
ಮಂಡ್ಯ (ಏ.21): ರಾಜ್ಯ ರಾಜಕಾರಣದಲ್ಲಿ ಪ್ರತಿ ಬಾರಿಯೂ ವಿಭಿನ್ನ ಮತ್ತು ವಿಶೇಷವಾಗಿ ಗುರುತಿಸಿಕೊಳ್ಳುವ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಅವರು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್‌ನ ಬೆಲೆಯನ್ನು 90 ಸಾವಿರ ಎಂದು ನಮೂದಿಸುವ ಬದಲು 90 ಲಕ್ಷ ರೂ. ಬೆಲೆ ಎಂದು ನಮೂದಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಕರ್ನಾಟಕದ ಜೆಡಿಎಸ್ ಭದ್ರಕೋಟೆ (JDS fort) ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ (Madduru Constituency) ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ (Kadaluru Uday) ನಾಮಪತ್ರ ಸಲ್ಲಿಕೆ ಮಾಡಿದ ನಂತರ ಭಾರಿ ಗೊಂದಲಕ್ಕೆ ಒಳಗಾಗಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಅವಧಿಯ (Karnataka Assembly Election 2023) ಮದ್ದೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಎಡವಟ್ಟು ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಟ್ಟಾಗಿರುವ ಪತ್ನಿ ಚೆನ್ನಮ್ಮ: ಕಾರಣ ಏನಂತೀರಾ?
ನಾಮಪತ್ರ ತಿರಸ್ಕೃತವಾಗುವ ಆತಂಕ: ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಳಿಯಿರುವ 90 ಸಾವಿರ ರೂ. ಬೆಲೆಯ ಹೊಂಡಾ ಆಕ್ಟೀವಾ (Honda Activa)- 125 ಸ್ಕೂಟರ್‌ನ ಬೆಲೆಯನ್ನು 90,03,730 ರೂ. (Ninty Lakh rupees) ಎಂದು ನಮೂದು.ಲಕ್ಷ ರೂ. ಎಂದು ನಾಮಪತ್ರದ ಜೊತೆಗೆ ಅಫಿಡವಿಟ್ (Affidavit) ಸಲ್ಲಿಸಿದ್ದಾರೆ. ಈಗ ನಾಮಪತ್ರದ ಅಫಿಡವಿಟ್ ಪರಿಶೀಲಿಸಿದಾಗ ತಮ್ಮ ಎಡವಟ್ಟು ಗೊತ್ತಾಗಿದ್ದು, ಸುಳ್ಳು ಮಾಹಿತಿ ಸಲ್ಲಿಕೆ ಕಾರಣಕ್ಕೆ ಎಲ್ಲಿ ತಮ್ಮ ನಾಮಪತ್ರ ತಿರಸ್ಕೃತ ಆಗುತ್ತದೆಯೋ ಎಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸಮಾಜಸೇವೆಯಿಂದ ಕಾಂಗ್ರೆಸ್ ಸೇರ್ಪಡೆ: ಇನ್ನು ಹಲವು ವರ್ಷಗಳಿಂದ ಸಮಾಜ ಸೇವೆಯ (Social service) ಮೂಲಕ ಮದ್ದೂರು ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದ ಕದಲೂರು ಉದಯ್, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷ (Congress party) ಸೇರ್ಪಡೆಯಾಗಿದ್ದರು. ಈ ಅವರ ಆಗಮನದ ಕುರಿತು ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, (DK Shivakumar) ಕಾಂಗ್ರೆಸ್ ಪಕ್ಷದಲ್ಲಿ ಕದಲೂರು ಉದಯ್ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಅಭಿನಂದಿಸಿ ಪಕ್ಷಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇನೆ ಎಂದು ಹೇಳಿದ್ದರು.
ಫ್ಯಾನ್ಸಿ ಸಂಖ್ಯೆಗೆ ಹಣ ಖರ್ಚು: ಇನ್ನು ಕದಲೂರು ಉದಯ್ ಅವರು ದುಬಾರಿ ಬೆಲೆಯ ಕಾರುಗಳನ್ನು ಕೂಡ ಹೊಂದಿದ್ದಾರೆ. ಮುಖ್ಯವಾಗಿ ಅವರು ಖರೀದಿ ಮಾಡಿರುವ ಎಲ್ಲ ವಾಹನಗಳಿಗೆ ಫ್ಯಾನ್ಸಿ ನಂಬರ್ (Fancy Number) ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಕುಟುಂಬ ಸದಸ್ಯರು ಸೇರಿದಂತೆ ಮನೆಯಲ್ಲಿ 4 ಕಾರು ಮತ್ತು 2 ಸ್ಕೂಟರ್ ಸೇರಿದಂತೆ ಒಟ್ಟು 6 ವಾಹನಗಳನ್ನು ಹೊಂದಿದ್ದಾರೆ. ಎಲ್ಲ ವಾಹನಗಳ ಕೊನೆಯ ಸಂಖ್ಯೆ 6555 ಆಗಿದೆ. ಇನ್ನು ಸಾರಿಗೆ ಇಲಾಖೆಯಲ್ಲಿ ಪ್ರತಿಯೊಂದು ಫ್ಯಾನ್ಸಿ ಸಂಖ್ಯೆಗೆ ಭಾರಿ ಹಣವನ್ನು ಪಾವತಿಸಿ ಈ ಸಂಖ್ಯೆಯನ್ನು ಪಡೆದಿದ್ದಾರೆ. ಸ್ಕೂಟರ್ ಬೆಲೆಗಿಂತ ಈ ಫ್ಯಾನ್ಸಿ ನಂಬರ್ ಪಡೆಯಲ್ಲಿಕ್ಕಾಗಿಯೇ ಅದರ 10 ಪಟ್ಟು ಹಣ ಖರ್ಚು ಮಾಡಿರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್‌ನ 224 ಅಭ್ಯರ್ಥಿಗಳ ನಾಮಪತ್ರ ಅನೂರ್ಜಿತ ಭೀತಿ: ಕೊನೆಗೂ ಖೆಡ್ಡಾ ತೋಡಿದ ಬಿಜೆಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.