ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ-ಶೆಟ್ಟರ್; ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದ ಹೆಬ್ಬಾಳ್ಕರ್

By Sathish Kumar KHFirst Published Apr 1, 2024, 1:33 PM IST
Highlights

ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ, ಎಲ್ಲಿ ನಿಮ್ಮ ಮನೆ ಅಡ್ರೆಸ್ ಕೊಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಳಿದರು.

ಬೆಳಗಾವಿ  (ಏ.01): ಬೆಳಗಾವಿಯಲ್ಲಿ ಈಗ ಲೋಕಲ್ ವರ್ಸರ್ ಹೊರಗಿನವರು ಎಂಬ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ನನ್ನ ಜನ್ಮಭೂಮಿ ಆಗಿರಬಹುದು. ಆದರೆ, ನನ್ನ ಕರ್ಮಭೂಮಿ ಬೆಳಗಾವಿ. ಇದು ನಂಗೆ ಪಕ್ಕಾ ಲೋಕಲ್ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹೊರಗಿನವರಿಗೆ ಬಿಜೆಪಿ ಮಣೆ ಹಾಕಿದೆ. ಅವರು ಕರ್ಮಭೂಮಿ ಬೆಳಗಾವಿ ಆಗಿದ್ದರೆ, ಅವರ ಮನೆಯ ಅಡ್ರೆಸ್‌ ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್ ಅವರು ಅಭ್ಯರ್ಥಿಯಾಗಿದ್ದಾರೆ. ಇಬ್ಬರ ನಡುವೆ ಸ್ಥಳೀಯರು ಮತ್ತು ಹೊರಗಿನವರು ಎಂಬ ಟಾಕ್ ವಾರ್ ಶುರುವಾಗಿದೆ. ಇನ್ನು ಜಗದೀಶ್ ಶೆಟ್ಟರ್ ತಮ್ಮ ವರ್ಚಸ್ಸಿನಿಂದ ಮಾತನಾಡಿದರೆ, ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ಹಾಗೂ ನಾಯಕರಿಗೆ ಟಾಂಗ್ ನೀಡುತ್ತಿದ್ದಾರೆ.

ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸೋದೆ ನಮ್ಮ ಗುರಿ: ದಿಂಗಾಲೇಶ್ವರ ಶ್ರೀ ಘೋಷಣೆ

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೊರಗಿನವರು ಎಂದು ಕಾಂಗ್ರೆಸ್ ಟೀಕೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧ ನಾವು ಪಕ್ಕಾ ಲೋಕಲ್‌ ಎಂಬ ಅಸ್ತ್ರ ಪ್ರಯೋಗಿಸಿ ಸಚಿವೆ ‌ಲಕ್ಷ್ಮಿ ಹೆಬ್ಬಾಳ್ಕರ್ ಟೀಕೆ ಮುಂದುವರೆಸಿದ್ದಾರೆ. ಇನ್ನು ಕಾಂಗ್ರೆಸ್ ಟೀಕೆಗೆ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೀರುಗೇಟು ನೀಡಿದ್ದಾರೆ. ಹುಬ್ಬಳ್ಳಿ ನನ್ನ ಜನ್ಮ ಭೂಮಿ ಆಗಿರಬಹುದು. ಆದರೆ, ಬೆಳಗಾವಿ ನನ್ನ ಕರ್ಮ ಭೂಮಿ ಎಂದು ತಿರುಗೇಟು ಕೊಟ್ಟಿದ್ದಾರೆ. ಮುಂದುವರೆದು, ಬೆಳಗಾವಿ ಜಿಲ್ಲೆ ನನಗೆ ಹೊಸದೆನಲ್ಲ, ಎರಡು ಸಲ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವೆ. ಬೆಳಗಾವಿಯಲ್ಲೇ ನಾನು ಮನೆ ಮಾಡ್ತಿನಿ ಎಂದು ಶೆಟ್ಟರ್ ಕಾಂಗ್ರೆಸ್ ಟಾಂಗ್ ನೀಡಿದರು. 

ಶೆಟ್ಟರ್ ಅವರು ಬೆಳಗಾವಿಯಲ್ಲಿ ಮನೆ ಮಾಡುತ್ತೇನೆ ಎಂದಿದ್ದಕ್ಕೆ ಪ್ರತಿ ಉತ್ತರ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇವರು 6 ಬಾರಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಈಗ ಬೆಳಗಾವಿ ಕರ್ಮ ಭೂಮಿ ಅಂದರೆ ಬೆಳಗಾವಿ ಜನರು ಇದನ್ನು ನಂಬಲು ಮುಗ್ಧರಲ್ಲ. ಬೆಳಗಾವಿ ಕರ್ಮಭೂಮಿ ಎನ್ನುವ ಶೆಟ್ಟರ್ ಮೊದಲು ತಾವು ಇಲ್ಲಿ ವಾಸವಿರುವ ಮನೆಯ ಅಡ್ರೆಸ್ ಹೇಳಲಿ. ಮೊದಲು‌ ಮನೆ ವಿಳಾಸ ಹೇಳಿ, ನಂತರ ಕರ್ಮ ಭೂಮಿ ಯಾವುದೆಂದು ಹೇಳುವಿರಿ ಎಂದು ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆ 2024: ಕರ್ನಾಟಕದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ...

ಮೋದಿ ಅಲೆ ಬಗ್ಗೆ ಬಿಜೆಪಿ ಪ್ರಚಾರ ವಿಚಾರದ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 10 ವರ್ಷಗಳಲ್ಲಿ ಈ ಭಾಗದ ಸಂಸದರು ಏನ್ ಮಾಡಿದ್ರು, ಜವಾಬ್ದಾರಿ ಏನ್ ತೋರಿಸಿದ್ದಾರೆ. ಮೋದಿ ಹೆಸರಿನಲ್ಲಿ ಗೆದ್ದು ಏನ್ ಮಾಡಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ಮೋದಿ ಮಾತನಾಡಲಿಲ್ಲ. ಪರಿಹಾರದ ಹಣ ಬಿಡುಗಡೆ ಮಾಡಿಸಿದ್ರಾ? ಈಗ ಬರ ಬಂದಿದೆ ರೈತರಿಗೆ ಪರಿಹಾರ ಕೊಡಿ ಅಂತ ಹೇಳಿದ್ರಾ? ಮೂಕರಾಗಿ, ಕಿವುಡರಾಗಿ, ಕುರುಡರಾಗಿ ಇರೋ ಸಂಸದರು ನಮಗೆ ಬೇಕಾ? ಜನರಿಗೆ ತಿಳುವಳಿಕೆ ಬಂದಿದೆ. ಸ್ಥಳೀಯ ಸಂಸದರಿಗೆ ಇಚ್ಛಾಶಕ್ತಿ ಬೇಕು,‌ ಜನ ಎಲ್ಲ ನೋಡುತ್ತಿದ್ದಾರೆ‌.ಕಾಂಗ್ರೆಸ್ ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿ ಬಗ್ಗೆ ತುಲನೆ ಮಾಡುತ್ತಿದ್ದಾರೆ‌. 6 ಸಲ ಹುಬ್ಬಳ್ಳಿಯಲ್ಲಿ ಶಾಸಕರಾಗಿ ಗೆದ್ದು ಬಂದಿದ್ದಾರೆ‌. ಈಗ ಬೆಳಗಾವಿಗೆ ಬಂದು ಕರ್ಮ ಭೂಮಿ ಅಂದ್ರೆ ಇಲ್ಲಿ ಜನ ಮುಗ್ಧ ಎಂದರೇ ನಂಬುತ್ತಾರಾ? ಮೊದಲು ಶೆಟ್ಟರ್ ಮನೆ ವಿಳಾಸ ಹೇಳಿಲಿ? ಆಮೇಲೆ ಕರ್ಮ ಭೂಮಿ ಬಗ್ಗೆ ಹೇಳಲಿ ಎಂದು ಹೇಳಿದರು.

click me!