ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲು: ಯತ್ನಾಳ್‌ ಬಾಂಬ್‌

By Kannadaprabha News  |  First Published Dec 5, 2023, 4:23 AM IST

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಬದಲಾವಣೆಯಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಪುನರುಚ್ಚರಿಸಿದ್ದಾರೆ. 


ಸುವರ್ಣಸೌಧ (ಡಿ.05): ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಬದಲಾವಣೆಯಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ. ಅಲ್ಲದೆ, ಉತ್ತರ ಕರ್ನಾಟಕದವರಿಗೆ ನಾಯಕತ್ವ ನೀಡಿ ನ್ಯಾಯ ಒದಗಿಸುವವರೆಗೂ ಪಕ್ಷದ ಶಾಸಕಾಂಗ ಸಭೆಗೂ ನಾನು ಹೋಗುವುದಿಲ್ಲ ಎಂದರು. ತೆಲಂಗಾಣದಲ್ಲಿ ಕುಟುಂಬ ರಾಜಕಾರಣವನ್ನು ಕಿತ್ತು ಹಾಕಲಾಗಿದೆ. 

ಲೋಕಸಭೆ ಚುನಾವಣೆ ಬಳಿಕ ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕೊನೆಯಾಗಲಿದೆ. ವಂಶ ರಾಜಕಾರಣವನ್ನು ಕೊನೆಗಣಿಸುವುದೇ ನಮ್ಮ ಗುರಿ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲೂ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂದರು. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶಕ್ಕೆ ನರೇಂದ್ರ ಮೋದಿ ಅವರೇ ಗ್ಯಾರಂಟಿ ಇರುವುದರಿಂದ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. 

Tap to resize

Latest Videos

ಬಿಎಸ್‌ವೈ, ವಿಜಯೇಂದ್ರ ಬಗ್ಗೆ ಯತ್ನಾಳ್ ಟೀಕೆ ಸರಿಯಲ್ಲ: ರೇಣುಕಾಚಾರ್ಯ

ಈ ಗೆಲುವಿಗೆ ಕಾರಣ ಹಿಂದುತ್ವ, ಅಭಿವೃದ್ಧಿ, ಹೊಂದಾಣಿಕೆ ಇಲ್ಲದ ರಾಜಕಾರಣ. ಕುಟುಂಬ ರಾಜಕಾರಣವನ್ನು ತೆಲಂಗಾಣದಲ್ಲಿ ಕಿತ್ತು ಹಾಕಲಾಗಿದೆ. ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕಿತ್ತು ಹಾಕಲಾಗುವುದು ಎಂದರು. ಪ್ರಾಮಾಣಿಕರು, ಹಿಂದೂ ವಿಚಾರಧಾರೆಯನ್ನು ಹೊಂದಿರುವವರು ಆಡಳಿತ ನಡೆಸಬೇಕು. ವಂಶವಾದ ನಿರ್ಮೂಲನೆ ಮಾಡುವುದೇ ನಮ್ಮ ಗುರಿ. ಇನ್ನು ಮೇಲೆ ಬದಲಾವಣೆ ಆಗಲಿದೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ಬದಲಾವಣೆ ಆಗಲಿದೆ ಎಂದರು.

ನನ್ನನ್ನು ಸೋಲಿಸಲು ಸಾಕಷ್ಟು ಹಣ ಹರಿದು ಬಂತು: ನಮಲ್ಲೇ ಇರುವ ಕೆಲ ವೈರಿಗಳನ್ನು ನನ್ನ ವಿರುದ್ಧ ನಿಲ್ಲಿಸಲಾಯಿತಲ್ಲದೆ, ನನ್ನನ್ನು ಸೋಲಿಸಲು ವಿವಿಧಡೆಯಿಂದ ಸಾಕಷ್ಟು ಹಣ ಹರಿದು ಬಂತು. ಇನ್ನು, ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದರು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ದೂರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಂದರೆ ಬಿಜೆಪಿ ಅನ್ನುವರೂ ಆಗ ಪಕ್ಷದ ಪರ ಕೆಲಸ ಮಾಡಲಿಲ್ಲ. ಆದರೂ ನಮ್ಮ ಮೇಲಿನ ನಂಬಿಕೆ, ಪ್ರೀತಿಯಿಂದ ಪಾಲಿಕೆ ಇತಿಹಾಸದಲ್ಲೇ ಕಂಡರಿದ ಫಲಿತಾಂಶ ಹೊರಬಿತ್ತು ಎಂದರು.

ಕಾಂಗ್ರೆಸಿನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ: ಪ್ರಲ್ಹಾದ್ ಜೋಶಿ

ಇನ್ನು ಎಲ್ಲೆಡೆ ಹೊಂದಾಣಿಕೆ ಮಾಡಿಕೊಂಡೇ ಗೆದ್ದಿದ್ದಾರೆ. ಆದರೆ, ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೇ ಗೆದ್ದೆ ಎಂದ ಅವರು ನಾನು ಸೋಲುತ್ತೇನೆಂದು ಕೆಲವರಿಗೆ ಬಹಳ ಜನರ ನಿರೀಕ್ಷೆಯಿತ್ತು. ಅದೆಲ್ಲವನ್ನೂ ನಮ್ಮ ನಗರದ ಜನ ಸುಳ್ಳು ಮಾಡಿದಿರಿ ಎಂದರು. ವಿಜಯಪುರ ನಗರದಲ್ಲಿ ಸಮಸ್ತ ಹಿಂದೂಗಳು ಒಂದಾಗಿರುವ ಸಂದೇಶವನ್ನು ಇಡೀ ದೇಶಕ್ಕೆ ನೀಡಿದೆ. ಹಾಗಾಗಿ ಸುಮಾರು ೧.೧೫ ಲಕ್ಷ ಇರುವ ಮುಸ್ಲಿಂ ಸಮುದಾಯ ಮತ ನೀಡುವುದೇ ಬೇಡವೆಂದು, ನಮ್ಮ ಸಮುದಾಯಗಳ ಮತಗಳನ್ನಷ್ಟೇ ಪಡೆದು ಗೆದ್ದಿರುವೆ ಎಂದರು.

click me!