ಸತೀಶ್ ಜಾರಕಿಹೊಳಿ ಅಷ್ಟೇ ಅಲ್ಲ ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ: ಎಂ. ಲಕ್ಷ್ಮಣ್

Published : Nov 22, 2023, 12:00 AM IST
ಸತೀಶ್ ಜಾರಕಿಹೊಳಿ ಅಷ್ಟೇ ಅಲ್ಲ ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ: ಎಂ. ಲಕ್ಷ್ಮಣ್

ಸಾರಾಂಶ

ದಲಿತ ಮಂತ್ರಿಗಳೂ ಕೂಡ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಳಾಗಬಹುದು. ಬಿಜೆಪಿ ಇಲ್ಲಿಯವರೆಗೆ ದೇಶದಲ್ಲಿ ಎಷ್ಟು ಜನರನ್ನ ಮುಖ್ಯಮಂತ್ರಿಗಳಾಗಿ ಮಾಡಿದೆ. ಯಾವುದೇ ಉತ್ತಮ ಸ್ಥಾನಮಾನ ಕೊಡದೆ ಈ ಕಮ್ಯುನಿಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.22): ಸತೀಶ್ ಜಾರಕಿಹೊಳಿ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಬಹುದು. ಸತೀಶ್ ಜಾರಕಿಹೊಳಿ ಅವರು ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ಇರುವ ಪ್ರತಿಯೊಬ್ಬರು ಮಂತ್ರಿ, ಮುಖ್ಯಮಂತ್ರಿಗಳಾಗುವ ಅರ್ಹತೆ ಇರುವವರು. ಎಲ್ಲಾ ಸಮುದಾಯದವರೂ ಸಿಎಂ ಆಗುವುದಕ್ಕೆ ಅವಕಾಶ ಇರೋದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದ್ದಾರೆ. 

ನಿನ್ನೆ(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್ ಅವರು,  ದಲಿತ ಮಂತ್ರಿಗಳೂ ಕೂಡ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಳಾಗಬಹುದು. ಬಿಜೆಪಿ ಇಲ್ಲಿಯವರೆಗೆ ದೇಶದಲ್ಲಿ ಎಷ್ಟು ಜನರನ್ನ ಮುಖ್ಯಮಂತ್ರಿಗಳಾಗಿ ಮಾಡಿದೆ. ಯಾವುದೇ ಉತ್ತಮ ಸ್ಥಾನಮಾನ ಕೊಡದೆ ಈ ಕಮ್ಯುನಿಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. 

ಶೀಘ್ರದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನ: ಕಾಂಗ್ರೆಸ್‌ ನಾಯಕನ ಹೊಸ ಬಾಂಬ್‌..!

ಎಲ್ಲಾ ಸಮುದಾಯವನ್ನ ಗುರುತಿಸುವುದು ಅಂದ್ರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಸತೀಶ್ ಜಾರಕಿಹೊಳಿ, ದಲಿತರು, ಹಿಂದುಳಿದ ವರ್ಗದವರು ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರು ಕೂಡ ಸಿಎಂ ಆಗ್ತಾರೆ. ಇದಕ್ಕೆ ಅವಕಾಶ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮಾಡಿಕೊಡಲಿದೆ. ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಆರ್. ಅಶೋಕ್ ಅವರನ್ನು ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯರನ್ನಾಗಿ ಮಾಡುವಾಗ ಉಳಿದ ಸಮುದಾಯದವರು ಬಿಜೆಪಿಗರಿಗೆ ಕಾಣಿಸಲಿಲ್ವಾ. ಜಾತ್ಯಾತೀತತೆಯನ್ನ ಪರಿಪಾಲನೆ ಮಾಡುವ ಪಕ್ಷ ಅಂತ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಎಂ. ಲಕ್ಷ್ಮಣ್ ಹೇಳಿದ್ದಾರೆ. 

ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳಕ್ಕೆ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನಿಸುತ್ತಿರುವುದಕ್ಕೆ ಬಿಜೆಪಿಗೆ ಲೈಂಗಿಕ ಕಿರುಕುಳ, ಹಗರಣ ಮತ್ತು ಕ್ರಿಮಿನಲ್ ಪ್ರಕರಣ ಇಂತಹವು ಅಡಿಷಿನಲ್ ಕ್ವಾಲಿಫಿಕೇಷನ್ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. ಬಿಜೆಪಿಯಲ್ಲಿ ಈಗಾಗಲೇ 9 ಜನರು ಸೆಕ್ಸ್ಯುಅಲ್ ವಿಡಿಯೋ ವಿಷಯದಲ್ಲಿ ಕೋರ್ಟಿನಿಂದ ತಡೆ ತಂದಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಥ್ಲೀಟ್‌ಗಳಿಂದ ವರ್ಷಗಳ ಕಾಲ ಅಷ್ಟೊಂದು ಹೋರಾಟ ನಡೆಯಿತು. ಆದರೂ ಅವರನ್ನು ಎಂಪಿ ಸ್ಥಾನದಿಂದ ಅಮಾನತು ಮಾಡಲಿಲ್ಲ. ಬಿಜೆಪಿ ಒಂದೇ ಒಂದು ಕ್ರಮ ಕೈಗೊಳ್ಳಲಿಲ್ಲ. ಯುಪಿಯಲ್ಲಿ ಒಂದು ದಿನಕ್ಕೆ 20 ಅತ್ಯಾಚಾರ ಪ್ರಕರಣ ಆಗುತ್ತಿವೆ. ಪ್ರತಿದಿನ ಕೊಲೆಗಳು ನಡೆಯುತ್ತವೆ. ಇಂತಹದ್ದರಲ್ಲಿ ಯುಪಿ ಮಾಡೆಲ್ ಅಂತ ಹೇಳುತ್ತಾರೆ. ಯುಪಿ ಮಾಡೆಲ್ ತರ ಯಾವುದೇ ರಾಜ್ಯಕ್ಕೆ ಬೇಡ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ