ಸಿದ್ದರಾಮಯ್ಯ ಅವರೇ ಶಾಸಕಿಯರಿಗೆ ಪ್ರಮುಖ ಖಾತೆ ನೀಡಿ: ಪೂಜಾ ಗಾಂಧಿ

Published : May 20, 2023, 04:18 AM IST
ಸಿದ್ದರಾಮಯ್ಯ ಅವರೇ ಶಾಸಕಿಯರಿಗೆ ಪ್ರಮುಖ ಖಾತೆ ನೀಡಿ: ಪೂಜಾ ಗಾಂಧಿ

ಸಾರಾಂಶ

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಮತ್ತು ತಮ್ಮ ಪಕ್ಷದ ಶಾಸಕರೆಲ್ಲರಿಗೂ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆಗಳು. 

ಪೂಜಾ ಗಾಂಧಿ, ಖ್ಯಾತ ಚಿತ್ರನಟಿ

ಮಹಿಳೆಯನ್ನು ದೇವತೆ, ದುರ್ಗಿ, ಸಂಸಾರದ ಕಣ್ಣು, ಮಗುವಿನ ಮೊದಲ ಗುರು, ಸಮಾಜದ ಆಸರೆ ಎಂದು ಗುರುತಿಸುವ ನಾವು, ಆಕೆಗೆ ನ್ಯಾಯಯುತವಾಗಿ ಸಲ್ಲಬೇಕಾದ ರಾಜಕೀಯ ಅಧಿಕಾರ ನೀಡುವ ಸಂದರ್ಭಗಳಲ್ಲಿ ಎಡವುತ್ತೇವೆ. ಅದನ್ನು ಸರಿಪಡಿಸಲು ಇದು ಉತ್ತಮ ಅವಕಾಶ. ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಮತ್ತು ತಮ್ಮ ಪಕ್ಷದ ಶಾಸಕರೆಲ್ಲರಿಗೂ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆಗಳು. 

ನಿಮ್ಮ ಮುಂದಿರುವ ತಕ್ಷಣದ ಪ್ರಮುಖ ಕಾರ್ಯವೆಂದರೆ ಸಂಪುಟ ಸಚಿವರ ಆಯ್ಕೆ ಮತ್ತು ಖಾತೆಗಳು ಹಂಚಿಕೆ. ಪ್ರಮುಖ ಖಾತೆಗಳೆಂದು ಗುರುತಿಸಿಕೊಂಡಿರುವ ಗೃಹ, ಹಣಕಾಸು, ನೀರಾವರಿ, ಇಂಧನ, ಸಾರಿಗೆ, ಆರೋಗ್ಯ, ಸಹಕಾರ ಖಾತೆಗಳು ಪ್ರಮುಖ ಪುರುಷ ನಾಯಕರಿಗೂ, ಮಹಿಳೆ ಮತ್ತು ಮಕ್ಕಳು, ಮುಜರಾಯಿಗಳಂತಹ ಖಾತೆಗಳನ್ನು ಮಹಿಳಾ ಸದಸ್ಯರಿಗೂ ಕೊಡುತ್ತಿರುವುದು ಹೆಚ್ಚಿನ ಸಮಯದಿಂದ ನಡೆದು ಬರುತ್ತಿರುವ ರೂಢಿ. ಈ ಸಲದ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಒಟ್ಟು 11 ಮಹಿಳೆಯರಲ್ಲಿ 4 ಮಹಿಳೆಯರು ಜಯಶೀಲರಾಗಿದ್ದು, ಉಳಿದ 7 ಮಹಿಳೆಯರು ಪರಾಜಿತ ಅಭ್ಯರ್ಥಿಗಳಾಗಿದ್ದಾರೆ. ಹಲವಾರು ಮಹಿಳಾ ಟಿಕೆಟ್‌ ಆಕಾಂಕ್ಷಿಗಳು ಗೆಲ್ಲಲು ಶಕ್ತರಿದ್ದರೂ, ಪಕ್ಷದ ಸಲಹೆ ಮೇರೆಗೆ ಕ್ಷೇತ್ರಗಳನ್ನು ಪುರುಷ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಪಕ್ಷದ ವಿವಿಧ ಘಟಕಗಳಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ, ಸಮರ್ಥ ಮಹಿಳೆಯರಿದ್ದಾರೆ.

ಸೋಲಿಗೆ ವೈಯಕ್ತಿಕ ನಿರ್ಧಾರಗಳು ಕಾರಣವಾದ್ರೆ ತಿದ್ದಿಕೊಳ್ಳುವೆ: ಕುಮಾರ್‌ ಬಂಗಾರಪ್ಪ

ಮಹಿಳಾ ಶಕ್ತಿಯನ್ನು ಗುರುತಿಸಿ: ಲಕ್ಷ್ಮೀ ಹೆಬ್ಬಾಳ್ಕರ್‌ರವರು 56 ಸಾವಿರ ಮತಗಳ ಅದ್ಭುತ ಅಂತರದಿಂದ ಗೆದ್ದಿದ್ದರೆ, ರೂಪಕಲಾ ಹಾಗೂ ಖನೀಜ್‌ ಫಾತಿಮಾ ಕೂಡ ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ. ನಯನಾ ಮೋಟಮ್ಮ ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶಿಸುವ ಭಾಗ್ಯ ಪಡೆದಿದ್ದಾರೆ. ತಮ್ಮ ಪಕ್ಷದವರೇ ಆದ ಲತಾ ಮಲ್ಲಿಕಾರ್ಜುನ್‌ರವರು ಪಕ್ಷೇತರರಾಗಿ ಗೆಲುವು ಸಾಧಿಸಿ ಸಾಧನೆ ಮಾಡಿದ್ದಾರೆ. 

ಜಯನಗರ ಕ್ಷೇತ್ರದಲ್ಲಿ ಕೇವಲ 16 ಮತಗಳ ಅಂತರದಿಂದ ಪರಾಜಿತರಾಗಿರುವ ಸೌಮ್ಯಾರೆಡ್ಡಿ, ಪಕ್ಷದ ಪ್ರಮುಖ ಉಮೇದುವಾರರಾಗಿದ್ದ ಅಂಜಲಿ ನಿಂಬಾಳ್ಕರ್‌, ಕುಸುಮಾ ರವಿ, ಪಕ್ಷಕ್ಕಾಗಿ ಟಿಕೆಟ್‌ ತ್ಯಾಗ ಮಾಡಿದ ಮಾಜಿ ಸಚಿವೆಯಾದ ಉಮಾಶ್ರೀ, ಮಾಜಿ ಮೇಯರ್‌ ಗಂಗಾಂಬಿಕೆ, ಪದ್ಮಾವತಿ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಭವ್ಯಾ ನರಸಿಂಹಮೂರ್ತಿ, ಪಕ್ಷದ ವಕ್ತಾರರಾಗಿ ಅತ್ಯುತ್ತಮವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಐಶ್ವರ್ಯಾ ಮಹದೇವ್‌ ಮತ್ತು ಲಾವಣ್ಯಾ ಬಲ್ಲಾಳ್‌ರವರಂತಹ, ಯಾವುದೇ ಜವಾಬ್ದಾರಿಯನ್ನು, ಯಾವ ಪುರುಷ ನಾಯಕರಿಗೂ ಕಡಿಮೆ ಇಲ್ಲದಂತೆ ನಿಭಾಯಿಸಬಲ್ಲ ಯೋಗ್ಯ ಮಹಿಳಾ ಶಕ್ತಿ ನಿಮ್ಮ ಪಕ್ಷದಲ್ಲಿಯೂ ಇದೆ. ಮೇಲೆ ಹೆಸರಿಸಿರುವ ಮತ್ತು ಸ್ಥಳದ ಅಭಾವದಿಂದ ಹೆಸರಿಸಲಾಗದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ದುಡಿಯುತ್ತಿರುವ ಮಹಿಳಾ ನಾಯಕಿಯರ ನಾಯಕತ್ವದ ಕೌಶಲ್ಯವನ್ನು ರಾಜ್ಯದ ಅಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಬಹುದಾದ ಅವಕಾಶ ನಿಮ್ಮದಾಗಿದೆ.

ಮಹಿಳೆಯರ ಪರವಾಗಿ 5 ಬೇಡಿಕೆ: ಈ ರಾಜ್ಯದ ಮಹಿಳೆಯಾಗಿ, ಮಹಿಳೆಯರ ಪರವಾಗಿ ನಿಮ್ಮಲ್ಲೊಂದು ವಿನಂತಿ.
1.ಕನಿಷ್ಠ 15% (6) ಸಚಿವ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿ.

2.ಅತ್ಯಂತ ಪ್ರಮುಖವೆಂದು ಬಿಂಬಿತವಾಗಿರುವ ಕನಿಷ್ಠ ಎರಡು ಖಾತೆಗಳನ್ನು ಮಹಿಳಾ ಸಚಿವರಿಗೆ ಕಾಯ್ದಿರಿಸಿ.

3.ಮಹಿಳೆಯರಿಗೆ ತಾವು ನೀಡಬಹುದಾದ 6 ಸಚಿವ ಸ್ಥಾನಗಳಲ್ಲಿ, ಕನಿಷ್ಠ 2 ಸ್ಥಾನಗಳನ್ನು ಕೆಳಮನೆ ಸದಸ್ಯರಿಗೆ ಮತ್ತು ಉಳಿದ ನಾಲ್ಕು ಸ್ಥಾನಗಳನ್ನು ಮೇಲ್ಮನೆ ಸದಸ್ಯರು, ಸೋತ ಅಭ್ಯರ್ಥಿಗಳು, ಕೊನೆ ಹಂತದಲ್ಲಿ ಟಿಕೆಟ್‌ ತಪ್ಪಿದವರಿಗೆ ಮತ್ತು ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅವಕಾಶ ಕಲ್ಪಿಸಿ.

4.ನಿಗಮ ಮಂಡಳಿಗಳಿಗೆ ನೇಮಕಾತಿಗಳು ಹಲವಾರು ರಾಜಕೀಯ ಮತ್ತು ಆಡಳಿತ ಕಾರಣಗಳಿಂದ ತಿಂಗಳುಗಳು ಮತ್ತು ವರ್ಷಗಳೇ ತೆಗೆದುಕೊಳ್ಳುವುದರಿಂದ, ಕೆಪಿಸಿಸಿ ಅಧ್ಯಕ್ಷರು ಪ್ರಥಮ ಆದ್ಯತೆಯಲ್ಲಿ 30% ಸ್ಥಾನಗಳನ್ನು ಮಹಿಳಾ ನಾಯಕಿಯರಿಗೆಂದು ಮೀಸಲಿರಿಸಿ, ಪ್ರಥಮ 30 ದಿನಗಳ ಒಳಗಾಗಿ ಮಹಿಳೆಯರ ಕೋಟಾವನ್ನು ಭರ್ತಿ ಮಾಡಿ.

5.ಅತ್ಯಂತ ಪ್ರಮುಖವಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ತಾವು ಅಥವಾ ಉಪಮುಖ್ಯಮಂತ್ರಿಗಳೇ ಉಳಿಸಿಕೊಂಡು ಇಲಾಖೆಗೆ ಮೂರು ಪಟ್ಟು ಅನುದಾನವನ್ನು ಹೆಚ್ಚಿಸಿ, ಈ ಖಾತೆಯನ್ನು ಅತ್ಯಂತ ಮಹತ್ವದ, ಬೇಡಿಕೆಯುಳ್ಳ ಖಾತೆಯನ್ನಾಗಿಸಿ.

ಮಾದರಿ ಅಂಗನವಾಡಿ ರೂಪಿಸಿ: ಮಹಿಳೆಯರ ಉನ್ನತಿ ಮತ್ತು ಅಂಗನವಾಡಿಯ ಮಕ್ಕಳ ಸರ್ವ ರೀತಿಯ ಬೆಳವಣಿಗೆ, ನಮ್ಮ ರಾಜ್ಯದ ಒಳಿತಿಗಾಗಿ ಅತ್ಯಂತ ಮುಖ್ಯವೆಂದು ತಾವು ಭಾವಿಸಿದ್ದೇರೆಂದು ನಂಬಿದ್ದೇವೆ. ಕನ್ನಡ ನೆಲ, ಜಲ, ಭಾಷೆಯ ಭವಿಷ್ಯದ ಬೇರುಗಳಾದ ಕನ್ನಡದ ಮಕ್ಕಳ ಪಾಲನೆ, ಪೋಷಣೆ, ಆರೋಗ್ಯ, ಕಲಿಕೆ, ಚಲನೆ, ಭಾಷೆ, ವಿಜ್ಞಾನ, ಗಣಿತ ತಂತ್ರಜ್ಞಾನದ ಪರಿಚಯ, ಕಲೆ, ನಾಟಕ, ವೈಯಕ್ತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗಾಗಿ, 6 ತಿಂಗಳ ಮಗುವಿನಿಂದ 6 ವರ್ಷದವರೆಗೆ ಸರ್ಕಾರವೇ ಜವಾಬ್ದಾರಿ ಹೊತ್ತು, ಕರ್ನಾಟಕದ ಅಂಗನವಾಡಿಗಳು ರಾಷ್ಟ್ರಕ್ಕೆ ಮಾದರಿಯಾಗುವಂತೆ ಮಾರ್ಪಡಿಸಿದ ಶ್ರೇಯಸ್ಸು ತಮ್ಮದಾಗಲಿ.

ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!

ಮಹಿಳೆಯನ್ನು ದೇವತೆ, ದುರ್ಗಿ, ಸಂಸಾರದ ಕಣ್ಣು, ಮಗುವಿನ ಮೊದಲ ಗುರು, ಸಮಾಜದ ಆಸರೆ ಎಂದು ಗುರುತಿಸುವ ನಾವು, ಆಕೆಗೆ ನ್ಯಾಯಯುತವಾಗಿ ಸಲ್ಲಬೇಕಾದ ರಾಜಕೀಯ ಅಧಿಕಾರ ನೀಡುವ ಸಂದರ್ಭಗಳೆಲ್ಲದರಲ್ಲೂ ಎಡವುತ್ತಿರುವುದನ್ನು, ಸರಿಪಡಿಸಿದ ಗೌರವಕ್ಕೆ ಪಾತ್ರರಾಗಲು ಇದು ಅತ್ಯಂತ ಉತ್ತಮ ಅವಕಾಶವೆಂದು ನಂಬಿದ್ದೇನೆ. ಮೇಲಿನ ವಿಷಯಗಳನ್ನು ನೀವು ಅನುಷ್ಠಾನಗೊಳಿಸಿದರೆ ರಾಜಕೀಯ ಪಕ್ಷಗಳು ಕೇವಲ ಮತಕ್ಕಾಗಿ ಮಾತ್ರ ಮಹಿಳೆಯರನ್ನು ನೆನಪಿಸಿಕೊಳ್ಳುತ್ತಾರೆ ಎಂಬ ಅಪವಾದದಿಂದ ಪಾರಾಗಿ, ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಶ್ರೇಯಸ್ಸು ತಮಗೆ ಲಭಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!