ಕ್ರಿಕೆಟರ್ ಶಿವಂ ದುಬೆ ಪತ್ನಿ ಅಂಜುಮ್ ಖಾನ್ ಚರ್ಚೆಯಲ್ಲಿದ್ದಾರೆ. ಬಿಜೆಪಿ ನಾಯಕಿ ವಿರುದ್ಧ ಅವರು ಹಾಕಿರುವ ಪೋಸ್ಟ್ ಸದ್ದು ಮಾಡ್ತಿದೆ. ಅಂಜುಮ್ ಪೋಸ್ಟ್ ಗೆ ಬಿಜೆಪಿ ನಾಯಕಿ ತಿರುಗೇಟು ನೀಡಿದ್ದಾರೆ.
ಟೀಂ ಇಂಡಿಯಾದ ಆಲ್‌ರೌಂಡರ್ ( Team India All rounder ) ಶಿವಂ ದುಬೆ (shivam dube) ಅವರ ಪತ್ನಿ ಅಂಜುಮ್ ಖಾನ್ (Anjum Khan) ಗಂಭೀರ ಆರೋಪ ಮಾಡಿ ಸುದ್ದಿಗೆ ಬಂದಿದ್ದಾರೆ. ಅಂಜುಮ್, ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಒಂದು ಕೋಲಾಹಲ ಸೃಷ್ಟಿಸಿದೆ. ಅಂಜುಮ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿಯನ್ನು ಬಂಧಿಸುವಂತೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಇನ್ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದ್ದು, ಸಾಕಷ್ಟು ವಿವಾದ ಹುಟ್ಟುಹಾಕಿದೆ.
ಅಂಜುಮ್, ಬಿಜೆಪಿ ನಾಯಕಿ (BJP leader) ನಾಜಿಯಾ ಇಲಾಹಿ ಖಾನ್ ಬಂಧಿಸುವಂತೆ ಒತ್ತಾಯಿಸಿ, ಪೋಸ್ಟ್ ಹಂಚಿಕೊಂಡಿದ್ದಾರೆ. ನಾಜಿಸಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ: ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಎನ್‌ಡಿಎ ಮತ್ತೆ ಸೇರುವೆ, ಯೋಗೇಶ್ವರ್
ಅಂಜುಮ್ ಪೋಸ್ಟ್ ನಲ್ಲಿ ಏನಿದೆ? : ಬಿಜೆಪಿ ಸದಸ್ಯೆ ನಾಜಿಯಾ ಇಲಾಹಿ ಖಾನ್, ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವುದಾಗಿ ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧ ನಡೆಯುವ ಧಾರ್ಮಿಕ ಆಚರಣೆಗಳ ತಾರತಮ್ಯವನ್ನು ಖಂಡಿಸುವುದಾಗಿ ಹೇಳಿಕೊಂಡಿದ್ದಾರೆ. ಆದ್ರೆ ಅಂಜುಮ್ , ಇಲಾಹಿ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದು, ಅವರ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪ್ರವಾದಿಯ ಗೌರವಕ್ಕೆ ಅವಮಾನವಾದಾಗ ನೀವು ಕೋಪಗೊಳ್ಳದಿದ್ದರೆ, ನಿಮ್ಮ ನಂಬಿಕೆ ಸತ್ತಿದೆ ಮತ್ತು ನಿಮ್ಮ ನಂಬಿಕೆ ಜೀವಂತವಾಗಿದ್ದರೆ ಅದನ್ನು ವರದಿ ಮಾಡಿ ಮತ್ತು ನನ್ನೊಂದಿಗೆ ಬರೆಯಿರಿ #ArrestNaziaElahiKhan ಎಂದು ಅಂಜುಮ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.
ಪೋಸ್ಟ್ ಮುಂದುವರೆಸಿದ ಅಂಜುಮ್ ಖಾನ್, ಎಲ್ಲಾ ಸ್ನೇಹಿತರೆ, ನಾಜಿಯಾ ಖಾನ್ ಬಗ್ಗೆ ಸುದ್ದಿ ಮಾಡುವ ಸಮಯ ಬಂದಿದೆ. ಅವರು ಮುಸಲ್ಮಾನರ ವಿರುದ್ಧ ಮಾತನಾಡುತ್ತಲೇ ಈಗ ನಮ್ಮ ಯಜಮಾನನ ಬಗ್ಗೆಯೂ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಅಂಜುಮ್ ಖಾನ್ ಪೋಸ್ಟ್ ಮಾಡಿದ್ದಾರೆ.
ಅಂಜುಮ್ ಖಾನ್, ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಅದನ್ನು ಡಿಲಿಟ್ ಮಾಡಿದ್ದಾರೆ. ಈ ಮಧ್ಯೆ ಅನೇಕ ಬಳಕೆದಾರರು, ಇದು ನಾಜಿಯಾ ಖಾನ್ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದಿದ್ದಾರೆ. ಹಾಗೆಯೇ ಅಂಜುಮ್ ಹೇಳಿಕೆಯನ್ನು ನಿಂದಿಸಿದ್ದಾರೆ.
ಅಂಜುಮ್ ಖಾನ್ ಗೆ ನಾಜಿಯಾ ತಿರುಗೇಟು : ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಪೋಸ್ಟ್ ಗೆ ನಾಜಿಯಾ ಖಾನ್ ತಿರುಗೇಟು ನೀಡಿದ್ದಾರೆ. ಮೇಡಂ ನೀವು, ಹಿಂದುವನ್ನು ಮದುವೆ ಆಗಿದ್ದೀರಿ, ಮುಸ್ಲಿಂ ಷರಿಯಾ ಪ್ರಕಾರ, ನೀವು ಅದ್ರ ಭಾಗವಲ್ಲ. ಭಾರತೀಯ ಕ್ರಿಕೆಟಿಗ ಮತ್ತು ಸಿಎಸ್‌ಕೆ ಆಟಗಾರ ಶಿವಂ ದುಬೆ ಅವರ ಪತ್ನಿ, ನೀವು ನನ್ನ ವಿರುದ್ಧ ಹಿಂಸೆಯನ್ನು ಉತ್ತೇಜಿಸುವ ಪ್ರಚೋದಕ, ಸುಳ್ಳು, ಕಪೋಲಕಲ್ಪಿತ ಕಥೆಯನ್ನು ಪೋಸ್ಟ್ ಮಾಡುತ್ತಿದ್ದೀರಿ. ರಾಹುಲ್ ಸೂಚನೆ ಮೇರೆಗೆ ತೆಲಂಗಾಣದಿಂದ ಈ ಕಪೋಲಕಲ್ಪಿತ ಕಥೆ ಹರಡುತ್ತಿರುವುದರಿಂದ ಜಯ್ ಶಾ ಈ ಆಟಗಾರನ ಮೇಲೆ ಕಣ್ಣಿಟ್ಟಿದ್ದಾರೆ. ಈ ಮಹಿಳೆ ಕಾಂಗ್ರೆಸ್‌ನ ಭಾಗವಾಗಬಹುದು ಎಂದು ನಾಜಿಯಾ ಖಾನ್ ಪೋಸ್ಟ್ ಮಾಡಿದ್ದಾರೆ.
ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಅಥ್ಲೀಟ್ ಬಗ್ಗೆ ಹರಡಿದ್ದ ವದಂತಿ ನಿಜವೇ?
ಅಂಜುಮಾ ಖಾನ್ ಯಾರು? : ಅಂಜುಮ್ ಖಾನ್, ಕ್ರಿಕೆಟರ್ ಶಿವಂ ದುಬೆ ಅವರ ಪತ್ನಿ. 2021ರಲ್ಲಿ ಇಬ್ಬರು ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಲಲಿತಕಲೆಯಲ್ಲಿ ಪದವಿ ಪಡೆದಿರುವ ಅಂಜುಮ್ ಮಾಡೆಲಿಂಗ್ ಮತ್ತು ನಟನೆಯ ಜಗತ್ತಿನಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಹಲವಾರು ಹಿಂದಿ ಧಾರಾವಾಹಿಗಳು ಮತ್ತು ಸಂಗೀತ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಚಲನಚಿತ್ರಗಳಿಗೆ ಧ್ವನಿ ನೀಡುವ ಮೂಲಕ ಸ್ಕ್ರಿಪ್ಟ್‌ಗೆ ಜೀವ ತುಂಬಲು ಕೆಲಸವನ್ನು ಅವರು ಮಾಡ್ತಿದ್ದಾರೆ. 2024 ರ ಹೊತ್ತಿಗೆ ಅವರು 1-2 ಕೋಟಿ ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.