ಕಾಂಗ್ರೆಸ್ಸಲ್ಲಿ ನಕಲಿ ಸದಸ್ಯತ್ವ ನೋಂದಣಿ ಮಾಡಿಸಿದರೆ ಕಾರ‍್ಯಕರ್ತರು ಕಪ್ಪುಪಟ್ಟಿಗೆ

By Contributor AsianetFirst Published Apr 4, 2022, 6:32 AM IST
Highlights

* ಪಕ್ಷದ ಮುಖಂಡರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

* ನೈಜ ಸದಸ್ಯತ್ವ ನೋಂದಣಿ ಮಾಡಿಸಿ’ ಎಂದು ಖರ್ಗೆ ಹೇಳಿದ ಬೆನ್ನಲ್ಲೇ ಸೂಚನೆ

ಬೆಂಗಳೂರು(ಏ.04): ಕಾಂಗ್ರೆಸ್‌ ಪಕ್ಷದ ಸದಸ್ಯತ್ವವನ್ನು ಡಿಜಿಟಲ್‌ ಮೂಲಕ ನೋಂದಣಿ ಮಾಡುತ್ತಿರುವ ಕಾರ್ಯಕರ್ತರು ನೈಜ ಸದಸ್ಯತ್ವವನ್ನು ಮಾತ್ರ ಮಾಡಬೇಕು. ಪರಿಶೀಲನೆ ವೇಳೆ ನಕಲಿ ಸದಸ್ಯತ್ವ ಕಂಡು ಬಂದರೆ ಅಂತಹ ಸದಸ್ಯತ್ವವನ್ನು ರದ್ದುಪಡಿಸುವ ಜೊತೆಗೆ ನೋಂದಣಿ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭಾನುವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ನಮಗೆ ಪ್ರಾಮಾಣಿಕ ಸದಸ್ಯರು ಮುಖ್ಯವೇ ಹೊರತು ದೊಡ್ಡ ಸಂಖ್ಯೆಯಲ್ಲ. ಪ್ರಸ್ತುತ ಏ.14 ರವರೆಗೆ ಸದಸ್ಯತ್ವ ನೋಂದಣಿ ವಿಸ್ತರಣೆಯಾಗಿದೆ. ಒಂದು ದೂರವಾಣಿ ಸಂಖ್ಯೆಗೆ ಆ ಕುಟುಂಬಕ್ಕೆ ಸೇರಿದ ಐದು ಮಂದಿಯನ್ನು ಸದಸ್ಯರಾಗಿ ನೋಂದಣಿ ಮಾಡಲು ಮಾತ್ರ ಅವಕಾಶ ಇರುತ್ತದೆ. ದೂರವಾಣಿ ಸಂಖ್ಯೆಗೆ ಬೇರೆ ಕುಟುಂಬ ಸದಸ್ಯರನ್ನು ನೋಂದಣಿ ಮಾಡಿದರೆ ಮತದಾರರ ಪಟ್ಟಿಪರಿಶೀಲನೆ ವೇಳೆ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದರು.

Latest Videos

ಅಷ್ಟೇ ಅಲ್ಲದೆ ನೈಜ ಸದಸ್ಯತ್ವ ನೋಂದಣಿ ಆಗದಿರುವ ಬಗ್ಗೆ ಆಕ್ಷೇಪಣೆಗಳನ್ನೂ ಸಹ ಆಹ್ವಾನಿಸಲಾಗುವುದು. ಒಂದು ಕುಟುಂಬ ದೂರವಾಣಿಗೆ ಬೇರೆ ಕುಟುಂಬದವರಿಗೆ ಸದಸ್ಯತ್ವ ನೀಡಿದ್ದರೆ ಅಂತಹವುಗಳನ್ನು ರದ್ದುಪಡಿಸಲಾಗುವುದು. ಮತದಾರರ ಪಟ್ಟಿಹಾಗೂ ಕಾಂಗ್ರೆಸ್‌ ಸದಸ್ಯತ್ವ ಪರಿಶೀಲನೆ ವೇಳೆ ಇದು ಸುಲಭವಾಗಿ ಪತ್ತೆಯಾಗಲಿದೆ ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ನೈಜ ಸದಸ್ಯತ್ವ ನೋಂದಣಿಗೆ ಆದ್ಯತೆ ನೀಡಿ ಎಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ನಾಯಕ ರಾಹುಲ್‌ ಗಾಂಧಿ ಎದುರೇ ಹೇಳಿದ್ದರು. ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಈ ಸೂಚನೆ ನೀಡಿರುವುದು ಗಮನಾರ್ಹ.

1 ಫೋನ್‌ ನಂಬರ್‌ಗೆ 5 ಸದಸ್ಯತ್ವ ಮಾತ್ರ

ಒಂದು ದೂರವಾಣಿ ಸಂಖ್ಯೆಗೆ ಆ ಕುಟುಂಬಕ್ಕೆ ಸೇರಿದ ಐದು ಮಂದಿಯನ್ನು ಸದಸ್ಯರಾಗಿ ನೋಂದಣಿ ಮಾಡಲು ಮಾತ್ರ ಅವಕಾಶ ಇರುತ್ತದೆ. ದೂರವಾಣಿ ಸಂಖ್ಯೆಗೆ ಬೇರೆ ಕುಟುಂಬದ ಸದಸ್ಯರನ್ನು ನೋಂದಣಿ ಮಾಡಿದರೆ ಮತದಾರರ ಪಟ್ಟಿಪರಿಶೀಲನೆ ವೇಳೆ ಸಿಕ್ಕಿಬೀಳುತ್ತೀರಿ.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

 

click me!