ಅಹಿಂದಾ ಪರ ಎನ್ನುವ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ನಟ ಚೇತನ್ ಅಹಿಂಸಾ

Published : Jul 15, 2024, 03:58 PM IST
ಅಹಿಂದಾ ಪರ ಎನ್ನುವ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ನಟ ಚೇತನ್ ಅಹಿಂಸಾ

ಸಾರಾಂಶ

ಅಹಿಂದಾ ಹಾಗೂ ದಲಿತರ ಪರವೆಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಕಳದೊಂದು ವರ್ಷದಿಂದ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ (ಜು.15): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದಾ ಹಾಗೂ ದಲಿತರ ಪರವೆಂದು ಹೇಳಿಕೊಳ್ಳುತ್ತಾರೆ. ಆದರೆ, ಕಳದೊಂದು ವರ್ಷದಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸಿಲುಕಿದೆ ಎಂದು ನಟ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ದಲಿತರ SCP/TSP ಹಣವನ್ನು ಯಾರಿಗೆ ಖರ್ಚು ಮಾಡುತ್ತಿದೆ. ಕಳೆದ ಒಂದು ವರ್ಷದಿಂದ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸಿಲುಕಿದೆ. ಸಿಎಂ ಅಹಿಂದಾ ಪರ, ದಲಿತರ ಪರ ಅಂತಾರೆ. ಆದ್ರೆ 14500 ಕೋಟಿ ದಲಿತರ ಹಣ ಎಲ್ಲಿಗೆ ಹೋಯ್ತು. ಅವರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿದ್ದಾರೆ. ದಲಿತರ ಮೂಲ ತತ್ವಗಳ ಬಗ್ಗೆ ಎಷ್ಟು ಮಾತ್ರ ಕಾಳಜಿ ಇದೆ ಎಂದು ಗೊತ್ತಾಗುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ತರಕಾರಿ ಮಾರುವ ಮಹಿಳೆಯನ್ನು ಕೊಂದ ಮಂಗ; ಕಪಿಚೇಷ್ಟೆಗೆ ಬಲಿಯಾಯ್ತು ಜೀವ

ಸರ್ಕಾರದ ನಡೆಯನ್ನು ಯಾವಾಗಲೂ ಪ್ರಶ್ನೆ ಮಾಡುತ್ತಿದ್ದ ಬುದ್ದಿಜೀವಿಗಳು ಅಧಿಕಾರದ ಆಸೆಯಿಂದ ತುಟಿ ಬಿಚ್ಚದೇ ಇದ್ದಾರೆ. ವಾಲ್ಮೀಕಿ ಹಗರಣ ಬಗ್ಗೆ ಎಸ್ ಐಟಿ ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ. ಸರ್ಕಾರದ ತಾಳಕ್ಕೆ ತಕ್ಕಂತೆ ಆಡುತ್ತಿದೆ, ಸರಿಯಾದ ತನಿಖೆ ಮಾಡುತ್ತಿಲ್ಲ. ಸಾಕಷ್ಟು ಹಗರಣಗಳ ಆರೋಪ ಇರೋ ನಾಗೇಂದ್ರಗೆ ಸಚಿವ ಸ್ಥಾನ ನೀಡಬೇಕಿತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಸತತ 13 ಗಂಟೆಗಳ ವಿಚಾರಣೆಯ ನಂತರ ಸಚಿವ ಬಿ. ನಾಗೇಂದ್ರ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಇಡಿ ಬಂಧಿಸಿದೆ. ಒಳ್ಳೆಯ ಕೆಲಸ. ವಾಲ್ಮೀಕಿ ಅಭಿವೃದ್ಧಿ ಮಂಡಳಿಯ ದುರುಪಯೋಗದ ವಿಷಯದಲ್ಲಿ ಎಸ್ಐಟಿ (ರಾಜ್ಯ ಪೊಲೀಸರು) ನಿರ್ಣಾಯಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದರೆ, ಇಡಿ (ಕೇಂದ್ರ ಸಂಸ್ಥೆ) ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ಕಾಂಗ್ರೆಸ್ ಎಲ್ಲಾ ಪಕ್ಷಗಳಂತೆಯೇ ತನ್ನ ಪಕ್ಷದ ಸದಸ್ಯರನ್ನು ತಪ್ಪು ಮಾಡಿದರೆ ಶಿಕ್ಷಿಸುವ ಬದಲು ಅವರ ತಪ್ಪುಗಳನ್ನು ಮುಚ್ಚಿಹಾಕುತ್ತದೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು - ಹೊನ್ನಾವರ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾಟ

ಇನ್ನು ಎಸ್ಸಿ ಎಸ್ಟಿ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸುವುದು ಅಪರಾಧವಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಆದರೆ, ಇದೆಷ್ಟು ದೋಷಪೂರಿತ ಗೊತ್ತಾ? ಲಂಚ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಈ ಭ್ರಷ್ಟಾಚಾರದ ಆರೋಪಿ ಸಚಿವರು ನಾಳೆ ಹೇಳಿಕೊಂಡರೆ ಆಶ್ಚರ್ಯವಾಗುವುದಿಲ್ಲ. ಇಂತಹ ಅಜ್ಞಾನದ ಶಾಸಕರಿಗೆ ಎಸ್ಸಿ, ಎಸ್ಟಿಗಳಿಗೆ ನ್ಯಾಯ ಅಥವಾ ನೈತಿಕ ನಾಯಕತ್ವದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ