ಸಿಎಂ ಬೊಮ್ಮಾಯಿ ಭೇಟಿ ಬಳಿಕ ರಾಜೀನಾಮೆ ಬಗ್ಗೆ ಸ್ಪಷ್ಟನೆ ಕೊಟ್ಟ ಆನಂದ್ ಸಿಂಗ್

By Suvarna NewsFirst Published Aug 11, 2021, 9:55 PM IST
Highlights

* ಖಾತೆ ಕ್ಯಾತೆ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟ ಆನಂದ್ ಸಿಂಗ್
* ರಾಜೀನಾಮೆ ಬಗ್ಗೆ ಕೊನೆಗೂ ಸ್ಪಷ್ಟನೆ

ಬೆಂಗಳೂರು, (ಆ.11):  ಪ್ರಬಲ ಖಾತೆ ಸಿಕ್ಕಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸಚಿವ ಆನಂದ್ ಸಿಂಗ್  ಇದೀಗ ಕೊಂಚ ಕೂಲ್ ಆಗಿದ್ದಾರೆ.

ತಮ್ಮ ಕ್ಷೇತ್ರವಾದ ವಿಜಯನಗರದಲ್ಲಿ ಶಾಸಕರ ಭವನ ಕೋರ್ಡ್ ತೆರವುಗೊಳಿಸಿ ರಾಜೀನಾಮೆಗೆ ಮುಂದಾಗಿದ್ದು ಆನಂದ್ ಸಿಂಗ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಕರೆದು ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಸಚಿವ ಆನಂದ್ ಸಿಂಗ್ ರಾಜೀನಾಮೆ? ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ

ಸಿಎಂ ಜತೆ ಮಾತುಕತೆಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಆನಂದ್ ಸಿಂಗ್, ತಾವು ರಾಜೀನಾಮೆ ನೀಡುತ್ತೇನೆಂದು ಎಲ್ಲೂ ಹೇಳಿಲ್ಲ. ಸಿಎಂ ಉತ್ತಮ ರೀತಿಯಲ್ಲಿ ನಮಗೆ ಸ್ಪಂದಿಸಿದ್ದಾರೆ. ಖಾತೆ ಬದಲಾವಣೆ ಮಾಡಿರುವಂತೆ ಕೇಳಿರುವುದು ಸತ್ಯ. ಸಿಎಂ ಮಾತಿಗೆ ಗೌರವ ಕೊಟ್ಟು ಕಾಯುತ್ತೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ  ಎಂದು ಸ್ಪಷ್ಟಪಡಿಸಿದರು.

ಪ್ರವಾಸೋದ್ಯಮ ಖಾತೆ ಕೊಟ್ಟಿರುವುದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಆನಂದ್ ಸಿಂಗ ಖಾತೆ ಬದಲಾವಣೆ ಮಾಡಿ ಎಂದು ಬಿಗಿಪಟ್ಟು ಹಿಡಿದಿದ್ದರು. ಅಲ್ಲದೇ ಯಾವುದು ಬೇಡ ಶಾಸಕನಾಗಿಯೇ ಇರುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನ ಬೇಡ ಎಂದು ಹೇಳಿದ್ದರು.

ಇಷ್ಟೇ ಅಲ್ಲದೇ ವಿಜಯನಗರದಲ್ಲಿನ ತಮ್ಮ ಶಾಸಕರ ಭವನದ ಬೋರ್ಡ್ ತೆರವುಗೊಳಿಸಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದರು. ಕೊನೆಗೆ ಬಿಎಸ್‌ವೈ, ಹೆಲಿಕಾಪ್ಟರ್ ಕೊಟ್ಟು ಬೆಂಗಳೂರಿಗೆ ಕರೆಯಿಸಿ ಇದೀಗ ಸಮಾಧಾನಪಡಿಸಿದ್ದಾರೆ.

click me!