ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರ ಹುದ್ದೆಗೆ ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್. ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡು ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ.
ಬೆಂಗಳೂರು (ಫೆ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆಗಾರರಾಗಿ ನೇಮಕವಾಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಇದೀಗ ಸಿಎಂ ಸಲಹೆಗಾರ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿದ ಹಿರಿಯ ಶಾಸಕರಿಗೆ ಗೌರವ ಸಿಗುತ್ತಿಲ್ಲ, ಸಚಿವ ಸ್ಥಾನವೂ ಸಿಗುತ್ತಿಲ್ಲವೆಂದು ಬೇಸರದಿಂದ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ, ಅಸಲಿ ಕಾರಣಗಳು ಇಲ್ಲಿವೆ ನೋಡಿ..
ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆಗಾರ ಹುದ್ದೆಗೆ ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ಗುಡ್‌ಬೈ ಹೇಳಿದ್ದಾರೆ. ಅಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸ್ವತಃ ಸಿಎಂ ಸಿದ್ದರಾಂಯ್ಯ ಅವರಿಗೆ ರಾಜೀನಾಮೆ ಪತ್ರವನ್ನು ರವಾನೆ ಮಾಡಿರುವ ಬಗ್ಗೆ ಬಿ.ಆರ್ ಪಾಟೀಲ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಖಚಿತಪಡಿಸಿದ್ದಾರೆ. ನಾನೇ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರ ರವಾನೆ ಮಾಡಿದ್ದೇನೆ ಎಂಬುದನ್ನು ಬಿ.ಆರ್. ಪಾಟೀಲ್ ಮತ್ತೊಮ್ಮೆ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧದ ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಶಕ್ತಿ ತುಂಬಲು ಪ್ರಾಣಿರಕ್ತ ಬಲಿ!
ಬಿ.ಆರ್. ಪಾಟೀಲ್ ರಾಜೀನಾಮೆಗೆ ಕಾರಣಗಳೇನು?
* ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಯಸಿದ್ದ ಹಿರಿಯ ಶಾಸಕ ಬಿ.ಆರ್. ಪಾಟೀಲ್
* ಸಚಿವ ಸ್ಥಾನ ಸಿಗದೇ ಇರುವ ಕಾರಣಕ್ಕಾಗಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದರೂ ಅದು ಹುಸಿಯಾಗಿದೆ.
* ಕಳೆದ 2024-25ನೇ ಸಾಲಿನ ಬಜೆಟ್‌ನಲ್ಲೇ ಆಳಂದ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ ಮಾಡಲಾಗಿದ್ದರೂ, ಸಿಕ್ಕಿರಲಿಲ್ಲ.
* ಇದಾದ ನಂತರ ವಿಶೇಷ ಯೋಜನೆಯಡಿಯೂ ಅನುದಾನ ನೀಡದೆ ಇರೋದಕ್ಕೆ ಬೇಸರ.
* ಈ ಬಾರಿ ರಾಜೀನಾಮೆ ಮೂಲಕ ಬಿ.ಆರ್. ಪಾಟೀಲ್ ತಮ್ಮ ಆಕ್ರೋಶ ಹೊರಹಾಕುವುದು.
* ಈಗ ರಾಜೀನಾಮೆ ಮೂಲಕ ಒತ್ತಡ ಹಾಕಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿರುವ ಸಾಧ್ಯತೆ.
* ಇದರ ಜೊತೆಗೆ ಸಿಎಂ ಸಲಹೆಗಾರ ಹುದ್ದೆಗೆ ಯಾವುದೇ ಮಹತ್ವ ಕೂಡ ಇಲ್ಲ.
* ಸಿಎಂ ಸಲಹೆಗಾರ ಹುದ್ದೆ ಕೇವಲ ನಾಮಕಾವಸ್ಥೆಗಷ್ಟೇ ಸೀಮಿತ.
ಇದನ್ನೂ ಓದಿ: ನೋವಾಗಿದೆ ಆದ್ರೆ ಪಕ್ಷ ಬಿಡೋಲ್ಲ, 2028ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ಗುರಿ: ಶ್ರೀರಾಮುಲು
* ಆಡಳಿತದಲ್ಲಿ ಸಾಕಷ್ಟು ಅನುಭವ ಇರುವ ಸಿಎಂ ಸಿದ್ದರಾಮಯ್ಯ ಬಿ.ಆರ್. ಪಾಟೀಲ್ ಸಲಹೆಗಳನ್ನ ತೆಗೆದುಕೊಳ್ಳುವುದೂ ಇಲ್ಲ.
* ಸ್ಥಳೀಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೂ ಮುನಿಸು ಇತ್ತು.
* ಸಿಎಂ ಸಲಹೆಗಾರ ಹುದ್ದೆ ರಾಜಿನಾಮೆ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗಿನ ಮುನಿಸು ಕೂಡ ಕಾರಣ ಇರಬಹುದು.
* ಈ ಹಿಂದೆ ಬಿ.ಆರ್. ಪಾಟೀಲ್ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
* ಸಚಿವರು ಹಾಗೂ ಶಾಸಕರ ನಡುವಿನ ತಿಕ್ಕಾಟ ಬಗೆಹರಿಸಲು ಸಿಎಂಗೆ ಪತ್ರ ಬರೆದಿದ್ದಕ್ಕೆ ಎಚ್ಚರಿಕೆ ಕೂಡ ನೀಡಲಾಗಿತ್ತು. ಇಷ್ಟಾದರೂ ಯಾವುದೇ ಪ್ರಯೋಜನ ಆಗದ್ದರಿಂದ ರಾಜೀನಾಮೆ ಸಲ್ಲಿಕೆ ಸಾಧ್ಯತೆ.