ಚುನಾವಣೆ: ಸೇಡು ತೀರಿಸಿಕೊಂಡ ಕಾಂಗ್ರೆಸ್, ಮಕಾಡೆ ಮಲಗಿದ ಬಿಜೆಪಿ...!

By Suvarna NewsFirst Published Dec 14, 2020, 6:50 PM IST
Highlights

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.

ಜೈಪುರ, (ಡಿ.14):  ಇತ್ತೀಚೆಗೆ ನಡೆದ ಪಂಚಾಯತ್ ರಾಜ್ ಚುನಾವಣೆಯಲ್ಲಿ ಬಿಜೆಪಿ 12 ಜಿಲ್ಲಾ ಪರಿಷತ್ ನಲ್ಲಿ ಗೆದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೇವಲ ಐದು ಜಿಲ್ಲಾ ಪರಿಷತ್ ನಲ್ಲಿ ಜಯಗಳಿಸುವ ಮೂಲಕ ಮುಖಭಂಗ ಅನುಭವಿಸಿತ್ತು. 

ಆದ್ರೆ, ಇದೀಗ  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಆಡಳಿತಾರೂಢ ಕಾಂಗ್ರೆಸ್ ತನ್ನ ತಾಕತ್ತು ತೋರಿಸಿದೆ. ಈ ಮೂಲಕ ಪಂಚಾಯತ್ ರಾಜ್ ಚುನಾವಣೆಯಲ್ಲಿ ಸೋಲಿನ ಸೇಡು ತೀರಿಸಿಕೊಂಡಿದೆ.

ರಾಜಸ್ಥಾನ ಪಂ. ಚುನಾವಣೆ: ಭಿನ್ನಮತಕ್ಕೆ ಬೆಲೆ ತೆತ್ತ ಕಾಂಗ್ರೆಸ್‌!

ಹೌದು...ರಾಜಸ್ಥಾನದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.  ಬಿಜೆಪಿ ಮುಖಂಭವಾಗಿ ಅನುಭವಿಸಿದೆ. 

12 ಜಿಲ್ಲೆಗಳಲ್ಲಿನ 1,775 ವಾರ್ಡ್​ಗಳಲ್ಲಿ ಕಾಂಗ್ರೆಸ್ 619 ಸೀಟು ಗೆದ್ದಿದ್ದು, ಸ್ವತಂತ್ರರು 595 ಸೀಟುಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ 549 ಸೀಟು ಗೆದ್ದು ಮೂರನೇ ಸ್ಥಾನದಲ್ಲಿದೆ.

12 ಜಿಲ್ಲೆಗಳ 50 ಮುನ್ಸಿಪಾಲಿಟಿಗಳಲ್ಲಿ ಕಾಂಗ್ರೆಸ್ 14 ಸೀಟು ಗೆದ್ದುಕೊಂಡಿದೆ. ಬಿಜೆಪಿ 4 ಸೀಟುಗಳಿಸಿದೆ. ಇನ್ನುಳಿದ ಸೀಟುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಮಧ್ಯೆ ತಾವು ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ 41 ಮುನ್ಸಿಪಾಲಿಟಿಗಳಲ್ಲಿ ಅಧಿಕಾರಕ್ಕೇರುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ರಾಜೀನಾಮೆ ನೀಡಿ 2 ವರ್ಷದ ಬಳಿಕೆ ಮತ್ತೆ ಬಿಜೆಪಿ ಸೇರಿದ ಹಿರಿಯ ರಾಜಕಾರಣಿ

ನಗರ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸೀಟುಗಳಲ್ಲಿ ಜಯ ಸಾಧಿಸುವ ಮೂಲಕ ಕಿಂಗ್​​ಮೇಕರ್​​ ಗಳಾಗಿ ಹೊರಹೊಮ್ಮಿದ್ದಾರೆ. 32 ಮುನ್ಸಿಪಲ್ ಕೌನ್ಸಿಲ್ ಗಳಲ್ಲಿ ಸ್ವತಂತ್ರರ ಸಹಾಯದಿಂದ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದು ಇನ್ನು ನಿರ್ಧಾರವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್, ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಪ್ರದರ್ಶನ ತೋರಿದ್ದು, ಹೆಚ್ಚು ಸ್ಥಾನ ಗಳಿಸಿರುವುದು ಸಂತೋಷ ತಂದಿದೆ ಎಂದರು.

click me!