ಚುನಾವಣಾ ನಿವೃತ್ತಿ ಘೋಷಣೆ, ಈಶ್ವರಪ್ಪ ನಿರ್ಧಾರ ಯುವಕರಿಗೆ ಸ್ಫೂರ್ತಿ: ತೇಜಸ್ವಿ ಸೂರ್ಯ

By Ravi Janekal  |  First Published Apr 12, 2023, 3:23 AM IST

ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡುವ ಕೆ.ಎಸ್‌.ಈಶ್ವರಪ್ಪ ಅವರ ನಿರ್ಧಾರವು ಯುವ ಕಾರ್ಯಕರ್ತರಾದ ನಮಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.


ಬೆಂಗಳೂರು (ಏ.12) : ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡುವ ಕೆ.ಎಸ್‌.ಈಶ್ವರಪ್ಪ ಅವರ ನಿರ್ಧಾರವು ಯುವ ಕಾರ್ಯಕರ್ತರಾದ ನಮಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇವತ್ತು ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಭವಿಷ್ಯ ನಾಯಕತ್ವದ ತಯಾರಿಗೆ 50 ಯುವ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಇದಕ್ಕೆ ಹಿರಿಯ ನಾಯಕರು ಅವಕಾಶ ಕಲ್ಪಿಸಿದ್ದಾರೆ. ಈ ರೀತಿ ಹೊಸಬರಿಗೆ ಅವಕಾಶ ಸಿಗೋದಕ್ಕೆ ಯಡಿಯೂರಪ್ಪನವರು, ಈಶ್ವರಪ್ಪ ನವರು ಮತ್ತು ಹಾಲಾಡಿ ಶ್ರೀನಿವಾಸ್ ರವರು ಮಾರ್ಗದರ್ಶಕರಗಿದ್ದಾರೆ. ಈ ವರ್ಷವೂ ಯಶಸ್ಸನ್ನ ಕಾಣುತ್ತೇವೆ ಅಂತ ಯುವಕರಿಗೆ ನೀಡಿದ್ದಾರೆ ಎಂದರು.

ಚುನಾವಣೆ ನಿವೃತ್ತಿ ಘೋಷಣೆ: ಈಶ್ವರಪ್ಪರದು ‘ಲವ್‌ ಲೆಟರ್‌ ಎಂದ ಡಿಕೆಶಿ

Tap to resize

Latest Videos

ಈಶ್ವರಪ್ಪ (KS Eshwarappa)ರಾಜ್ಯ ಬಿಜೆಪಿಯಲ್ಲಿ ಎತ್ತರ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಮತ್ತು ಅನಂತಕುಮಾರ್‌ ಅವರೊಂದಿಗೆ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಕಟ್ಟಿದ ವ್ಯಕ್ತಿಗಳಲ್ಲಿ ಕೆ.ಎಸ್‌.ಈಶ್ವರಪ್ಪ ಅವರೂ ಇಬ್ಬರು. ಹೊಸಬರಿಗೆ ಜಾಗ ನೀಡುವ ಅವರ ನಿರ್ಧಾರವೇ ಬಿಜೆಪಿಯನ್ನು ಭಿನ್ನ ಪಕ್ಷವನ್ನಾಗಿ ಮಾಡುತ್ತದೆ. ಇದು ಅನುಕರಣೆಗೆ ಯೋಗ್ಯವಾದ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ರಕ್ತ ಮತ್ತು ಹೊಸ ನಾಯಕತ್ವವನ್ನು ಉದ್ದೇಶಪೂರ್ವಕವಾಗಿ ಬೆಳೆಸುವುದು ಬಿಜೆಪಿಯಲ್ಲಿ ಮಾತ್ರ. ಕೆ.ಎಸ್‌.ಈಶ್ವರಪ್ಪ, ಹಾಲಾಡಿ ಸರ್‌ ಮುಂತಾದ ನಾಯಕರ ತೀರ್ಮಾನ ಬಿಜೆಪಿ ಪಕ್ಷವನ್ನು ಇತರೆ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿಸಿದೆ ಎಂದು ಟ್ವೀಟ್‌ ಮೂಲಕ ಶ್ಲಾಘಿಸಿದ್ದಾರೆ. 

ಮುಂದಿನ ನಾಯಕತ್ವ ಬೆಳೆಸಲು ಹೊಸಬರಿಗೆ ಮಣೆ: ಅರುಣ್ ಸಿಂಗ್ ಸಮರ್ಥನೆ

ಆರ್ ಅಶೋಕ್ ಕನಕಪುರದಲ್ಲಿ ಡಿಕೆಶಿ ವಿರುದ್ಧ ಮತ್ತು ವರುಣಾದಲ್ಲಿ ವಿ ಸೋಮಣ್ಣ ಸಿದ್ದರಾಮಯ್ಯ ವಿರುದ್ಧ ಗೆಲುವನ್ನ ಸಾಧಿಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

 

ರಾಜ್ಯದಲ್ಲಿ ಶ್ರೀ , ಶ್ರೀ ಅನಂತ್ ಕುಮಾರ್ ರ ರೀತಿಯಲ್ಲಿ ಬಿಜೆಪಿಯ ಬೆಳವಣಿಗೆಗೆ ಅತ್ಯಮೂಲ್ಯ ಕೊಡುಗೆ ನೀಡಿರುವ ಶ್ರೀ ಕೆ ಎಸ್ ಈಶ್ವರಪ್ಪ & ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ರವರು ನವ ನಾಯಕತ್ವಕ್ಕೆ ಅವಕಾಶ ಕಲ್ಪಿಸಲು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿರುವ ಕ್ರಮ ಶ್ಲಾಘನೀಯ. pic.twitter.com/NiJPXJ616H

— Tejasvi Surya (@Tejasvi_Surya)

click me!