ಕರ್ನಾಟಕದ ರಾಜಕೀಯ ಗೆಸ್ಟ್ ಹೌಸ್ ಇದೀಗ ಕೊರೋನಾ ಕೇರ್ ಸೆಂಟರ್ ಆಗಿ ಕಾರ್ಯ ನಿರ್ವಹಿಸಲಿದೆ. ಹಾಗಾದ್ರೆ ಇಲ್ಲಿ ಯಾರಿಗೆಲ್ಲಾ ಚಿಕಿತ್ಸೆ ನೀಡಲಾಗುತ್ತದೆ?
ಬೆಂಗಳೂರು, (ಜೂನ್.24): ರಾಜಕೀಯ ವಿದ್ಯಾಮನಗಳ ಬಗ್ಗೆ ಚರ್ಚೆ ಮಾಡುವ ಕೇಂದ್ರ ಸ್ಥಾನವಾಗಿದ್ದ ಕೆಕೆ ಗೆಸ್ಟ್ ಹೌಸ್( ಕುಮಾರ ಕೃಪ ಅತಿಥಿ ಗೃಹ) ಕೋವಿಡ್19 ಕೇರ್ ಸೆಂಟರ್ ಆಗಿ ಬದಲಾಗಲಿದೆ.
ಕೆ.ಕೆ ಗೆಸ್ಟ್ ಹೌಸ್‌ನ ಒಂದು ನಿಗದಿತ ವಿಭಾಗದಲ್ಲಿ 100 ಕೊಠಡಿಗಳನ್ನ ಕೋವಿಡ್ ಕೇರ್ ಸೆಂಟರ್‌ನಂತೆ ಕಾರ್ಯ ನಿರ್ವಹಿಸಲು ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
ಈ ಕೊಠಡಿಗಳಲ್ಲಿ ಸಂಸದರು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸರ್ಕಾರದ ಕಾರ್ಯದರ್ಶಿ ಶ್ರೇಣಿಗಿಂತ ಮೇಲಿನ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಕೊರೋನಾ ನಿಯಂತ್ರಣಕ್ಕೆ ಚೆನ್ನೈ ಮಾಸ್ಟರ್ ಪ್ಲಾನ್; ಬೆಂಗಳೂರು ಕಲಿಬೇಕಾದ್ದು ಬಹಳ ಇದೆ!
ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಕೋವಿಡ್19 ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸರ್ಕಾರ, ಈಗಾಗಲೇ ಹಲವು ಕೊರೋನಾ ಕೇರ್ ಸೆಂಟರ್‌ಗಳು, ಕೋವಿಡ್ ಹೆಲ್ತ್ ಸೆಂಟರ್ ಹಾಗೂ ನಿಗದಿತ ಆಸ್ಪತ್ರೆಗಳನ್ನ ಸ್ಥಾಪಿಸಿ ಕಾರ್ಯನಿರ್ವಹಿಸಲಾಗುತ್ತಿದೆ.
ಈಗಿರುವ ಸೋಕಿನ ಪ್ರಸರಣ ಮೇಲೆ ಮುಂಬರುವ ದಿನಗಳಲ್ಲಿ ಕೊರೋನಾ ಸೊಂಕಿನ ಕೇಸ್ ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ಮಧ್ಯೆ ಕಾರ್ಯನಿರ್ವಹಿಸುವ ಚುನಾಯಿತ ಪ್ರತಿನಿಧಿ, ಮಂತ್ರಿ, ಸರ್ಕಾರ ಉನ್ನತ ಮತ್ತು ಹಿರಿಯ ಶ್ರೇಣಿಯ ಅಧಿಕಾರಿಗಳಿಗೂ ಸಹ ಸೋಂಕು ತಗುಲುತ್ತಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇವರುಗಳ ಚಿಕಿತ್ಸೆಗಾಗಿ ಕುಮಾರ ಕೃಪ ಅತಿಥಿ ಗೃಹದ ಒಂದು ಭಾಗವನ್ನು ಕೋವಿಡ್ ಕೇರ್ ಸೆಂಟರ್ ಗುರುತಿಸಿ ಈ ಅಧಿಸೂಚನೆಯನ್ನ ಹೊರಡಿಸಲಾಗಿದೆ.
One wing of Kumara Krupa guest house will now serve as Covid Care Centre.. pic.twitter.com/1GF5JruNKd
— Dr Sudhakar K (@mla_sudhakar)