಕಿ ಹಣ ಕೊಡಿಸುತ್ತೇನೆ, ಸೇತುವೆಯನ್ನೂ ನಾನೇ ಮಾಡಿಸಿಕೊಡುತ್ತೇನೆ. ವಸತಿ ಶಾಲೆ, ರಸ್ತೆ ಉಳಿದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೇ ನಾನೆ ಮಾಡ್ತೀನಿ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ರವಿಶಂಕರ್‌ರನ್ನ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ. ಯಾವುದೇ ಕಾರಣಕ್ಕೂ ಯಾರ ಮಾತನ್ನೂ ಕೇಳಬೇಡಿ. ಈ ಮೂಲಕ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದ ರವಿಶಂಕರ್ಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಗ್ರಿನ್ ಸಿಗ್ನಲ್ ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.