ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ/ ದಾವಣಗೆರೆಯಲ್ಲಿ ಶಾಸಕ, ನಿರ್ಮಾಪಕ ಮುನಿರತ್ನ ಹೇಳಿಕೆ/ ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯ ಪಕ್ಷ, ಸಂಘಟನೆ, ಕ್ಷೇತ್ರದ ಬಗ್ಗೆ ನಾನು ತಲೆಕಡಿಸಿಕೊಳ್ಳುತ್ತೇನೆ/ ಸಚಿವ ಸ್ಥಾನ ಬಗ್ಗೆ ಚರ್ಚೆ ಬೇಡ ಕಾಲ ಕೂಡಿ ಬರುತ್ತೆ
ದಾವಣಗೆರೆ(ಜ. 15) ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯ. ಪಕ್ಷ, ಸಂಘಟನೆ, ಕ್ಷೇತ್ರದ ಬಗ್ಗೆ ನಾನು ತಲೆಕಡಿಸಿಕೊಳ್ಳುತ್ತೇನೆ. ಸಚಿವ ಸ್ಥಾನ ಬಗ್ಗೆ ಚರ್ಚೆ ಬೇಡ ಕಾಲ ಕೂಡಿ ಬರುತ್ತೆ.
ಎಲ್ಲದಕ್ಕೂ ದೈವ ಕೃಪೆ ಬೇಕು ಅದು ಬರುತ್ತದೆ. ಯಾವಾಗ ಕಾಲ ಕೂಡಿ ಬರುತ್ತೆ ನೋಡೋಣ ನನಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾರಣ ಏನೂ ಇಲ್ಲ. ಆದರೂ ಯಾಕೆ ಕೈ ಬಿಟ್ಟರು ಗೊತ್ತಿಲ್ಲ. ಸಮಯ ಬಂದಾಗ ಎಲ್ಲಾ ಸರಿ ಹೋಗುತ್ತೆ. ಅಧಿಕಾರ ಸಿಗಲಿಲ್ಲ ಅಂತ ಆರೋಪ-ಪ್ರತ್ಯಾರೋಪ ಮಾಡಲ್ಲ ಎಂದು ಮುನಿರತ್ನ ಹೇಳಿದರು.
ಅಸಮಾಧಾನ ತಣಿಸಲು ಹೈ ಕಮಾಂಡ್ ಮಾಸ್ಟರ್ ಪ್ಲಾನ್
ವರಿಷ್ಠರು, ಸಿಎಂ ಅವರು ನನಗೆ ಸಚಿವ ಸ್ಥಾನ ನೀಡಲು ಬದ್ಧ ಇದ್ದಾರೆ. ಎಲ್ಲದಕ್ಕೂ ಕಾಲ ಕೂಡಿ ಬರುತ್ತೆ. ಸದ್ಯಕ್ಕೆ ಕ್ಷೇತ್ರದ ಖುಣ ತೀರಿಸಲು ಗಮನ ಕೊಡುತ್ತೇನೆ. ಸಿಎಂ ಹೇಳಿದ್ದಾರೆ ಅವರ ಮೇಲೆ ನಂಬಿಕೆ ಇದೆ. ಕಾರಣಾಂತರಗಳಿಂದ ವಿಳಂಬ ಆಗಿದೆ ಅಷ್ಟೆ, ಎಲ್ಲಾ ಸರಿ ಹೋಗುತ್ತದೆ ಎಂದು ಪುನರ್ ಉಚ್ಚಾರ ಮಾಡಿದರು.
ಯತ್ನಾಳ್ ಬಳಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ.. ಸಿಡಿ ಇದೆ ಎಂದು ಗೊಂದಲ ಮಾಡೋದು ಬೇಡ ಸುಳ್ಳು, ಆಧಾರ ರಹಿತ ಆರೋಪ ಬೇಡ ಎಂದರು.
ರಾಜಕೀಯವಾಗಿ ಆರೋಪ ಇದ್ದಿದ್ದೇ, ಈ ರೀತಿ ಮಾತನಾಡಲೇ ಬೇಕು. ಈ ರೀತಿ ಮಾತನಾಡಿದರೆ ಅವರು ರಾಜಕೀಯದಲ್ಲಿ ಇದ್ದಾರೆ ಅಂತ ಅರ್ಥ. ಆದರೆ ಆಧಾರ ಇಟ್ಟುಕೊಂಡು ಮಾತನಾಡಬೇಕು. ಊಹಾಪೋಹ ಮಾತನಾಡೊದು ಬೇಡ. ಸುಭದ್ರ ಸರಕಾರ ಇರುತ್ತೆ ಅಂತ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ಸಿಎಂ ಬದಲಾವಣೆ ಆಗಲ್ಲ ಬಿಎಸ್ ವೈ ಅವರೇ ಮುಂದುವರಿಯುತ್ತಾರೆ ಎಂದು ಹೇಳಿದರು.