ಮಧ್ಯ ಕರ್ನಾಟಕ ಕಾಂಗ್ರೆಸ್‌ಗೆ ‘ಅಮೃತ’ ಈ ಮಹೋತ್ಸವ

By Ravi Nayak  |  First Published Aug 3, 2022, 10:43 AM IST

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಇಂದು (ಆ.3ರಂದು) ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವವು ಹಳೆ ಮೈಸೂರು-ಉತ್ತರ ಕರ್ನಾಟಕ, ಮಲೆನಾಡು, ಬಯಲು ಸೀಮೆ ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರಿಗೆ ಶಕ್ತಿ ತುಂಬುವ ಜೊತೆಗೆ ಅನೇಕರ ರಾಜಕೀಯ ಮರು ಹುಟ್ಟಿಗೂ ವೇದಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.


 ದಾವಣಗೆರೆ (ಅ.3) : ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಇಂದು (ಆ.3ರಂದು) ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವ(Siddaramaiah Amrita Mahotsava)ವು ಹಳೆ ಮೈಸೂರು(Old Mysuru)-ಉತ್ತರ ಕರ್ನಾಟಕ(North Karnataka)-ಮಲೆನಾಡು(NMalenadu)-ಬಯಲು ಸೀಮೆ ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರಿ(Congress Leaders)ಗೆ ಶಕ್ತಿ ತುಂಬುವ ಜೊತೆಗೆ ಅನೇಕರ ರಾಜಕೀಯ(Political) ಮರು ಹುಟ್ಟಿಗೂ ವೇದಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

ಸಿದ್ದರಾಮಯ್ಯ ಕೇವಲ ಅಹಿಂದ ವರ್ಗದ ನಾಯಕನಲ್ಲ, ಎಲ್ಲಾ ವರ್ಗದ ಜನ ಮೆಚ್ಚುವಂತಹ ಆಡಳಿತ ನೀಡಿದ್ದ ವ್ಯಕ್ತಿ. ಈ ಹಿನ್ನೆಲೆಯಲ್ಲಿ ದಾವಣಗೆರೆ(Davanagere), ಚಿತ್ರದುರ್ಗ(Chitradurga), ವಿಜಯನಗರ(Vijayanagar) ಬಳ್ಳಾರಿ(Ballari), ಹಾವೇರಿ(Haverio), ಶಿವಮೊಗ್ಗ(Shivamogga), ಚಿಕ್ಕಮಗಳೂರು(Chikkamagaluru) ಜಿಲ್ಲೆಗಳ ನಾಯಕರು, ಭವಿಷ್ಯದ ನಾಯಕರ ರಾಜಕೀಯ ಜೀವನಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವವು ರಾಜಕೀಯ ದಿಕ್ಸೂಚಿಯಾಗುವುದು ಅಷ್ಟೇ ನಿಶ್ಚಿತ.

Tap to resize

Latest Videos

ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ: ರಾಹುಲ್‌ ಸೂಚನೆ

ಅಮೃತ ಮಹೋತ್ಸವಕ್ಕೆ ಎಐಸಿಸಿ(AICC) ನಾಯಕ ರಾಹುಲ್‌ ಗಾಂಧಿ(Rahul Gandhi), ಕೆ.ಸಿ.ವೇಣುಗೋಪಾಲ(K.C.Venugopala), ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಬಿ.ಕೆ.ಹರಿಪ್ರಸಾದ್‌(B.K.Hariprasad), ಕೆಪಿಸಿಸಿ ಅಧ್ಯಕ್ಷ(KPCC President) ಡಿ.ಕೆ.ಶಿವಕುಮಾರ(D.K.Shivakumar) ಆಗಮಿಸಲಿದ್ದಾರೆ. ಇಡೀ ಸಮಾರಂಭದ ಕೇಂದ್ರ ಬಿಂದುವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಜನ್ಮದಿನಕ್ಕೆ ಶುಭಾರೈಸುವ ಮೂಲಕ ಮಧ್ಯ ಕರ್ನಾಟಕದಿಂ ದಲೇ ಕಾಂಗ್ರೆಸ್‌ ನಾಯಕರು ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸುವ ಸಾಧ್ಯತೆಯೂ ಇಲ್ಲದಿಲ್ಲ.

ವಿಧಾನಸಭೆ ಚುನಾವಣೆಗೆ ಪೂರ್ವದಲ್ಲೇ ಕಾಕತಾಳಿಯವೆಂಬಂತೆ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ಪ್ರದರ್ಶನಕ್ಕೆ ಅಮೃತ ಮಹೋತ್ಸವ ಒಂದು ಅವಕಾಶವಾಗಿ ಮೂಡಿ ಬಂದಿದೆ. ಕಾಂಗ್ರೆ ಸ್ಸಿನ ಬದ್ಧವೈರಿ ಬಿಜೆಪಿ(BJP)ಯ ತಂತ್ರಗಾರಿಕೆಯಿಂದಾಗಿ ಅಧಿಕಾರವನ್ನು ಕಳೆದುಕೊಂಡ ಕಾಂಗ್ರೆಸ್‌ ಅದನ್ನಂತೂ ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ರಂಗೇರುವಂತೆ ಲಕ್ಷಾಂತರ ಕಾರ್ಯಕರ್ತರಲ್ಲಿ ಅಮೃತ ಮಹೋತ್ಸವವು ಅಮೃತವಾಗಿ ಹೊರ ಹೊಮ್ಮಿದರೂ ಅಚ್ಚರಿ ಇಲ್ಲ. ಕಾರ್ಯಕ್ರಮಕ್ಕೆ ವ್ಯಕ್ತವಾಗುತ್ತಿರುವ ಬೆಂಬಲ ಗಮನಿಸಿದರೆ ಕಾಂಗ್ರೆಸ್ಸಿನ ಉತ್ಸಾಹ ನೂರ್ಮಡಿಯಾಗುವುದರಲ್ಲಿ ಅನುಮಾನವೂ ಇಲ್ಲ.

Karnataka News Live updates: ಸಿದ್ದರಾಮೋತ್ಸವಕ್ಕೆ ಸಜ್ಜಾದ ದಾವಣಗೆರೆ, ಕೆರೆಯಂತಾದ ಕಾರ್ಯಕ್ರಮದ ಸ್ಥಳ

ಕಳೆದ ಎರಡು ವಾರಗಳಿಂದಲೂ ರಾಜ್ಯವ್ಯಾಪಿ ಸಿದ್ದರಾಮಯ್ಯ ಅಮೃತ ಮಹೋತ್ಸವದ್ದೆ ಚರ್ಚೆ. ಅದರಲ್ಲೂ ದಾವಣಗೆರೆ ಜಿಲ್ಲಾದ್ಯಂತ ಸಮಾರಂಭಕ್ಕೆ ಪಕ್ಷದ ಮುಖಂಡರು, ಪದಾಧಿಕಾರಿ, ಕಾರ್ಯಕರ್ತರಾದಿಯಾಗಿ ಇದು ತಮ್ಮದೇ ಕಾರ್ಯಕ್ರಮವೆಂಬಂತೆ ಸಿದ್ಧತೆಯಲ್ಲಿ ತೊಡಗಿದ್ದು, ಆ.3ರ ಐತಿಹಾಸಿಕ ಸಮಾರಂಭ ಇದಿರು ನೋಡುತ್ತಿದ್ದಾರೆ. ಅಮೃತ ಮಹೋತ್ಸವ ಹೆಸರಿಗೆ ತಕ್ಕಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪಾಲಿಗೆ ಅಮೃತವಾಗಲಿದೆಯೆಂಬ ವಿಶ್ವಾಸವನ್ನು ಹಳ್ಳಿಯಿಂದ ದಿಲ್ಲಿವರೆಗಿನ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಇಡೀ ಕಾರ್ಯಕ್ರಮದ ಸಿದ್ಧತೆಗೆ ಟೊಂಕ ಕಟ್ಟಿನಿಂತವರ ಉತ್ಸಾಹ ನೋಡುವಂತಿತ್ತು.

ರಾಜಕೀಯ ಸ್ಥಾನಮಾನ ಬಯಸುತ್ತಿರುವ ಆಕಾಂಕ್ಷಿಗಳು, ಭವಿಷ್ಯದ ನಾಯಕರು, ಅವಕಾಶ ವಂಚಿತ ಮುಖಂಡರು, ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು, ಯುವ ಮುಖಂಡರು ತಮ್ಮ ನಾಯಕರ ಕೃಪಾಕಟಾಕ್ಷಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ದಾವಣಗೆರೆ(Davanagere), ಚಿತ್ರದುರ್ಗ(Chitradurga), ಬಳ್ಳಾರಿ(Ballario), ಹಾವೇರಿ(Haveri) ಜಿಲ್ಲೆಗಳಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವುದು, ಶಿವಮೊಗ್ಗದಲ್ಲೂ ಕೈ ಹಿಡಿತ ಬಲಪಡಿಸುವುದು ಕಾಂಗ್ರೆಸ್ಸಿನ ಲೆಕ್ಕಾಚಾರ. ನಾಡಿನ ಮೂಲೆ ಮೂಲೆಯಿಂದಲೂ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಸಿದ್ದರಾಮಯ್ಯ ಅನುಯಾಯಿಗಳು ದಾವಣಗೆರೆಯತ್ತ ಆಗಮಿಸುತ್ತಿರುವುದು ಶ್ರಾವಣ ಮಾಸದಲ್ಲಿ ಕಾಂಗ್ರೆಸ್‌ ಪಾಳೆಯಕ್ಕೆ ಶುಭ ಸೂಚನೆಯಾಗಿ, ಮತ್ತಷ್ಟುಉತ್ಸಾಹ ಹೆಚ್ಚಿಸಿದೆ.

ದಶಕಗಳಿಂದಲೂ ಸಿದ್ದರಾಮಯ್ಯ ಜೊತೆಗೆ ಗುರುತಿಸಿಕೊಂಡ ನಾಯಕರೂ ಸಹ ಕಳೆದ 2-3 ವಾರಗಳಿಂದಲೂ ಬಿಡುವಿಲ್ಲದೇ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದು, ಆ.3ರಂದು ನಡೆಯುವ ಯಶಸ್ವಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ತವಕದಲ್ಲಿದ್ದಾರೆ. ಅಮೃತ ಮಹೋತ್ಸವದ ಬಗ್ಗೆ ಜನರಿಂದ ವ್ಯಕ್ತವಾಗುತ್ತಿರುವ ಕುತೂಹಲ ಸ್ವತಃ ಸಿದ್ದರಾಮಯ್ಯನವರಿಗೂ ಪುಳಕಿತರನ್ನಾಗಿಸಿದೆ. ತಮ್ಮ ತಮ್ಮ ನಾಯಕರಿಗೆ ಮುಖಂಡರು ಕಾರ್ಯಕ್ರಮದ ಸರ್ವ ಸಿದ್ಥತೆಗಳ ಬಗ್ಗೆ ಇಂಚಿಂಚು ಮಾಹಿತಿ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳು ವೀಡಿಯೋ ಕಾಲ್‌ ಮಾಡಿ, ಫೋಟೋ ತೆಗೆದುಕೊಂಡು ಸೋಷಿಯಲ್‌ ಮೀಡಿಯಾಗಳಲ್ಲೂ ಹರಿ ಬಿಡುತ್ತಿದ್ದಾರೆ. ಇಡೀ ಊರು, ಜಿಲ್ಲೆ ಸಿದ್ದರಾಮ ಯ್ಯನವರ ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ಗಳಿಂದ ರಾರಾಜಿಸುತ್ತಿದೆ. ಪ್ರಮುಖ ವೃತ್ತ, ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ರಸ್ತೆಗಳಲ್ಲಿ ಫ್ಲೆಕ್ಸ್‌ಗಳು ಗಮನ ಸೆಳೆಯುತ್ತಿವೆ.

ಒಟ್ಟಾರೆ, ಬಿಜೆಪಿ ತಂತ್ರಗಾರಿಕೆಯಿಂದ ವಿಪಕ್ಷ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್‌ ಪಕ್ಷವು ಮೈಕೊಡವಿ, ಮತ್ತೆ ಚುನಾವಣೆಯನ್ನು ಎದುರಿಸಲು ದಾವಣಗೆರೆಯಲ್ಲಿ ಶಕ್ತಿ ತುಂಬುವ ಕೆಲಸವಂತೂ ಆಗಲಿದೆ. ಈಗಾಗಲೇ ಎಲ್ಲಾ ನಾಯಕರು ಇತ್ತ ಕಡೆ ಬರುತ್ತಿದ್ದು, ರಾಹುಲ್‌ ಗಾಂಧಿ, ಖರ್ಗೆ, ವೇಣುಗೋಪಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಏನು ಸಂದೇಶ ನೀಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅಲ್ಲದೇ, ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಹುಲಿಯಾ ಜೊತೆಗೆ ಮತ್ತಷ್ಟುಹೊಸ ಘೋಷಣೆ, ಬಿರುದುಗಳನ್ನು ಸಿದ್ದರಾಮಯ್ಯ ಅಭಿಮಾನಿಗಳು ದಯಪಾಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

click me!