Karnataka Assembly Election 2023: ಗುಜರಾತ್ ಚುನಾವಣೆ ಫಲಿತಾಂಶ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಚಟುವಟಿಕೆ

By Suvarna NewsFirst Published Dec 11, 2022, 10:19 PM IST
Highlights

ಗುಜರಾತ್ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಅದರಲ್ಲೂ ಗುಜರಾತ್ ತಂತ್ರವನ್ನೂ ಕರ್ನಾಟಕದಲ್ಲೂ ಅನುಸರಿಸಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ ಎಂಬ ಸುದ್ದಿ ಹಳೆ ತಲೆಗಳಿಗೆ ಆತಂಕ ಸೃಷ್ಟಿಸಿದ್ರೆ, ಹೊಸಬರಲ್ಲಿ ಟಿಕೆಟ್ ಆಸೆ ಚಿಗುರೊಡೆಯುವಂತೆ ಮಾಡಿದೆ.

ವರದಿ: ಗುರುರಾಜ್ ಹೂಗಾರ್, ಏಷ್ಯಾನೆಟ್ ಸುವರ್ಣನ್ಯೂಸ್

ಹುಬ್ಬಳ್ಳಿ (ಡಿ.11): ಗುಜರಾತ್ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಅದರಲ್ಲೂ ಗುಜರಾತ್ ತಂತ್ರವನ್ನೂ ಕರ್ನಾಟಕದಲ್ಲೂ ಅನುಸರಿಸಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ ಎಂಬ ಸುದ್ದಿ ಹಳೆ ತಲೆಗಳಿಗೆ ಆತಂಕ ಸೃಷ್ಟಿಸಿದ್ರೆ, ಹೊಸಬರಲ್ಲಿ ಟಿಕೆಟ್ ಆಸೆ ಚಿಗುರೊಡೆಯುವಂತೆ ಮಾಡಿದೆ. ಇದರಿಂದಾಗಿ ಹೊಸ ಆಕಾಂಕ್ಷಿಳು ಟಿಕೆಟ್ ಲಾಬಿ ಶುರುಮಾಡಿದ್ರೆ ಹಳಬರು ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಈಗಿನಿಂದಲೇ ಪಕ್ಷದ ಪ್ರಭಾವಿ ನಾಯಕರು ಮನೆಗೆ ಲಗ್ಗೆ ಇಟ್ಟಿದ್ದಾರೆ. ಅದರಲ್ಲೂ ಕೇಂದ್ರದಲ್ಲಿ ಪ್ರಭಾವಿ ನಾಯಕರು ಎನಿಸಿಕೊಂಡಿರುವ ಉತ್ತರ ಕರ್ನಾಟಕ ಪವರ್ ಫುಲ್ ಲೀಡರ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಗೆ ಟಿಕೆಟ್ ಆಕಾಂಕ್ಷಿಗಳ ದಂಡೆ ಆಗಮಿಸುತ್ತಿದ್ದು, ಟಿಕೆಟ್ ಕೊಡಿಸುವಂತೆ ಬೆನ್ನು ಬಿದ್ದಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ‌ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ. ಫೆಬ್ರವರಿ ಅಂತ್ಯದ ವೇಳೆ ಚುನಾವಣೆ ದಿನಾಂಕ ನಿಗದಿಯಾಗುವ ಸಾದ್ಯತೆ ಇದ್ದು, ಆಗಲೇ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ.

ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ದಂಡು ಆಗಮಿಸುತ್ರಿದೆ.. ವಿಶೇಷವಾಗಿ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಿಂದ ಮುಖಂಡರು ಪ್ರಹ್ಲಾದ್ ಜೋಶಿ‌ಮನೆಗೆ ಆಗಮಿಸಿ ಅವರನ್ನು ಭೇಟಿ ಮಾಡಿ  ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಮನವಿ ಸಲ್ಲಿಸುತ್ತಿದ್ದಾರೆ.

ಹೈಕಮಾಂಡ್ ಜೊತೆ ಪ್ರಹ್ಲಾದ್ ಜೋಶಿ ಉತ್ತಮ ಸಂಪರ್ಕ ಹೊಂದಿದ್ದು. ಕೇಂದ್ರದಲ್ಲಿ ಪವರ್ ಫುಲ್ ಖಾತೆಗಳ‌ ಹೊಣೆ ಹೊತ್ತಿದ್ದು, ಪ್ರಹ್ಲಾದ್ ಜೋಶಿ ಕೃಪೆ ಇದ್ದರೆ ಟಿಕೆಟ್ ಕೈ ತಪ್ಪುವುದಿಲ್ಲ‌ ಎಂಬ ಭಾವನೆ ಹೊಂದಿರುವ ಆಕಾಂಕ್ಷಿಗಳ ಜೋಶಿ ಅವರನ್ನು ಭೇಟಿಯಾಗಿ ಟಿಕೆಟ್ ಕೊಡಿಸಿ ಅಂತ ಬೇಡಿಕೆ ಇಡುತ್ತಿದ್ದಾರೆ. ಮೂರು ದಿನಗಳ‌ ಸ್ವಕ್ಷೇತ್ರದ ಪ್ರವಾಸಕ್ಕೆ ಆಗಮಿಸಿದ್ದ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ‌ಮಾಡಲು ಕಳೆದ ಎರಡು ದಿನದಿಂದ ಯಾದಗಿರಿ, ಗುರುಮಿಠಕಲ್, ಗಂಗಾವತಿ, ರೋಣ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಆಗಮಿಸಿರುವ ಮುಖಂಡರು ತಮ್ಮ ಕಾರ್ಯಕರ್ತರ ಪಡೆಯೊಂದಿಗೆ  ಆಗಮಿಸಿ ಜೋಶಿ ಎದುರು ಶಕ್ತಿ ಪ್ರದರ್ಶನ ಮಾಡಿದ್ದಾರೆ.

Politics: ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ಭಾರೀ ಟ್ವಿಸ್ಟ್ : ಮಲ್ಕಾಪುರೆ ದೆಹಲಿಗೆ ದೌಡು

ಕಾರ್ಯಕರ್ತರು, ಮುಖಂಡರಿಂದ‌ ತುಂಬಿದ ಪ್ರಹ್ಲಾದ್ ಜೋಶಿ‌ ನಿವಾಸ:
ಬೆಳಂಬೆಳಗ್ಗೆ ಹುಬ್ಬಳ್ಳಿಯ ಪ್ರಹ್ಲಾದ್  ಜೋಶಿ ನಿವಾಸಕ್ಕೆ ಆಗಮಿಸಿದ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳ  ಮುಖಂಡರು, ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡು ನಮಗೆ ಟಿಕೆಟ್ ಕೊಡಿ ಅಂತ ದುಂಬಾಲು‌ ಬಿದ್ದಿದ್ದಾರೆ. ಅದರಲ್ಲೂ  ಗುಜರಾತ್ ತಂತ್ರವನ್ನೂ ಕರ್ನಾಟಕದಲ್ಲೂ ಅನುಸರಿಸಲು ಬಿಜೆಪಿ ಕೇಂದ್ರ ನಾಯಕರು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು  ಈಗಿನಿಂದಲೇ  ಲಾಬಿಗಿಳಿಯುವಂತೆ ಮಾಡಿದೆ.

Mysuru: ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಸಿದ್ಧತೆ

ಬಿಜೆಪಿಯ ಭದ್ರ ಕೋಟೆಯಂತಿರುವ, ಈಗಾಗಲೇ  ಗೆದ್ದಿರುವ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು  ಬಿಜೆಪಿಯ ಕೇಂದ್ರ ವರಿಷ್ಠ ಮಂಡಳಿ  ಪ್ಲ್ಯಾನ್  ಮಾಡಿದೆಯಂತೆ‌  ಇನ್ನು  ವಿರೋಧಿ ಅಲೆ ಇರುವ ಕ್ಷೇತ್ರಗಳ ಬಗ್ಗೆಯೂ  ವಿವರವಸದ ಮಾಹಿತಿ ಕಲೆ‌ಹಾಕಿ ಟಿಕೆಟ್ ಹಂಚಿಕೆ ಮಾಡಲಾಗ್ತೆ.. ಒಂದು ವೇಳೆ ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದ್ರೆ ಅಂಥವರಿಗೆ ಕಷ್ಟವಾಗಲಿದ್ದು, ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಇಲ್ಲದೇ ಇದ್ರೆ ಟಿಕೆಟ್ ಮಿಸ್ ಆಗುತ್ತೆ ಎನ್ನಲಾಗಿದೆ. ಈ ಹಿನ್ಜೆಲೆಯಲ್ಲಿ ಟಿಕೆಟ್ ಖಾತ್ರಿಪಡಿಸಿಕೊಳ್ಳಲು ಉತ್ತರ ಕರ್ನಾಟಕ ಹಲವು ನಾಯಕರು ಜೋಶಿ ದುಂಬಾಲು ಬಿದ್ದಿದ್ದಾರೆ.

click me!