ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ? ಸಂಶಯ ಮೂಡಿಸಿದೆ ಬಿಎಸ್‌ವೈ ನಡೆ!

Published : Jul 19, 2021, 11:11 AM IST
ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ? ಸಂಶಯ ಮೂಡಿಸಿದೆ ಬಿಎಸ್‌ವೈ ನಡೆ!

ಸಾರಾಂಶ

* ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ನಿಶ್ಚಿತವಾ...? * ಯಡಿಯೂರಪ್ಪ ಅವರ ಸೂಚನೆಯೊಂದು ಅಂತಹದೊಂದು ಸಂಶಯಕ್ಕೆ ಮುನ್ನುಡಿ....? * ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜನೆ

ಬೆಂಗಳೂರು(ಜು.19): ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ವಿಚಾರ ಕಾವು ಪಡೆದಿದೆ. ಬಿಎಸ್‌ವೈ ದೆಹಲಿಯಿಂದ ಮರಳಿದ ಬಳಿಕ ಈ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ರದ್ದು ಎನ್ನಲಾದ ಆಡಿಯೋ ಕೂಡಾ ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿದೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿ. ಎಸ್‌ ಯಡಿಯೂರಪ್ಪರವರು ಖುದ್ದು ತಾವೇ ನೀಡಿದ ಸೂಚನೆಯೊಂದು ಈ ಸಂಧಶಯಕ್ಕೆ ಮುನ್ನುಡಿ ಹಾಕಿದೆ.

ಹೌದು ನಾಯಕತ್ವದ ಬದಲಾವಣೆ ಚರ್ಚೆಯ ಮಧ್ಯೆಯೇ ಸಿಎಂ ಬಿ. ಎಸ್. ಯಡಿಯೂರಪ್ಪ ಸಚಿವಾಲಯದ ಸಿಬ್ಬಂದಿಗಳಿಗೆ ಜುಲೈ 15ರಂದು ಭೋಜನ ಕೂಟ ಆಯೋಜಿಸಿದ್ದಾರೆ. ಅಲ್ಲದೇ ಭೋಜನಕೂಟಕ್ಕೆ ಆಗಮಿಸುವಂತೆ ಸಿಎಂ ಕಚೇರಿ ಸಿಬ್ಬಂದಿಗಳಿಗೆ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ಏಕಾಎಕಿ ಯಡಿಯೂರಪ್ಪ ನೀಡಿರುವ ಈ ಆಹ್ವಾನ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಾರಾ? ಎಂಬ ಅನುಮಾನ ಮೂಡಿಸಿದೆ.

ಸಹಜವಾಗಿ  ಅವಧಿ ಮುಗಿದ ಬಳಿಕ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜನೆ ಮಾಡೋದು ಸಂಪ್ರದಾಯ. ಆದರೆ ಅವಧಿಗೆ ಮುನ್ನವೇ ಭೋಜನ ಕೂಟವನ್ನು ಆಯೋಹಿಸಿರುವ ಸಿಎಂ‌ ಕ್ರಮ, ಅವಧಿಗೆ ಮುನ್ನವೇ ಸಿಎಂ‌ ಬದಲಾವಣೆ ಆಗ್ತಾರಾ ಎಂಬ ಸಂಶಯ ಮೂಡಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!