ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ವ್ಯವಸ್ಥೆಯಡಿ ಅಕ್ಕಿ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡಿಲ್ಲ. ಇದನ್ನು ಪ್ರಶ್ನೆ ಮಾಡದ ಬಿಜೆಪಿ ನಾಯಕರು ಅಕ್ಕಿ ಬದಲಿಗೆ ರೊಕ್ಕ ನೀಡುವುದನ್ನು ಏಕೆ ವಿರೋಧಿಸುತ್ತಾರೆ? ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.
ಕೊಪ್ಪಳ (ಜು.1) : ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ವ್ಯವಸ್ಥೆಯಡಿ ಅಕ್ಕಿ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡಿಲ್ಲ. ಇದನ್ನು ಪ್ರಶ್ನೆ ಮಾಡದ ಬಿಜೆಪಿ ನಾಯಕರು ಅಕ್ಕಿ ಬದಲಿಗೆ ರೊಕ್ಕ ನೀಡುವುದನ್ನು ಏಕೆ ವಿರೋಧಿಸುತ್ತಾರೆ? ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
undefined
ಅಕ್ಕಿ ಸಂಗ್ರಹ ಸಾಕಷ್ಟುಇದ್ದರೂ ಕೇಂದ್ರ ಸರ್ಕಾರ ಕೊಡದೇ ಇರುವುದು ಯಾವ ನ್ಯಾಯ? ಅನ್ನಭಾಗ್ಯ ಯೋಜನೆ ಜಾರಿಯಾದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಈ ರೀತಿ ಮಾಡಿದ್ದಾರೆ ಎಂದು ದೂರಿದರು. ಅಕ್ಕಿ ವಿತರಣೆ ಮಾಡುವುದರಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಭಾನಾಪುರದ ಮಸೀದಿ ಉದ್ಘಾಟಿಸಿದ ಗವಿಸಿದ್ದೇಶ್ವರ ಶ್ರೀ
ಶ್ರಮ ಒಬ್ಬರದು, ಅನುಭವಿಸುವವರು ಮತ್ತೊಬ್ಬರು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಘವೇಂದ್ರ ಹಿಟ್ನಾಳ, ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದರು. ಆದರೆ, ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿನಿಂದ ಇದ್ದೇವೆ. ಯಾರ ನಡುವೆಯೂ ಭಿನ್ನಾಭಿಪ್ರಾಯ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿಎಂದರು.
ಕಾಂಗ್ರೆಸ್ ಜನಪರ ಯೋಜನೆ ಜಾರಿ ಮಾಡಿದಕ್ಕೆ ಬಿಜೆಪಿಯವರು ಹತಾಶೆಗೊಂಡಿದ್ದಾರೆ ಎಂದರು.
ಕಲುಷಿತ ಕುಡಿಯುವ ನೀರಿಗೆ ಇನ್ನೆಷ್ಟು ಬಲಿಯಾಗಬೇಕು? 5 ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಕೊಪ್ಪಳ ಜಿಲ್ಲಾಡಳಿತ!