ಸಿದ್ದರಾಮಯ್ಯ ಭರವಸೆ ನಂಬಿ ಕೆಟ್ಟೆ: ಕಾಂಗ್ರೆಸ್‌ ಶಾಸಕ ಬಿ.ಆರ್‌.ಪಾಟೀಲ್‌

By Kannadaprabha News  |  First Published May 31, 2023, 7:57 AM IST

ಮಂತ್ರಿಗಿರಿಗಾಗಿ ನಾನು ಯಾರ ಬಾಗಿಲೂ ಕಾಯುವುದಿಲ್ಲ. ಸಿದ್ದರಾಮಯ್ಯ ಅವರು ಹೇಳಿದ್ದರೂ ಯಾಕೋ ನನಗೆ ಅವಕಾಶ ಸಿಕ್ಕಿಲ್ಲ: ಬಿ.ಆರ್‌.ಪಾಟೀಲ್‌


ಕಲಬುರಗಿ(ಮೇ.31): ಸಚಿವ ಸ್ಥಾನ ಸಿಗದ್ದಕ್ಕೆ ಆಳಂದ ಶಾಸಕ ಬಿ.ಆರ್‌.ಪಾಟೀಲರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಕ್ಕಾಗಿ ಭಿಕ್ಷೆ ಬೇಡುವ ಜಾಯಮಾನದವನು ನಾನಲ್ಲ. ಸಿದ್ದರಾಮಯ್ಯ ಅವರೇ ಚುನಾವಣಾ ಪ್ರಚಾರಕ್ಕೆ ಬಂದಾಗ ನನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ಅದನ್ನು ನಂಬಿ ನಾನು ಕೆಟ್ಟೆಎಂದು ಪಾಟೀಲರು ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂತ್ರಿಗಿರಿಗಾಗಿ ನಾನು ಯಾರ ಬಾಗಿಲೂ ಕಾಯುವುದಿಲ್ಲ. ಸಿದ್ದರಾಮಯ್ಯ ಅವರು ಹೇಳಿದ್ದರೂ ಯಾಕೋ ನನಗೆ ಅವಕಾಶ ಸಿಕ್ಕಿಲ್ಲ ಎಂದರು.

Tap to resize

Latest Videos

undefined

ಭ್ರಷ್ಟರ ವಿರುದ್ಧ ತನಿಖೆಯ 6ನೇ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್‌ ಖರ್ಗೆ

ನಾನು ನಂಬಿದವರೇ ನನ್ನನ್ನು ಕೈ ಬಿಟ್ಟರು. ನಾನು ಎಂದೂ ಜೀವನದಲ್ಲಿ ಕೋಮುವಾದಿ ಪಕ್ಷದ ಜೊತೆಗೆ ಹೋಗಲ್ಲ. ಕೊನೆಯುಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಜಿಲ್ಲೆಯಲ್ಲಿ ಕಿರಿಯರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರಿಯಾಂಕ್‌ ಖರ್ಗೆ ಮತ್ತು ಡಾ.ಶರಣಪ್ರಕಾಶ್‌ ಪಾಟೀಲ ಅವರು ಹೆಚ್ಚು ಸಕ್ರಿಯವಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಸ್ವಾಗತಾರ್ಹ ಎಂದು ಹೇಳಿದರು.

click me!