Ramya vs DK Shivakumar ನನ್ನ ಬೆನ್ನಿಗೆ ಚೂರಿ ಹಾಕಿದ್ದು ಡಿಕೆಶಿ, ರಮ್ಯಾ ವಾಗ್ದಾಳಿ!

By Kannadaprabha NewsFirst Published May 13, 2022, 4:35 AM IST
Highlights

- ನನ್ನ ಮೇಲೆ ಹಣ ದುರ್ಬಳಕೆ ಆರೋಪ ಮಾಡಿ ಹತ್ತಿಕ್ಕಿದರು
- ನನಗೆ ಅವಕಾಶ ಕೊಟ್ಟೆಎನ್ನುವವರೇ ಅವಕಾಶವಾದಿಗಳ
- ಕಾಂಗ್ರೆಸ್ ಆಂತರಿಕ ಜಗಳದಿಂದ ಬಯಲಾಯ್ತು ಟ್ರೋಲ್ ರಹಸ್ಯ

ಬೆಂಗಳೂರು(ಮೇ.13): ‘ನನಗೆ ಅವಕಾಶ ನೀಡಿದ್ದು, ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತ್ರ. ನನಗೆ ಅವಕಾಶ ನೀಡಿದ್ದೇನೆ ಎಂದು ಈಗ ಹೇಳಿಕೊಳ್ಳುತ್ತಿರುವವರೇ ಅವಕಾಶವಾದಿಗಳು. ನನ್ನ ಬೆನ್ನಿಗೆ ಚೂರಿ ಹಾಕಿದವರು ಹಾಗೂ ನನ್ನ ಮೇಲೆ ಹಣ ದುರ್ಬಳಕೆ ಆರೋಪ ಹೊರಿಸಿ ಹತ್ತಿಕ್ಕಿದವರು.’- ಈ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮಾಜಿ ಅಧ್ಯಕ್ಷೆ ರಮ್ಯಾ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಸಚಿವ ಅಶ್ವತ್‌್ಥ ನಾರಾಯಣ ಅವರು ಕಾಂಗ್ರೆಸ್‌ ನಾಯಕ ಎಂ.ಬಿ. ಪಾಟೀಲ್‌ ಅವರನ್ನು ಭೇಟಿ ಮಾಡಿ ಹಗರಣಗಳ ಬಗೆಗಿನ ಕಾಂಗ್ರೆಸ್‌ ದಾಳಿಯಿಂದ ರಕ್ಷಣೆ ಕೋರಿದರು ಎಂಬರ್ಥ ಬರುವಂತೆ ಶಿವಕುಮಾರ್‌ ನೀಡಿದ್ದ ಹೇಳಿಕೆಯನ್ನು ರಮ್ಯಾ ಟ್ವೀಟ್‌ ಮೂಲಕ ಟೀಕಿಸಿದ್ದರು. ಇದಕ್ಕೆ ಶಿವಕುಮಾರ್‌ ಬೆಂಬಲಿಗರು ರಮ್ಯಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದ್ದರು. ಇದರಿಂದ ಕ್ರುದ್ಧರಾಗಿ ರಮ್ಯಾ ಸರಣಿ ಟ್ವೀಟ್‌ ಮಾಡಿದ್ದಾರೆ.

ರಮ್ಯಾ ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಲಿ ಎಂದ MLC ಚನ್ನರಾಜ ಹಟ್ಟಿಹೊಳಿ

ಕನ್ನಡ ಸುದ್ದಿ ವಾಹಿನಿಗಳಲ್ಲಿ ನಾನು 8 ಕೋಟಿ ರು. ಹಣದೊಂದಿಗೆ ಪರಾರಿಯಾಗಿದ್ದೇನೆ ಎಂದು ಸುದ್ದಿ ಬಿತ್ತರಿಸಿದ್ದರು. ಆಗ ಮೌನವಾಗಿದ್ದೇ ನಾನು ಮಾಡಿದ್ದ ತಪ್ಪು. ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಆರೋಪಗಳನ್ನು ಹೊತ್ತು ನಾನು ಜೀವನ ದೂಡಲಾರೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ವೇಣುಗೋಪಾಲ್‌ ಅವರಿಗೆ ಮನವಿ ಮಾಡಿದ್ದಾರೆ.

‘ಕಚೇರಿ’ ಎಂದರೆ ಡಿಕೆಶಿ ನೇತೃತ್ವದ ರಾಜ್ಯ ಕಾಂಗ್ರೆಸ್‌- ರಮ್ಯಾ
‘ನನ್ನನ್ನು ಟ್ರೋಲ್‌ ಮಾಡಲು ‘ಕಚೇರಿಯು’ ಕಾಂಗ್ರೆಸ್‌ ಹಿರಿಯ ನಾಯಕರು, ಕಾರ್ಯಕರ್ತರಿಗೆ ಈ ಸಂದೇಶಗಳನ್ನು ಕಳುಹಿಸಿದೆ. ನನ್ನನ್ನು ಟ್ರೋಲ್‌ ಮಾಡಲು ನೀವು ತೊಂದರೆ ತೆಗೆದುಕೊಳ್ಳಬೇಡಿ. ನಾನೇ ಮಾಡುತ್ತೇನೆ’ ಎಂದು ಹೇಳಿ ಎಲ್ಲಾ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟರ್‌ ಖಾತೆಯಲ್ಲಿ ಬುಧವಾರ ರಮ್ಯಾ ಹಂಚಿಕೊಂಡಿದ್ದರು. ಇದೀಗ ಗುರುವಾರ ‘ಕಚೇರಿ’ ಎಂದರೆ ಯಾರು ಎಂಬುದನ್ನೂ ಸ್ಪಷ್ಟಪಡಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಕಾಂಗ್ರೆಸ್‌ (ಕಚೇರಿ) ಎಂದು ಹೇಳಿದ್ದಾರೆ. ತನ್ಮೂಲಕ ತಮ್ಮ ವಿರುದ್ಧ ಪಿತೂರಿ ಸಂದೇಶಗಳನ್ನು ಬಿತ್ತಿರುವುದು ರಾಜ್ಯ ಕಾಂಗ್ರೆಸ್‌ ಕಚೇರಿ ಎಂದೂ ಆರೋಪಿಸಿದ್ದಾರೆ.

ಟವಲ್ ಹಾಕೋಕೆ ಬಂದ ರಮ್ಯಾ, ಮೋಹಕತಾರೆಗೆ ಮೊಹಮ್ಮದ್ ನಲಪಾಡ್ ಚಾಟಿ!

ಟವಲ್ ಹಾಕೋಕೆ ಬಂದ್ರಾ , ನಲಪಾಡ್ ಕಿಡಿ
ರಮ್ಯಾಗೆ ಸಂಥಿಂಗ್‌ ಅಟೆನ್ಶನ್‌ ಸೀಕಿಂಗ್‌ ಪ್ಲಾಬ್ಲೆಂ ಇದೆ, ಇಲ್ಲಾಂದ್ರೆ ಸಚಿವ ಅಶ್ವತ್ಥನಾಯರಾಯಣ- ಎಂ.ಬಿ. ಪಾಟೀಲ್‌ ಭೇಟಿಗೂ ರಮ್ಯಾಗೂ ಏನು ಸಂಬಂಧ, ರಮ್ಯಾ ಅವರ ಹಳೆಯ ಟ್ವೀಟ್‌ಗಳನ್ನು ತೆಗೆದುಕೊಂಡು ನೋಡಿದ್ರೆ ಯಾವುದೋ ಸಿನಿಮಾಗಳ ಬಗ್ಗೆ ಟ್ವೀಟ್‌ ಮಾಡಿಕೊಂಡಿದ್ದರು. ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್‌ಗಳನ್ನು ಮಾಡಿಲ್ಲ, ಹಾಗಿರುವಾಗ ಸಡನ್ನಾಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೆ. ಅಂದ್ರೆ ಅದರಲ್ಲಿ ಯಾವುದೋ ಒಳ ಉದ್ದೇಶ ಇದೆ, ಹೀಗಾಗಿ ರಮ್ಯಾಗೆ ಯಾರೂ ಹೆಚ್ಚು ಇಂಪಾರ್ಟೆ®್ಸ… ಕೊಡಬಾರದು ಎಂದು ನಲಪಾಡ್‌ ಮಾಧ್ಯಮಗಳಿಗೆ ಕೈಮುಗಿದು ಕೇಳಿಕೊಂಡರು.

ರಮ್ಯಾ ಅವರು ಒಳ್ಳೆಯವರೇ, ಚಿಕ್ಕ ವಯಸ್ಸಿನಲ್ಲಿ ಸಂಸದರಾದವರು. ರಮ್ಯಾ ಈಗಾಗಲೇ ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ, ನಾನು ರಮ್ಯಾ ಅವರ ವಿರುದ್ಧ ಇಲ್ಲ, ಆದ್ರೆ ಅವರು ಇಂತಹ ಚೀಪ್‌ ಪಾಲಿಟಿP್ಸ… ಮಾಡಬಾರದು, ಅವರು ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಸಲಹೆ ಮಾಡಿದರು.

click me!