ನಮ್ಮ ವಾಹನಕ್ಕೆ ನಾವೇ ಕಲ್ಲು ಒಗೆದು ಗಲಾಟೆ ಮಾಡೋಣ ಎಂದಿದ್ದ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ!

By Kannadaprabha News  |  First Published Jan 28, 2023, 11:19 AM IST

 ‘ಹುಲಕೋಟಿಗೆ ಹೋಗಿ ನಮ್ಮ ವಾಹನಕ್ಕೆ ನಾವೇ ಕಲ್ಲು ಒಗೆದುಕೊಂಡು ಅಲ್ಲಿ ಗಲಾಟೆ ಮಾಡೋಣ. ಅದರಿಂದ ಗದಗ ನಗರದಲ್ಲಿ ನಮಗೆ ಅನುಕಂಪದ ಮತಗಳು ಬರುತ್ತವೆ' ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ್‌ ವಿರುದ್ಧ ಪರಾಭವಗೊಂಡಿರುವ ಬಿಜೆಪಿಯ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅನುಕಂಪದ ಮತಗಳನ್ನು ಗಿಟ್ಟಿಸಲು ಇಂಥದೊಂದು ಪ್ಲ್ಯಾನ್‌ ಹೂಡಿದ್ದರಂತೆ


ಗದಗ (ಜ.28) : ‘ಹುಲಕೋಟಿಗೆ ಹೋಗಿ ನಮ್ಮ ವಾಹನಕ್ಕೆ ನಾವೇ ಕಲ್ಲು ಒಗೆದುಕೊಂಡು ಅಲ್ಲಿ ಗಲಾಟೆ ಮಾಡೋಣ. ಅದರಿಂದ ಗದಗ ನಗರದಲ್ಲಿ ನಮಗೆ ಅನುಕಂಪದ ಮತಗಳು ಬರುತ್ತವೆ....’

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ್‌ ವಿರುದ್ಧ ಪರಾಭವಗೊಂಡಿರುವ ಬಿಜೆಪಿಯ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅನುಕಂಪದ ಮತಗಳನ್ನು ಗಿಟ್ಟಿಸಲು ಇಂಥದೊಂದು ಪ್ಲ್ಯಾನ್‌ ಹೂಡಿದ್ದರಂತೆ. ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬಂದಿರುವ ನಗರಸಭೆ ಮಾಜಿ ಸದಸ್ಯ ಮಂಜುನಾಥ ಎಚ್‌. ಮುಳಗುಂದ ಇಂಥದೊಂದು ಗುಟ್ಟನ್ನು ಇದೀಗ ಬಹಿರಂಗ ಮಾಡಿದ್ದಾರೆ.

Tap to resize

Latest Videos

undefined

Anganwadi Workers: ಮುಷ್ಕರದಲ್ಲಿ ಕಾರ್ಯಕರ್ತೆಯರು, ಬೀದಿಯಲ್ಲಿ ಮಕ್ಕಳು!

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಅಂದಿನ ಘಟನೆಗೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಸಾಕ್ಷಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಪಾಟೀಲರಿಗೆ ಏಕವಚನದಲ್ಲಿ ಮಾತನಾಡಿದರೆ ಯಾರೂ ದೊಡ್ಡವರಾಗುವುದಿಲ್ಲ. ನಾನು ಬಿಜೆಪಿ ನಾಯಕರಾದ ಸಿ.ಸಿ. ಪಾಟೀಲರಿಗೆ ಏಕವಚನದಲ್ಲಿ ಮಾತನಾಡಿದರೆ ಏನಾಗುತ್ತದೆ? ಅದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಎಚ್‌.ಕೆ. ಪಾಟೀಲ ಅವರಂತಹ ಹಿರಿಯ ನಾಯಕರಿಗೆ ಏಕವಚನದಲ್ಲಿ ಮಾತನಾಡುವ ಅನಿಲ ಮೆಣಸಿನಕಾಯಿ ಅವರ ಮನಸ್ಥಿತಿ ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಅವರ ಪಕ್ಷದಲ್ಲಿದ್ದು ಬಂದವನು ಎಂದು ವ್ಯಂಗ್ಯವಾಡಿದರು.

ಬಹಿರಂಗ ಚರ್ಚೆಗೆ ಬನ್ನಿ:

ನಾನು ಈ ಹಿಂದೆ ಬಿಜೆಪಿಯಲ್ಲಿದ್ದಾಗ ಅಲ್ಲಿನ ನಾಯಕರ ವರ್ತನೆ, ಉಸಿರು ಗಟ್ಟುವ ವಾತಾವರಣದಿಂದ ಬೇಜಾರಾಗಿ ಆ ಪಕ್ಷದಿಂದ ಹೊರಬಂದಿದ್ದೇನೆ. ನೀವು ಎಚ್‌.ಕೆ. ಪಾಟೀಲರಿಗೆ ಅಭಿವೃದ್ಧಿ ವಿಷಯದಲ್ಲಿ ಸವಾಲು ಹಾಕುತ್ತೀರಿ, ಬನ್ನಿ ನಾನು ನಿಮ್ಮ ಪುರಾಣವನ್ನು ಬಿಚ್ಚಿಡುತ್ತೇನೆ. ಯಾವ ಕಾರಣಕ್ಕಾಗಿ ನೀವು ಬೆಂಗಳೂರಿನಲ್ಲಿ ಹೋಟೆಲ್‌ ಬಿಲ್‌ ಕಟ್ಟಲಿಲ್ಲ, ನಿಮಗೆ ಮನೆ ಇಲ್ಲವಾ? ವರ್ಷಾನುಗಟ್ಟಲೇ ಹೊಟೇಲ್‌ನಲ್ಲಿ ಏನು ಮಾಡುತ್ತೀರಿ? ಎಲ್ಲವೂ ಈಗಾಗಲೇ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಸಧ್ಯದಲ್ಲಿಯೇ ಅನಿಲ ಮೆಣಸಿನಕಾಯಿ ಯಾರೆಲ್ಲಾ ಜನರಿಗೆ ಹಣದ ವಿಷಯದಲ್ಲಿ ಮೋಸ ಮಾಡಿದ್ದಾರೆ ಎನ್ನುವುದನ್ನು ದಾಖಲೆಗಳ ಸಮೇತ ಅವನ್ನೆಲ್ಲ ಬಿಚ್ಚಿಡುತ್ತೇನೆ. ಅದಕ್ಕೂ ಮೊದಲು ನಿಮಗೆ ಧೈರ್ಯ ಇದ್ದರೆ ಇಂದೇ ಬಹಿರಂಗ ಚರ್ಚೆಗೆ ಬನ್ನಿ ಎಂದು ಮಂಜುನಾಥ ಮುಳಗುಂದ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಉಮರ್‌ ಫಾರೂಕ್‌ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು.

ಯಳವತ್ತಿ ಗೋವಿಂದ..:

ಬಿಜೆಪಿ ನಗರಸಭೆಯ ಸದಸ್ಯ ರಾಘವೇಂದ್ರ ಯಳವತ್ತಿ ಒಂದು ರೀತಿಯಲ್ಲಿ .. ಇದ್ದಂತೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮೋಹನ ಮಾಳಶೆಟ್ಟಿಇರುವವರೆಗೂ ಅವರ ಬಾಲ ಬಡಿದ. ಈಗ ಅನಿಲ ಮೆಣಸಿನಕಾಯಿ ಬಾಲ ಬಡಿಯುತ್ತಿದ್ದಾನೆ. ಯಳವತ್ತಿಯನ್ನು ನಂಬಿದ ಅನಿಲ ಮೆಣಸಿನಕಾಯಿ ನಿಜಕ್ಕೂ ಗೋವಿಂದ.., ತಾನು ಕಟ್ಟಾಆರ್‌ಎಸ್‌ಎಸ್‌ ಕಾರ್ಯಕರ್ತ ಎಂದು ಹೇಳಿಕೊಳ್ಳುವ ರಾಘವೇಂದ್ರ ಗದಗ ಝೂದಲ್ಲಿರುವ ಪ್ರಾಣಿಗಳಿಗೆ ಮಾಂಸ ಪೂರೈಕೆ ಮಾಡುತ್ತಾರೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಶೀಘ್ರದಲ್ಲಿಯೇ ಇವರ ಕರ್ಮಕಾಂಡ ಬಿಚ್ಚಿಡುವುದಾಗಿ ಮಂಜುನಾಥ ಹೇಳಿದರು.

ನಕ್ಸಲ್ ಆತಂಕವಾದ, ಗಡಿ ಸಮಸ್ಯೆಗೆ ಮೂಲ ಕಾರಣವೇ ಕಾಂಗ್ರೆಸ್‌: ಅರುಣ್ ಸಿಂಗ್

ಅನಿಲ ಮೆಣಸಿನಕಾಯಿ ಸೋಲಿಸಲು ನಗರದ ಬಿಜೆಪಿ ಮುಖಂಡರೇ ಅನೇಕರು ಯೋಜನೆ ರೂಪಿಸುತ್ತಿದ್ದಾರೆ. ಮನೆ ಹಂಚಿಕೆಯಲ್ಲಿ ಕಾಂಗ್ರೆಸ್‌ ತಪ್ಪೆಸಗಿದ್ದರೆ ಲೋಕಾಯುಕ್ತ ತನಿಖೆಗೆ ಒಪ್ಪಿಸಿ. ನಿಮ್ಮದೇ ಸರ್ಕಾರ ಇದೆಯಲ್ಲ.

- ಮಂಜುನಾಥ ಮುಳಗುಂದ, ಕಾಂಗ್ರೆಸ್‌ ಮುಖಂಡ

click me!