ರಾಜಕೀಯ ನಿವೃತ್ತಿ ಬಯಸಿದರೂ, ಹೈಕಮಾಂಡ್‌ ಬಿಟ್ಟಿಲ್ಲ: ಸಚಿವ ಎಂಟಿಬಿ ನಾಗರಾಜ್‌

By Kannadaprabha News  |  First Published Apr 15, 2023, 8:42 PM IST

ನಾನು ಈ ಬಾರಿ ಚುನಾವಣೆಗೆ ಸ್ಪ​ರ್ಧಿಸೋದು ಬೇಡ, ರಾಜಕೀಯ ನಿವೃತ್ತಿ ಪಡೆಯೋಣ ಎಂದು ನಿರ್ಧಾರ ಮಾಡಿ ಹೈಕಮಾಂಡ್‌ಗೆ ಪತ್ರ ಬರೆದಿದ್ದರೂ, ಹೈಕಮಾಂಡ್‌ ನನಗೆ ಟಿಕೆಟ್‌ ಕೊಟ್ಟು ಚುನಾವಣೆಗೆ ಸ್ಪ​ರ್ಧಿಸಲು ಹೇಳಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. 


ಹೊಸಕೋಟೆ (ಏ.15): ನಾನು ಈ ಬಾರಿ ಚುನಾವಣೆಗೆ ಸ್ಪ​ರ್ಧಿಸೋದು ಬೇಡ, ರಾಜಕೀಯ ನಿವೃತ್ತಿ ಪಡೆಯೋಣ ಎಂದು ನಿರ್ಧಾರ ಮಾಡಿ ಹೈಕಮಾಂಡ್‌ಗೆ ಪತ್ರ ಬರೆದಿದ್ದರೂ, ಹೈಕಮಾಂಡ್‌ ನನಗೆ ಟಿಕೆಟ್‌ ಕೊಟ್ಟು ಚುನಾವಣೆಗೆ ಸ್ಪ​ರ್ಧಿಸಲು ಹೇಳಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ದೇವಮೂಲೆ ದಳಸಗೆರೆ ಗ್ರಾಮದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಆರು ತಿಂಗಳ ಹಿಂದೆಯೇ ರಾಜಕೀಯ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೆ. ಈಗಾಗಲೇ 6 ಚುನಾವಣೆಗಳನ್ನು ಎದುರಿಸಿದ್ದು ಶಾಸಕ ಹಾಗೂ ಮಂತ್ರಿಯನ್ನಾಗಿ ಮಾಡಿದ್ದೀರಿ. 

19 ವರ್ಷ ನಾನು ಹೊಸಕೋಟೆ ಮತದಾರರ ಜೊತೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದೇನೆ. ಈ ಬಗ್ಗೆ ಹೈಕಮಾಂಡ್‌ಗೂ ತಿಳಿಸಿದ್ದೆ. ಇದಕ್ಕೆ ರಾಜ್ಯ ನಾಯಕರು ಒಪ್ಪಿದ್ದರು. ಆದರೆ ಹೈಕಮಾಂಡ್‌ ಈ ಬಾರಿ ಸ್ಪ​ರ್ಧಿಸಲು ನನಗೆ ಬಿ.ಫಾರಂ ನೀಡಿದೆ. ಇದು ನನ್ನ ಕೊನೆಯ ಚುನಾವಣೆ. ಮತದಾರರು ಈ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ. ಕ್ಷೇತ್ರಕ್ಕೆ ಅಗತ್ಯ ಮೆಟ್ರೋ, ಕಾವೇರಿ ನೀರು ತರುತ್ತೇನೆ. ಮುಂದೆ ಯಾವಾಗ ಚುನಾವಣೆ ಬಂದ್ರು ನಿತೀಶ್‌ ಪುರುಷೋತ್ತಮ್‌ ಅಭ್ಯರ್ಥಿಯಾಗ್ತಾರೆ. ನಾನು ಮತ್ತು ನನ್ನ ಮಗ ಸದಾ ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ತಿಳಿಸಿದರು.

Latest Videos

undefined

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್‌

ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌ ಮಾತನಾಡಿ, ಎಂಟಿಬಿ ರಾಜೇಶ್‌ ಅನ್ನೋ ಹೆಸರನ್ನ ಹುಟ್ಟು ಹಾಕಿರುವುದು ನನ್ನ ತಂದೆ. ತಂದೆಯ ಮಾತಿಗೆ ಬೆಲೆ ಕೊಡುವೆ. ತಂದೆ ಹಾಗೂ ಪಕ್ಷದ ಮಾತನ್ನು ದಿಕ್ಕರಿಸಿ ಸ್ವಾಭಿಮಾನಿ ಎಂದು ಚುನಾವಣೆ ಎದುರಿಸಿ, ನಂತರ ಸ್ವಾಭಿಮಾನ ಮಾರಾಟ ಮಾಡಿಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಕೊಂಡವರು ಯಾರೆಂಬುದು ತಾಲೂಕಿನ ಜನತೆಗೆಲ್ಲ ತಿಳಿದಿದೆ. ನನಗೆ ಯಾವುದೇ ರೀತಿಯ ಬೇಸರವಿಲ್ಲ. ನನಗೆ ಮುಂದಿನ ದಿನಗಳಲ್ಲಿ ತಮ್ಮ ಸೇವೆ ಮಾಡಲು ಅವಕಾಶವಿದೆ ಎಂದರು.

ಬಮುಲ್‌ ನಿರ್ದೇಶಕ ದೊಡ್ಡಹುಲ್ಲೂರು ಸಿ. ಮಂಜುನಾಥ್‌, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್‌, ಟೌನ್‌ ಅಧ್ಯಕ್ಷ ಸಿ.ಜಯರಾಜ್‌, ಮುಖಂಡರಾದ ಲಾಯರ್‌ ಮಂಜುನಾಥ್‌, ಚನ್ನಸಂದ್ರ ಸಿ.ನಾಗರಾಜ್‌, ಜನಾರ್ಧನ್‌ ಜಾನಿ, ಕಿರಣ್‌ ಕುಮಾರ್‌, ರಘುವೀರ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಜಾತ ನಾಗರಾಜ್‌, ರಾಜ್ಯ ಪರಿಷತ್‌ ಸದಸ್ಯೆ ಸುಜಾತ ರವೀಂದ್ರ, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ಆರ್‌.ರಾಮು ಇತರರಿದ್ದರು.

ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾ​ಯಣ

ಶಾಸಕ ಶರತ್‌ ಗುಳ್ಳೇನರಿ ಇದ್ದ ಹಾಗೆ: ಪ್ರಧಾನಿ ನರೇಂದ್ರ ಮೋದಿ ಅಥವಾ ಸಿಎಂ ಬೊಮ್ಮಾಯಿ ಬಂದು ನಿಂತ್ರು ಗೆಲ್ಲೋದು ಕಾಂಗ್ರೆಸ್‌ ಅಂತ ಹೇಳಿಕೆ ಕೊಟ್ಟಶರತ್‌ ಬಚ್ಚೇಗೌಡರ ಮಾತಿಗೆ ಟಾಂಗ್‌ ಕೊಟ್ಟಸಚಿವ ಎಂ.ಟಿ.ಬಿ. ನಾಗರಾಜ್‌, ನಾಗಲೋಕ ಎಲ್ಲಿ, ಗುಳ್ಳೆ ನರಿ ಎಲ್ಲಿ, ನಾಗಲೋಕಕ್ಕೆ ಗುಳ್ಳೆ ನರಿ ಹೋಲಿಕೆ ಮಾಡಲು ಸಾಧ್ಯವೇ. ಪ್ರಧಾನಿ ನರೇಂದ್ರ ಮೋದಿ ಜಗಮೆಚ್ಚಿದ ನಾಯಕ. ನಾನೊಬ್ಬ ಜನಪ್ರತಿನಿ​ಧಿ ಅನ್ನೋದು ಮರೆತು ಪ್ರಧಾನಿ ಮೋದಿ ಬಗ್ಗೆ ಮಾತನಾಡುವುದು ಶರತ್‌ ಬಚ್ಚೇಗೌಡರ ಮೂರ್ಖತನದ ಪರಮಾವ​ಧಿ. ಆದ್ದರಿಂದ ಜನ ಅವರಿಗೆ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!