ಕಾಂಗ್ರೆಸ್‌ನ ಭಾರತ್ ಜೋಡೋ ಸಂಪೂರ್ಣ ವಿಫಲವಾಗಿದೆ. ಜನ ಸಮರ್ಥನೆ ಸಿಗಲಿಲ್ಲ, ದೇಶವನ್ನು ಮುರಿಯುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಅನ್ನೋದು ದೇಶದ ಜನರಿಗೆ ಗೊತ್ತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದರು.
ಗದಗ (ಜ.28) : ಕಾಂಗ್ರೆಸ್‌ನ ಭಾರತ್ ಜೋಡೋ ಸಂಪೂರ್ಣ ವಿಫಲವಾಗಿದೆ. ಜನ ಸಮರ್ಥನೆ ಸಿಗಲಿಲ್ಲ, ದೇಶವನ್ನು ಮುರಿಯುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಅನ್ನೋದು ದೇಶದ ಜನರಿಗೆ ಗೊತ್ತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
undefined
ಬಿಜೆಪಿ ಸರ್ಕಾರದ ಸಾಧನೆ, ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ: ಅರುಣ್ ಸಿಂಗ್
ನಕ್ಸಲ್ ಆತಂಕವಾದ, ಗಡಿ ಸಮಸ್ಯೆಗೆ ಮೂಲ ಕಾರಣವೇ ಕಾಂಗ್ರೆಸ್, ಇವರು ತುಷ್ಟೀಕರಣ ರಾಜಕಾರಣ ಮಾಡುತ್ತಲೇ ದೇಶವನ್ನು ಹಾಳು ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಪದವನ್ನೇ ಅಶ್ಲೀಲ ಅಂತಾರೆ, ದಿಗ್ವಿಜಯ್ ಸಿಂಗ್ ಸರ್ಜಿಕಲ್ ಸ್ಟೆ್ರೖಕ್ ಬಗ್ಗೆ ಪ್ರಶ್ನಾರ್ಥಕ ಎತ್ತಿದ್ದಾರೆ, ಸೇನೆಯ ಪರಾಕ್ರಮವನ್ನ ಪ್ರಶ್ನಿಸುವುದು ಕಾಂಗ್ರೆಸ್‌ನವರಿಗೆ ರೂಢಿಯಾಗಿದೆ. ರಾಷ್ಟ್ರೀಯ ಏಕತೆ, ಅಖಂಡತೆ ಕಾಂಗ್ರೆಸ್‌ನವರಿಗೆ ಬೇಕಾಗಿಲ್ಲ.
ಭಾರತೀಯ ಜನತಾ ಪಾರ್ಟಿ ದೇಶವನ್ನು ಜೋಡಿಸುವ ಕೆಲಸ ಮಾಡಿದೆ. ಪ್ರಜಾ ಧ್ವನಿಯಾತ್ರೆಗೆ ಜನರ ಸ್ಪಂದನೆ ಸಿಗಲಿಲ್ಲ. ಖುರ್ಚಿ ಖಾಲಿ ಕಂಡು ಬರುತ್ತಿವೆ, ಡಿಕೆಶಿ, ಸಿದ್ದರಾಮಯ್ಯ ಮಧ್ಯದ ಶಕ್ತಿ ಪ್ರದರ್ಶನಕ್ಕೆ ಯಾತ್ರೆ ವೇದಿಕೆಯಾಯ್ತೇ ವಿನಃ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಯಾತ್ರೆ ಮೂಲಕ ಡಿಕೆಶಿ, ಸಿದ್ದು ತಮ್ಮ ನೇತೃತ್ವವನ್ನು ಪ್ರದರ್ಶಿಸೋದಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರ ಕಾಲದಲ್ಲಿ ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಹಗರಣ ನಡೆದಿವೆ, ಪುಷ್ಟೀಕರಣಕ್ಕಾಗಿ ಹಿಂದೂ ಯುವಕರ ಹತ್ಯೆ ಕಾಂಗ್ರೆಸ್ ಸಮಯದಲ್ಲೇ ಆಗಿದೆ. ಅಧಿಕಾರಕ್ಕೆ ಬಂದರೆ ಆಕಾಶದಲ್ಲಿನ ನಕ್ಷತ್ರ ತಂದು ಕೊಡುತ್ತೇವೆ ಅಂತಾ ಕಾಂಗ್ರೆಸ್ ಹೇಳುತ್ತಿದೆ. ಸುಳ್ಳು ಭರವಸೆಗಳ ವ್ಯಾಪಾರವನ್ನು ಕರ್ನಾಟಕ ಕಾಂಗ್ರೆಸ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ರಾಜಸ್ಥಾನ, ಛತ್ತೀಸ್‌ಗಢ, ನೀಡಿದ್ದ ಭರವಸೆಯನ್ನ ಮೊದಲು ಈಡೇರಿಸಲಿ, ಸಾಲ ಮನ್ನಾ ಮಾಡುತ್ತೇವೆ ಅಂದಿದ್ದು, ಈಗಲೂ ಮನ್ನಾ ಆಗಿಲ್ಲ ಎಂದು ಆರೋಪಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಹಲವರಿದ್ದರು.
Assembly Election : ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ಕಳೆಯಿರಿ: ಅರುಣ್ ಸಿಂಗ್
ಕಾಂಗ್ರೆಸ್ಸಿನಿಂದ ಕೀಳುಮಟ್ಟದ ರಾಜಕಾರಣ:
ಸ್ಯಾಂಟ್ರೋ ರವಿ ಆತ್ಮಹತ್ಯೆ ಯತ್ನ ವಿಷಯಕ್ಕೆ ಕಾಂಗ್ರೆಸ್ ಟ್ವೀಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಕೆಲ ತಿಂಗಳಿಂದ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಮಾಡುತ್ತಾ ಬರುತ್ತಿದೆ, ಕಾಂಗ್ರೆಸ್ ಬಳಿ ಯಾವುದೇ ವಿಷಯವಿಲ್ಲ, ಹೀಗಾಗಿ ಇಂಥ ವಿಷಯವನ್ನು ಚರ್ಚೆ ಮಾಡುತ್ತಾರೆ. ಬೊಮ್ಮಾಯಿ ರೈತ ವಿದ್ಯಾನಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಬಡವರಿಗೆ ಹಕ್ಕುಪತ್ರವನ್ನು ದೊರಕಿಸಿಕೊಟ್ಟಿದ್ದಾರೆ. ಕೇಂದ್ರ ನಾಯಕರು 40 ಪರ್ಸೆಂಟ್ ಬಗ್ಗೆ ಮಾತನಾಡಲ್ಲ ಎನ್ನುವ ಕಾಂಗ್ರೆಸ್ ನಾಯಕರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 40 ಪರ್ಸೆಂಟ್ ಆರೋಪ ಕಾಂಗ್ರೆಸ್ ನ ಸೃಷ್ಟಿಅಷ್ಟೇ, ಆರೋಪದಲ್ಲಿ ಸತ್ಯಾಸತ್ಯತೆ ಇಲ್ಲ, ಸತ್ಯತೆ ಇದ್ದರೆ, ತಕ್ಷಣವೇ ಎಫ್‌ಐಆರ್ ಯಾಕೆ ಮಾಡಿಲ್ಲ ಎಂದು ಅರಣು ಸಿಂಗ್ ಪ್ರಶ್ನೆ ಮಾಡಿದರು.