ಡಿ.ಕೆ.ಶಿವಕುಮಾರ್‌ ಹೆಲಿಕಾಪ್ಟರ್‌ ಬಳಿ ಮತ್ತೊಂದು ಅವಘಡ: ಹೊತ್ತಿ ಉರಿದ ಬೆಂಕಿ!

By Sathish Kumar KH  |  First Published May 4, 2023, 4:15 PM IST

ಡಿ.ಕೆ. ಶಿವಕುಮಾರ್‌ ಅವರ ಹೆಲಿಕಾಪ್ಟರ್‌ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಈ ಬಾರಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೃತ್ತದ ಬಳಿಯೇ ಒಣಗಿದ್ದ ಹುಲ್ಲಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.


ಉತ್ತರಕನ್ನಡ (ಮೇ 4): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹೆಲಿಕಾಪ್ಟರ್‌ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಈ ಬಾರಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೃತ್ತದ ಬಳಿಯೇ ಒಣಗಿದ್ದ ಹುಲ್ಲಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್‌ ಡಿ.ಕೆ.ಶಿವಕುಮಾರ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಚುನಾವಣಾ ಪ್ರಚಾರಕ್ಕೆ ಮಾಡಲಿಕ್ಕಾಗಿ ಮೈಸೂರಿನಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು. ಇನ್ನು ಹೊನ್ನಾವರದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ ಬಯಲಿನ ಸ್ವಲ್ಪವೇ ದೂರದಲ್ಲಿ ಹುಲ್ಲು ಬೆಳೆದು ಒಣಗಿ ನಿಂತಿತ್ತು. ಹೆಲಿಕಾಪ್ಟರ್‌ ಇಳಿಯುವ ಜಾಗದಲ್ಲಿ ವೃತ್ತವನ್ನು ರಚಿಸಿ ಹುಲ್ಲು ಕಾಟಾವು ಮಾಡಿ ಸ್ವಚ್ಛಗೊಳಿಸಲಾಗಿತ್ತು. ಆದರೆ, ಪಕ್ಕದಲ್ಲಿ ಇದ್ದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಉರಿದಿದೆ. ಆದರೆ, ಇದರಿಂದ ಹೆಲಿಕಾಪ್ಟರ್‌ ಒಳಗೆ ಇರುವ ಡಿ.ಕೆ. ಶಿವಕುಮಾರ್‌ ಹಾಗೂ ಇತರೆ ಸಿಬ್ಬಂದಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

Latest Videos

undefined

Breaking ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ, ಕೂದಲೆಳೆ ಅಂತರದಲ್ಲಿ ಪಾರು!

ಸ್ಮೋಕ್‌ ಕ್ಯಾಂಡಲ್‌ನಿಂದ ಹಾರಿದ ಕಿಡಿ:  ಈ ಘಟನೆ ಹೊನ್ನಾವರದ ರಾಮತೀರ್ಥ ಬಳಿ ನಡೆದಿದೆ. ಹೆಲಿಕಾಪ್ಟರ್‌ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್ ನಿಂದ ಹಾಕಿಪ್ಯಾಟ್‌ನಿಂದಾ ಹಾರಿದ ಕಿಡಿ ಒಣಗಿದ ಹುಲ್ಲಿನ ಮೇಲೆ ಬಿದ್ದು, ಬೆಂಕಿ ಕಾಣಿಸಿಕೊಂಡಿದೆ. ಇನ್ನು ಗಾಳಿಗೆ ಹೆಚ್ಚಾಗಿದ್ದರಿಂದ ಸ್ಮೋಕ್ ಕ್ಯಾಂಡ್‌ನಿಂದ ಹಾರಿದ ಕಿಡಿ ಹುಲ್ಲಿಗೆ ತಗುಲಿ ಬೆಂಕಿ ಹೆಚ್ಚು ಆವರಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು. ಇನ್ನು ಸುರಕ್ಷಿತವಾಗಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ಹೆಲಿಪ್ಯಾಡ್‌ನಲ್ಲಿ ಇಳಿದು ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು. ಹೊನ್ನಾವರದ ಸೈಂಟ್ ಥಾಮಸ್ ಸಭಾಂಗಣದ  ಆವರಣದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದೆ. 

ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾಧಿಕಾರಿಗಳು:  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಸಿದ ಹೆಲಿಕಾಪ್ಟರನ್ನು‌ ಚುನಾವಣಾಧಿಕಾರಿಗಳು ಪರಿಶೀಲಿಸಿದರು. ಪೊಲೀಸ್ ಅಧಿಕಾರಿಗಳ ಜತೆ ಹೆಲಿಕಾಪ್ಟರ್ ಒಳಗೆ ಬ್ಯಾಗ್‌ಗಳನ್ನೆಲ್ಲಾ ಪರಿಶೀಲನೆ ಮಾಡಲಾಯಿತು. ಹೆಲಿಕಾಪ್ಟರ್ ಪರಿಶೀಲನೆ‌ ಮಾಡಿದ ಬಳಿಕ ತೆರಳಿದ ಚುನಾವಣಾಧಿಕಾರಿಗಳು. ಇಂದು ಹೊನ್ನಾವರದ ಸೈಂಟ್ ಅಂಥೋನಿ ಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ಹೆಲಿಕಾಪಗ್ಟರ್‌ ಪರಿಶೀಲನೆ ಮಾಡಿದಾಗ, ಎಲ್ಲಿ ಹೋದರೂ ನಮ್ಮ ಹೆಲಿಕಾಪ್ಟರ್‌ ಪರಿಶೀಲನೆ ಮಾಡುವುದು ಏತಕ್ಕೆ ಎಂದು ಡಿಕೆಶಿ ಪ್ರಶ್ನೆ ಮಾಡಿದರು. 

ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿಯಾಗಿ ಗಾಜು ಪುಡಿ ಪುಡಿ: ಮೊನ್ನೆ (ಮೇ 2ರ ಮಂಗಳವಾರ) ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ ಹಾರಾಟದ ವೇಳೆ ಹದ್ದು ಡಿಕ್ಕಿಯಾಗಿದೆ. ಇದರ ಪರಿಣಾಮ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿದೆ. ಪೈಲೆಟ್ ಹರಸಾಹಸದಿಂದ ಹೆಲಿಕಾಪ್ಟರ್‌ ಅನ್ನು ಕೂಡಲೇ ಲ್ಯಾಂಡಿಂಗ್‌ ಮಾಡಿದ್ದಾರೆ. ಈ ವೇಳೆ ಹೆಲಿಕಾಪ್ಟ್‌ನಿಂದ ಆಗಬಹುದಾದ ಭಾರಿ ಅನುಹುತ ತಪ್ಪಿದಂತಾಗಿದೆ. ಜಕ್ಕೂರು ಹೆಲಿಪ್ಯಾಡ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. 

ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್: ಮೇಲೆತ್ತಲು ಪರದಾಟ!

ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಅನಾಹುತ: ಜಕ್ಕೂರ್ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆದೆ ಕೆಲ ಕ್ಷಣಗಳ ಬಳಿಕ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದೆ. ಹದ್ದು ಡಿಕ್ಕಿಯಾದ ರಭಸಕ್ಕೆ ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದೆ. ಡಿಕೆ ಶಿವಕುಮಾರ್ ಜೊತೆಗಿದ್ದ ಇತರ ಕೆಲವರಿಗೆ ಗಾಯಗಳಾಗಿದೆ. ಡಿಕೆ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹದ್ದು ಡಿಕ್ಕಿಯಾದ ಬೆನ್ನಲ್ಲೇ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿದೆ. ಹೀಗಾಗಿ ಪೈಲೆಟ್ ತಕ್ಷಣ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇತ್ತ ಕೋಲಾರದ ಮುಳಭಾಗಿಲಿನಲ್ಲಿ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಡಿಕೆ ಶಿವಕುಮಾರ್ ರಸ್ತೆ ಮಾರ್ಗದ ಮೂಲಕ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದರು.

click me!