
ನವದೆಹಲಿ (ಏ.14): ದೆಹಲಿಯಲ್ಲಿ ಮದ್ಯ ವ್ಯವಹಾರವನ್ನು ಅರಬಿಂದೋ ಕಂಪನಿಗೇ ನೀಡಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ₹25 ಕೋಟಿ ನೀಡಬೇಕು ಅರಬಿಂದೋ ಕಂಪನಿಯ ಮುಖ್ಯಸ್ಥ ಶರತ್‌ಚಂದ್ರ ರೆಡ್ಡಿ ಅವರಿಗೆ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ಬೆದರಿಕೆ ಹಾಕಿದ್ದರು ಎಂದು ಸಿಬಿಐ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
‘ದೆಹಲಿಯಲ್ಲಿ ಐದು ರೀಟೇಲ್ ಪ್ರಾಂತ್ಯಗಳ ವ್ಯವಹಾರವನ್ನು ಸರ್ಕಾರದಿಂದ ಅರಬಿಂದೋ ಕಂಪನಿಗೆ ನೀಡಿದಕ್ಕಾಗಿ ತಲಾ 5 ಕೋಟಿ ರು.ಯಂತೆ 25 ಕೋಟಿ ರು.ಯನ್ನು ಆಪ್ ಪಕ್ಷಕ್ಕೆ ವಿಜಯ್ ನಾಯರ್ ಎಂಬುವವರ ಮೂಲಕ ನೀಡಬೇಕೆಂದು ಕವಿತಾ ಅವರು ಶರತ್ ಚಂದ್ರ ರೆಡ್ಡಿ ಅವರಿಗೆ ಸೂಚಿಸಿದ್ದರು. ಒಂದು ವೇಳೆ ನೀಡದಿದ್ದರೆ ತೆಲಂಗಾಣ ಹಾಗೂ ದಿಲ್ಲಿಯಲ್ಲಿನ ಅರಬಿಂದೋ ಕಂಪನಿ ವ್ಯವಹಾರ ಹಾಳು ಮಾಡುವುದಾಗಿ ಬೆದರಿಸಿದ್ದರು’ ಎಂದು ಸಿಬಿಐ ತಿಳಿಸಿದೆ.
ಶರತ್‌ಚಂದ್ರ ರೆಡ್ಡಿ ಅವರು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, 2021ರಲ್ಲಿ ಪ್ರಕರಣದ ಸಂಬಂಧ ಕವಿತಾ ಅವರಿಗೆ 2 ಕಂತುಗಳಲ್ಲಿ ತಲಾ 7 ಕೋಟಿ ರು. ಲಂಚ ನೀಡಿದ್ದಾಗಿ ಒಪ್ಪಿಕೊಂಡಿದ್ದರು.
ಪಕ್ಷ ತೊರೆದ ರಾಜ್‌ಕುಮಾರ್ ಆನಂದ ಮನೆ ಮುಂದೆ ಆಪ್ ಕಾರ್ಯಕರ್ತರ ಪ್ರತಿಭಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.