ಜೆಡಿಎಸ್‌ ಸ್ವತಂತ್ರ ಸರ್ಕಾರಕ್ಕೆ ಅವಕಾಶ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

By Govindaraj SFirst Published Dec 1, 2022, 9:42 PM IST
Highlights

ಒಂದು ಬಾರಿ ಜೆಡಿಎಸ್‌ಗೆ ಸ್ವತಂತ್ರ್ಯ ಸರ್ಕಾರಕ್ಕೆ ಅವಕಾಶ ನೀಡಿದರೆ ಪಂಚರತ್ನ ಯೋಜನೆ ಜಾರಿಗೆ ತರುತ್ತೇವೆ. ಅಧಿಕಾರ ಕೊಟ್ಟ24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡ್ತೀವಿ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. 

ದಾಬಸ್‌ಪೇಟೆ (ಡಿ.01): ಒಂದು ಬಾರಿ ಜೆಡಿಎಸ್‌ಗೆ ಸ್ವತಂತ್ರ್ಯ ಸರ್ಕಾರಕ್ಕೆ ಅವಕಾಶ ನೀಡಿದರೆ ಪಂಚರತ್ನ ಯೋಜನೆ ಜಾರಿಗೆ ತರುತ್ತೇವೆ. ಅಧಿಕಾರ ಕೊಟ್ಟ24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡ್ತೀವಿ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ದೊಡ್ಡಬಳ್ಳಾಪುರ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಆಗಮಿಸಿದ ಜೆಡಿಎಸ್‌ ಪಂಚರತ್ನ ರಥಯಾತ್ರೆ ಅದ್ಧೂರಿ ಸ್ವಾಗತ ಸ್ವೀಕರಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಮಗೊಮ್ಮೆ ಅವಕಾಶ ಕೊಟ್ಟು ನೋಡಿ ಸ್ವತಂತ್ರ ಸರ್ಕಾರ ರಚಿಸಲು ಎಂದು ಮನವಿ ಮಾಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವ ಕಾರ್ಯಕ್ರಮ ನೀಡಿದ್ದೆ. ಅದನ್ನೂ ಕೂಡ ಬಿಜೆಪಿ ಸರ್ಕಾರ ರದ್ದು ಮಾಡಿದೆ. 

ನಾನು ಕಾಂಪಿಟ್‌ ಟು ಚೈನಾ ಅಂತ ಕಾರ್ಯಕ್ರಮ ಮಾಡಿದ್ದೆ. ಆದರೆ ಬಿಜೆಪಿಯವರು ಬಂದು ರದ್ದು ಮಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಗೆ ಮತ ನೀಡಬೇಡಿ ಅಂತ ಹೇಳಿದ್ದರು. ಹಾಗಾಗಿ ಈ ಬಿಜೆಪಿ ಸರ್ಕಾರ ಬರೋದಕ್ಕೆ ಕಾಂಗ್ರೆಸ್‌ನವರೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದರು. ಕೆಲವರು ಮುಸ್ಲಿಂ ಅಂಗಡಿಯಲ್ಲಿ ವ್ಯಾಪಾರ ಮಾಡಬೇಡಿ ಅಂತಿದ್ದಾರೆ. ಅಲ್ಲೆಲ್ಲೋ ಕುಕ್ಕರ್‌ ಬ್ಲಾಸ್ಟ್‌ ಅಂದರು. ಅವರಾರ‍ಯರೋ ಅಮಾಯಕರು ಸಾವನ್ನಪ್ಪಿರೋದು. ಬಡವರು ಬೀದಿ ಪಾಲಾಗುತ್ತಿದ್ದಾರೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದರು.

Pancharatna Rathayatra: ಸ್ವಂತ ಬಲದ ಸರ್ಕಾರಕ್ಕೆ ಆಶೀರ್ವದಿಸಿ: ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್‌: ಅಲ್ಲೆಲ್ಲೋ ಕುರುಬರಿಗೆ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ, ಕುರುಬರಿಗೆ 24 ಕೋಟಿ ಸಾಲ ಕೊಡುತ್ತೀವಿ ಅಂತ. ಅದರಿಂದ ರೈತರು ಸಾಲಗಾರರಾಗುತ್ತಾರೆ. ಅದರಿಂದ ಸಾಲ ಮನ್ನಾ ಮಾಡುವುದಕ್ಕೆ ಮತ್ತೆ ನಾನೇ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್‌ ನೀಡಿದರು. ಕಮೀಷನ್‌ ದಂಧೆಗೆ ಕಣಿವಾಣ: ಇಲ್ಲಿರೋ ಗುತ್ತಿಗೆದಾರರಿಗೆ ನಾನೊಂದು ಪ್ರಶ್ನೆ ಮಾಡ್ತೀನಿ, ಇಲ್ಲಿ ಕೆಲಸ ಮಾಡೋದಕ್ಕೆ ಶೇ.40ರಷ್ಟುಕೊಟ್ಟಿದ್ದೀರಾ? ಹಾಗಾದರೆ ಯೋಚನೆ ಮಾಡಬೇಡಿ, ಅಂತ ಅಕ್ರಮಕ್ಕೆ ಕಡಿವಾಣ ಹಾಕುತ್ತೇನೆ. ಮುಂದೆ ಅ​ಧಿಕಾರಕ್ಕೆ ಬಂದರೆ ಇಂತ ಕಮೀಷನ್‌ ದಂಧೆಗೆ ಕಣಿವಾಣ ಹಾಕುತ್ತೇನೆ ಎಂದು ಹೇಳಿದರು.

ಮೂರನೇ ಬಾರಿಗೆ ಗೆಲ್ಲಿಸಿ: ಈಗಾಗಲೇ ನೆಲಮಂಗಲದಲ್ಲಿ ಶ್ರೀನಿವಾಸಮೂರ್ತಿಯನ್ನ ಎರಡು ಬಾರಿ ಗೆಲ್ಲಿಸಿದ್ದೀರಿ. ಮೂರನೇ ಬಾರಿಗೆ ಗೆಲ್ಲಿಸಿ ಎಂದ ಎಚ್‌ಡಿಕೆ ಮನವಿ ಮಾಡಿದಾಗ ಪಕ್ಷದ ಕಾರ್ಯಕರ್ತರು ಶ್ರೀನಿವಾಸಮೂರ್ತಿನ ಮಂತ್ರಿ ಮಾಡಿ ಎಂದು ಘೋಷಣೆ ಕೂಗಿದರು. ಆಗ ಕುಮಾರಸ್ವಾಮಿ ಸ್ವತಂತ್ರ ಸರ್ಕಾರ ಅಧಿಕಾರಕ್ಕೆ ತನ್ನಿ ನಮ್ಮದೇ ಪಕ್ಷದವರನ್ನೇ 32 ಸಚಿವರನ್ನಾಗಿ ಮಾಡುತ್ತೇನೆ. ಅಲ್ಲದೆ ನೆಲಮಂಗಲಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನೆಲಮಂಗಲಕ್ಕೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಹೇಳಿದರು.

ಯಾರೊಂದಿಗೂ ಚುನಾವಣಾ ಪೂರ್ವ ಮೈತ್ರಿ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

ಸಚಿವ ಸುಧಾಕರ್‌ಗೆ ತರಾಟೆ: ಇನ್ನೂ ನೆಲಮಂಗಲ ಸ್ಯಾಟಲೈಟ್‌ ಸಿಟಿ ಮಾಡುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಮೂರೂವರೆ ವರ್ಷಗಳಿಂದ ಮಾಡದವರು, ಮೂರು ತಿಂಗಳಲ್ಲಿ ಮಾಡುತ್ತಾರಾ ಎಂದು ಪ್ರಶ್ನಿಸಿದರು. 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಮೂರು ಸ್ಯಾಟಲೈಟ್‌ ನಗರ ಮಾಡಲು ಮುಂದಾಗಿದ್ದೆ. ಆಗ ಬಿಡದಿಯಲ್ಲಿ ಸ್ಯಾಟಲೈಟ್‌ ಟೌನ್‌ ಮಾಡುವಾಗ ಕಾಂಗ್ರೆಸ್‌ ವಿರೋಧಿಸಿತ್ತು. ಈಗ ಬೆಂಗಳೂರು ಏನು ಮಾಡಿದ್ದಾರೆ ಗೊತ್ತಿಲ್ವಾ? ನೆಲಮಂಗಲ ಈಗಾಗಲೇ ಸಾಕಷ್ಟುಬೆಳೆದಿದೆ. ನೆಲಮಂಗಲ ಈಗಾಗಲೇ ಬೆಂಗಳೂರಿಗೆ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್‌ ಟೌನ್‌ ಮಾಡೋದು. ಬಹುಶಃ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಸೋಲೂರು ಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ಯಂಟಗಾನಹಳ್ಳಿ ಗ್ರಾಮದ ಗೂಬೆಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

click me!