ಶಾಸಕ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ: ರೇಣುಕಾಚಾರ್ಯ ವಾಗ್ದಾಳಿ

By Sathish Kumar KH  |  First Published Nov 29, 2024, 5:36 PM IST

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹಿಂದೂ ಇಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದ್ದಾರೆ. ಯತ್ನಾಳ್ ಬಿಜೆಪಿ ಪಕ್ಷದೊಳಗಿದ್ದುಕೊಂಡು ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದಾರೆ ಮತ್ತು ಪಕ್ಷ ವಿರೋಧಿಗಳಾಗಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.


ಕೋಲಾರ (ನ.29): ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಟ್ಟಿದವರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ ಹಿಂದೂ ಹುಲಿಯಲ್ಲ, ಇಲಿ. ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾಗ ಇಫ್ತಿಯಾರ್ ಕೂಟವನ್ನು ಏರ್ಪಡಿಸಿದ್ದರು. ನೀನೊಬ್ಬ ಗೋಮುಖ ವ್ಯಾಘ್ರ, ನೀಮು ಮುಖವಾಡ ಹಾಕಿಕೊಂಡಿದ್ದೀಯ. ಬಿಜೆಪಿ ಪಕ್ಷದೊಳಗಿದ್ದುಕೊಂಡು, ಕಾಂಗ್ರೆಸ್ ಮುಖವಾಣಿ ಆಗಿದ್ದೀಯ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲೆಯ ಕುರುಡುಮಲೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ. ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್ ಪಕ್ಷವಾದರೆ, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು ಆಗಿದ್ದಾರೆ. ಇಲ್ಲಿ ಯತ್ನಾಳ್ ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕರ್ನಾಟಕದಲ್ಲಿ ಬಿಜೆಪಿ ಮುಳುಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Latest Videos

undefined

ಇನ್ನು ನನಗೆ ಲಫೂಟ್ ಎಂದು ಹೇಳುವ ಮೂಲಕ ಹಗುರವಾಗಿ ಮಾತನಾಡ ಬೇಡ. ನೀನು ಗೋಮುಖ ವ್ಯಾಘ್ರ, ಮುಖವಾಡ ಹಾಕಿಕೊಂಡಿದ್ದೀಯ. ನೀನು ಪಕ್ಷದಿಂದ ಸಸ್ಪೆಂಡ್ ಆಗಿದ್ದಾಗ ಅನ್ಯ ಕೋಮಿನವರೊಂದಿಗೆ ಸೇರಿ ಇಪ್ತಿಯಾರ್ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಹೇಳುತ್ತೀಯ. ನಿನಗೆ ಮಾನ ಮರ್ಯಾದೆ ಇದ್ದರೆ, ನಾವು ಬಾಯಿ ಬಿಚ್ಚಿದರೆ ಅಷ್ಟೇ... ಇವರು ಟಿಪ್ಪು ಖಡ್ಗ ಇಟ್ಟುಕೊಂಡು ಒಡಾಡಿದ್ದಾರೆ, ನೀವು ಬಾಯಿ ಬಿಚ್ಚಿದರೆ, ನಾವು ಬಾಯಿ ಬಿಚ್ಚುತ್ತೇವೆ.. ನಾವೂ ಜವಾರಿ ಇದ್ದೀವಿ. ನಾವೂ ನಿನಗಿಂತ ಹೆಚ್ಚಾಗಿ ಮಾತನಾಡುತ್ತೀವಿ ಎಂದು ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಬಿಜೆಪಿ ನಾಯಕರ ಬಣ ಜಗಳ ತೀವ್ರ, ದಿಲ್ಲಿ ಕರೆ ಬಂದಿತ್ತು ಒಬ್ನೇ ಬರೋಲ್ಲ ಅಂದೆ: ಯತ್ನಾಳ್

ಮಾಜಿ ಸಿಎಂ ಯಡಿಯೂರಪ್ಪ ಅವರು ಸೈಕಲ್ ತುಳಿದು ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷ ಕಟ್ಟಿದವರು. ಅನಂತ ಕುಮಾರ್ ಸೇರಿದಂತೆ ಹಲವು ಮುಖಂಡರು ಪಕ್ಷ ಕಟ್ಟಿದ್ದಾರೆ. ಅಣ್ಣ ಬಸವಣ್ಣ ಸೇರಿದಂತೆ ಮಠಗಳ ವಿರುದ್ದ ಮಾತನಾಡಲಾಗುತ್ತಿದೆ. ರಾಷ್ಟ್ರೀಯ ನಾಯಕರ ಬೆಂಬಲವಿದೆ ಎಂದು ಸ್ವಯಂ ಘೋಷಿತ ಹಿಂದೂ ಹುಲಿ ವಿರುದ್ದ ಮಾತನಾಡುತ್ತಾರೆ. ವಕ್ಪ್ ವಿರುದ್ದ ಹೋರಾಟ ಮಾಡು ಅಂತ, ಯಾವ ರಾಷ್ಟ್ರೀಯ ನಾಯಕರು ಯಾರು ಹೇಳಿಲ್ಲ.  ಇವರಿಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲವಿಲ್ಲ. ಇದೆ ಕೇಂದ್ರದ ನಾಯಕರು ವಿಜಿಯೇಂದ್ರ ಅವರನ್ನ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರ ಅವರ ವಿರುದ್ಧ ಮಾತನಾಡುವುದು ಕೇಂದ್ರದ ನಾಯಕರಿಗೆ ಮಾಡಿದ ಅವಮಾನ ಎಂದು ಗುಡುಗಿದರು. 

ಇದನ್ನೂ ಓದಿ: ಶಿಕ್ಷಕಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಕೆಪಿಸಿಸಿ ಕಾರ್ಯದರ್ಶಿ ವಿರುದ್ಧ ದೂರು

ಇದೇ ವೇಳೆ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪಕ್ಷದೊಳಗೆ ಇದ್ದು ಒಳಗೆ ಚೂರಿ ಹಾಕೊರು ಇದ್ದಾರೆ. ಬಿಜೆಪಿ ಶಾಲು ಹಾಕ್ಕೊಂಡು ಪಕ್ಷದ ಅಧ್ಯಕ್ಷರ ವಿರುದ್ದ ಮಾತನಾಡುತ್ತಾರೆ. ಯಾರು ಮಾತನಾಡಿದರೆ,ಅವರದ್ದು ಹೊರಗೆ ತೆಗೀತೀನಿ ಅಂತಾರೆ,  ಅದೇನ್ ಗೊತ್ತೊ ತಾಕತ್ ಇದ್ದರೆ ತೆಗೀರಿ. ಬಿಜೆಪಿ ಹೈ ಕಮಾಂಡ್ ಸುಮ್ಮನಿಲ್ಲ, ಕಾದು ನೋಡುವ ತಂತ್ರ ಅನುಸರಣೆ ಮಾಡ್ತಿದ್ದಾರೆ. ಬೈ ಎಲೆಕ್ಷನ್ ಸೋಲಿಗೆ ಬಿವೈ ವಿಜಯೇಂದ್ರ ಹೊಣೆ ಮಾಡುವುದು ಸರಿಯಲ್ಲ. ಯತ್ನಾಳ್ ಗೆದ್ದಿದ್ದು ಕಾಂಗ್ರೆಸ್ ನಾಯಕರ ಬೆಂಬಲದಿಂದ, ಅದೊಂದು ಗೆಲುವಲ್ಲ. ಯತ್ನಾಳ್ ಅವರು ಕಾಂಗ್ರೆಸ್‌ನವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರಬಹುದು. ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆಲುವಿಗೆ ಗ್ಯಾರೆಂಟಿ ಕಾರಣ, ಗೃಹಲಕ್ಷ್ಮಿ ಹಣ ಹಾಕಿ ಚುನಾವಣೆ ಗೆದ್ದಿದ್ದಾರೆ. ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ, ಅವರು ಕೊಡುವ ಹೇಳಿಕೆ ಅವರಿಗೆ ಸೀಮಿತ ಎಂದು ಹೇಳಿದರು.

click me!