* ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರಿಗೆ ಹೆಚ್ಚಾಯ್ತು ಭದ್ರತೆ
* ಭದ್ರತೆ ಹೆಚ್ಚಿಸಿದ ಪೊಲೀಸ್ ಇಲಾಖೆ
* ಈಶ್ವರಪ್ಪ ಬೆಂಗಾವಲು ವಾಹನದ ಜತೆ ಮತ್ತೊಂದು ವಾಹನ ನಿಯೋಜನೆ
ಶಿವಮೊಗ್ಗ, (ಆ.13): ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಹೌದು..ಈಶ್ವರಪ್ಪ ಬೆಂಗಾವಲು ವಾಹನದ ಜತೆ ಮತ್ತೊಂದು ವಾಹನ ನಿಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಈಶ್ವರಪ್ಪಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ, ಪ್ರತೀಕಾರದ ಕಿಚ್ಚು ಹೊತ್ತಿಸಿದ ಈಶ್ವರಪ್ಪ
7ರಿಂದ 8 ಸಿಬ್ಬಂದಿ ಹೊಂದಿರುವ ಮತ್ತೊಂದು ವಾಹನದ ವ್ಯವಸ್ಥೆ ಮಾಡಿಕೊಡಲಾಗಿದೆ. ಕೆಲವು ದಿನಗಳಿಂದ ಈಶ್ವರಪ್ಪ ಹೇಳಿಕೆ ಸಾಕಷ್ಟು ಚರ್ಚೆಯಲ್ಲಿದ್ದು, ಹಾಗೂ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಅಲ್ಲದೇ ಈಗಾಗಲೇ ಅವರ ವಿರುದ್ಧ 2 ದೂರು ದಾಖಲಾಗಿದೆ. ಈ ಹಿನ್ನೆಲೆ ಅವರಿಗೆ ಹೆಚ್ಚಿನ ಬಿಗಿ ಭದ್ರತೆ ಕೊಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಭದ್ರತೆ ಯಾಕೆ ಅಂತ ಗೊತ್ತಿಲ್ಲ. ಗೃಹಮಂತ್ರಿಯವರಿಗೆ ನನ್ ಮೇಲೆ ಪ್ರೀತಿ ಇರಬಹುದು. ಹಾಗಾಗಿ ಭದ್ರತೆ ಹೆಚ್ಚಿಸಿರಬಹುದು ಎಂದು ಹೇಳಿದರು ಅಷ್ಟೇ.
ಅವರು ಒಂದು ಕೊಟ್ರೆ ನೀವು ಅದರಿಂದಲೇ ಹೊಡೆದು ಎರಡು ಹೊರ ತೆಗೆಯಿರಿ ಎಂದು ಬಿಜೆಪಿ ಸಭೆಯಲ್ಲಿ ಪ್ರಚೋಧನಕಾರಿ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕಾಂಗ್ರೆಸ್ ನಾಯಕರ ವಿರುದ್ಧ ವಿವದಾತ್ಮಕ ಹೇಳಿಕೆ ನೀಡಿದ್ದರು. ಇದು ಸಹ ಭಾರೀ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಪೊಲೀಸ್ ಇಲಾಖೆ ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ ಒದಗಿಸಿದೆ.