ಅಮಿತ್ ಶಾ ಚಾಣಕ್ಯ ಅಂತ ನೀವು ಸುಮ್ನೆ ಹೇಳ್ತೀರಿ. ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬರ್ತಾರೆ ಅಷ್ಟೇ.. ಅವರಿಗಿರುವ ಅಧಿಕಾರ ನನಗೆ ಕೊಡಿ, ನಾನೂ ಚಾಣಕ್ಯ ಆಗ್ತೀನಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ (ಏ.01): ಕೇಂದ್ರ ಸಚಿವ, ಬಿಜೆಪಿಯ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಬರ್ತಿದ್ದಾರೆ ಎಂದು ನೀವೇ ಹೇಳ್ತಿದ್ದೀರಿ. ಆದರೆ, ಅಮಿತ್ ಶಾ ಯಾವ ಚಾಣಕ್ಯನು ಇಲ್ಲ, ಎನೂ ಇಲ್ಲ. ಅವರಿಗಿರುವ ಅಧಿಕಾರವನ್ನು ನನ್ನ ಕೈಗೆ ಕೊಡ್ರಿ ನಾನೂ ಚಾಣಕ್ಯ ಆಗ್ತೀನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಟೀಕೆ ಮಾಡಿದರು.
ರಾಜ್ಯಕ್ಕೆ ಅಮೀತ ಶಾ ಆಗಮನ ಕುರಿತು ಕಲಬುರಗಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೀತ್ ಶಾ ಚಾಣಕ್ಯ ಅಂತ ಸುಮ್ನೆ ನೀವೇ ಕರಿತಿರಾ. ಯಾವ ಚಾಣಕ್ಯನು ಇಲ್ಲ, ಎನೂ ಇಲ್ಲ. ನಮ್ಮ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬರ್ತಾರೆ. ಜೊತೆಗೆ ಸಿಬಿಐ, ಇಡಿ ಮುಂದಿಟ್ಟುಕೊಂಡು ಚುನಾವಣೆ ಮಾಡ್ತಾ ಇದಾರೆ. ಅದೇ ನನ್ನ ಕೈಯಲ್ಲಿ ಕೊಡ್ರಿ ನಾನು ಚಾಣಕ್ಯ ಆಗ್ತೀನಿ. ನಮ್ಮ ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ ಯಾವಾಗ ಪರಿಹಾರ ಕೊಡ್ತೀರಾ? 18 ಸಾವಿರ ಕೋಟಿ ನಮಗೆ ಬರುವ ತೆರಿಗೆ ಹಣ ಯಾವಾಗ ಕೊಡ್ತೀರಾ? ಹಳೆ ಬಿಜೆಪಿ ಅವರು ತಮಗೆ ಗೋ ಬ್ಯಾಕ್ ಶಾ ಅನ್ನಬಹುದು. ಎಚ್ಚರಿಕೆಯಿಂದ ರಣತಂತ್ರ ರೂಪಿಸಿ ಎಂದು ವಾಗ್ದಾಳಿ ಮಾಡಿದರು.
ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ-ಶೆಟ್ಟರ್; ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದ ಹೆಬ್ಬಾಳ್ಕರ್
ನಮ್ಮ ರಾಜ್ಯದಲ್ಲಿ ಹಳೆ ಬಿಜೆಪಿ ಮತ್ತು ಹೊಸ ಬಿಜೆಪಿ ಮದ್ಯ ತಿಕ್ಕಾಟ ನಡೀತಾ ಇದೆ. ರಾಜ್ಯದಲ್ಲಿ ಅಮಿತ್ ಶಾ ಬರೋದ್ರಿಂದ ಯಾವುದೇ ಇಂಪ್ಯಾಕ್ಟ್ ಆಗಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಮಿತ್ ಶಾ ರಣತಂತ್ರ ರೂಪಿಸಿದ್ದರಿಂದಲೇ ಕಾಂಗ್ರೆಸ್ 135 ಸ್ಥಾನ ಬಂದಿದೆ. ಸುಮ್ನೇ ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ. ರಾಜ್ಯದ 25 ಜನ ಸಂಸದರು ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಈ ಬಾರಿ ಅವರಿಗೆ ರಾಜ್ಯದ ಜನ ಗೇಟ್ ಪಾಸ್ ಕೊಡ್ತಾರೆ ಎಂದು ಹೇಳಿದರು.
ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ನಿಮ್ಮ ಕೈಯಲ್ಲಿ: ಪ್ರಿಯಾಂಕ್ ಖರ್ಗೆ
ಹುಲಿಯನ್ನೇ ಸೊಲಿಸಿದ್ದೇವೆ, ಇಲಿ ಯಾವ ಲೆಕ್ಕ ಎಂದು ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ. ಆದರೆ, ಮಾಲಿಕಯ್ಯ ಗುತ್ತೇದಾರ್ ಎಷ್ಟು ಬಾರಿ ಸೋತಿದ್ದಾರೆ? ಈ ಬಾರಿ ಅವರು ಶಾಸಕ ಇದ್ದಾರಾ? ಎರಡು ಬಾರಿ ಹುಲಿ ಯಾರು? ಇಲಿ ಯಾರು? ಅಂತ ಅಫಜಲಪುರ ಜನ ತೋರಿಸಿ ಕೊಟ್ಟಿದ್ದಾರೆ. ಅವರು ವಯಸ್ಸು ಅವರ ಹಿರಿತನಕ್ಕೆ ಗೌರವ ಕೊಡ್ತಾ ಇದ್ದೆವು. ಎರಡು ಬಾರಿ ಸೋತ್ರಲ್ಲ ಅಂದ್ರೆ ಅವರು ಇಲಿ ಕಿಂತಲು ಕಡೆನಾ? ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷರಾಗಿ ಅಫಜಲಪುರದಲ್ಲಿ 3ನೇ ಸ್ಥಾನಕ್ಕೆ ಹೋದರಲ್ಲ. ಜನ ಕೊಟ್ಟ ತೀರ್ಪಿಗೆ ಗೌರವ ಕೊಡಬೇಕು. ಹಿರಿಯರಾಗಿ ಮತದಾರರು ಕೊಟ್ಟ ತೀರ್ಪಿನ ಬಗ್ಗೆ ಹೀಗೆ ಮತದಾಡೋದೂ ಸರಿ ಅಲ್ಲ. ಅವರು ಹೀಗೆ ಮಾತಾಡಿದ್ರೆ ನಮಗೂ ಅದೇ ಭಾಷೆಯಲ್ಲಿ ಮಾತನಾಡಲು ಬರುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.