
ಕಲಬುರಗಿ(ಫೆ.01): ರಾಜ್ಯಾಧ್ಯಕ್ಷರ ಚುನಾವಣೆ ನಡೆದ ನಂತರವಷ್ಟೇ ರಾಜ್ಯದಲ್ಲಿನ ಬಿಜೆಪಿ ಭಿನ್ನಮತ ಶಮನವಾಗಲಿದೆ. ಅತೃಪ್ತಿ ಕೂಡಾ ಶಮನವಾಗಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಕ್ತಪಡಿಸಿದ್ದಾರೆ.
ಸೇಡಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಆಂತರಿಕ ಚುನಾ ವಣೆ ಪ್ರಕ್ರಿಯೆ ಶುರುವಾಗಿದ್ದು, 25 ಜಿಲ್ಲೆಗಳ ಅಧ್ಯಕ್ಷರ ಆಯ್ಕೆಯಾಗಿದೆ. ಸಂಘಟನಾತ್ಮಕವಾಗಿರುವ 39 ಜಿಲ್ಲೆಗಳಲ್ಲಿ ಶೇ. 50ರಷ್ಟು ಜಿಲ್ಲೆಗಳ ಚುನಾವಣೆ ಮುಗಿದಿದ್ದು, ರಾಜ್ಯಾ ಧ್ಯಕ್ಷರ ಚುನಾವಣೆ ಮಾಡಬಹುದು. ಇದಕ್ಕಾಗಿ ಶಿವರಾಜ ಸಿಂಗ್ ಚೌವ್ಹಾಣ್ ಅವರ ನೇಮಕವಾಗಿದೆ ಎಂದರು.
ಕುಂಭಮೇಳ ಟೀಕಿಸುವ ಕಾಂಗ್ರೆಸ್‌ನವರು ಅಯೋಗ್ಯರು: ಬಿ.ವೈ.ವಿಜಯೇಂದ್ರ
ಹೊಗಳು ಭಟ್ಟರಿಗೇ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಪಕ್ಷದ ಸಂಘಟನೆಗೆ ಪೂರಕವಾಗಿರುವವರಿಗೆ ಅಧ್ಯಕ್ಷ ಪಟ್ಟ ದೊರಕಿದೆ ಎಂದರು.
2ನೇ ಬಾರಿಗೆ ರಾಜ್ಯಾಧ್ಯಕ್ಷರಾ ಗೀರಾ? ಎಂಬ ಪ್ರಶ್ನೆಗೆ ಸ್ಪಂದಿಸಿದ ವಿಜಯೇಂದ್ರ, ಕಳೆದ 1 ವರ್ಷದಲ್ಲಿ ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ಹೋರಾಟಗಳು, ಸಂಘಟನಾತ್ಮಕ ಕೆಲಸಗಳನ್ನು ಪಟ್ಟಿ ಮಾಡುತ್ತ ಇವೆಲ್ಲ ಕೆಲಸ ಮಾಡಿದ್ದೇನೆ. ಈಗಂತೂ ಪಕ್ಷದ ಆಂತರಿಕ ಚುನಾವಣೆ ಪ್ರಕ್ರಿಯೆ ಶುರುವಾಗಿದೆ ಕಾದು ನೋಡಿ ಎಂದು ಒಗಟ್ಟಾಗಿ ಹೇಳಿದರು.
ಸಂಘಟನಾತ್ಮಕವಾಗಿರುವ 39 ಜಿಲ್ಲೆಗಳ ಪೈಕಿ 25ರಲ್ಲಿ ಚುನಾವಣೆ ಯಾಗಿದೆ. ಇನ್ನು 14ರಲ್ಲಿ ಚುನಾವಣೆ ನಡೆಯಬೇಕು. ಶೇ.50ರಷ್ಟು ಜಿಲ್ಲೆ ಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ಮಾಡ ಬಹುದು ಎಂದು ನಿಯಮವಿದೆ. ಹಾಗಾಗಿ ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯೂ ಶುರುವಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಲ್ಲಿದೆ, ಸಿಎಂ ಇದ್ದಾರೆಂಬ ಭಾವನೆ ಯಾರಿಗೂ ಬರ್ತಿಲ್ಲ. ಅಭಿವೃದ್ಧಿಗೆ ಹಣವಿಲ್ಲ, ಆಡಳಿತಾರೂಢರೇ ಅತೃಪ್ತಿಯಲ್ಲಿದ್ದಾರೆ. ಹೀಗಾಗಿ ಜನ ತೊಂದರೆಯಲ್ಲಿದ್ದಾರೆ. ಅಭಿವೃದ್ಧಿ ಅನುದಾನ ಬಿಡುಗಡೆಯಲ್ಲಿಯೂ ರಾಜಕೀಯ, ಪಕ್ಷ, ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ದೂರುತ್ತಿದ್ದಾರೆಂದು ವಿಜಯೇಂದ್ರ ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ: ವಿಜಯೇಂದ್ರ ಏಕಪಕ್ಷೀಯ ನಿರ್ಧಾರಕ್ಕೆ ನವೀನ್ ಕಿರಣ್ ಟೀಕೆ
ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚುತ್ತಿದೆ. ಸಿಎಂ ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ ಅವರೇ ಮುಡಾ ಹಗರಣದಲ್ಲಿ ಸಿಲುಕಿ ಇದನ್ನೆಲ್ಲ ಮರೆಯುತ್ತಿದ್ದಾರೆ. ಮೊನ್ನೆ ಕಾಟಾಚಾರದ ಸಭೆ ಮಾಡಿದ್ದು ಬಿಟ್ಟರೆ ಮುಂದೇನು ಮಾಡಿಲ್ಲ. ಸಿಎಂ ಇದನ್ನ ಗಂಭೀರವಾಗಿ ತೆಗೆದುಕೊಳ್ಳ ಬೇಕು ಎಂದು ಅವರು ಹೇಳಿದರು.
ಮುಡಾ ಹಗರಣದಲ್ಲಿನ ಬೆಳವಣಿಗೆಗಳ ಬಗ್ಗೆ ಕಾದು ನೋಡಿ ಎಂದ ವಿಜಯೇಂದ್ರ, ರಾಜ್ಯ ಉಚ್ಚ ನ್ಯಾಯಾಲಯವೇ ಮಧ್ಯಂತರ ತೀರ್ಪಲ್ಲಿ ಉಲ್ಲೇಖ ಮಾಡಿದೆ. ಹಗರಣದ ಬಗ್ಗೆ ಇದು ರಾಜಕೀಯ ಪ್ರೇರಿತ ಅನ್ನೋದು ಹಾಸ್ಯಾಸ್ಪದ ಎಂದರು. ಭಿನ್ನರ ಹೇಳಿಕೆಗಳಿಗೆ ಉತ್ತರಿಸೋದಿಲ್ಲ, ಅವರು ಏನೆಲ್ಲಾ ಹೇಳ್ತಾರೆ ಕಾದು ನೋಡಿ 1 ವಾರದ ನಂತರ ಉತ್ತರಿಸುವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.