ಮೈಸೂರು ಮೃಗಾಲಯವನ್ನು ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲು ಕ್ರಮ: ಸಚಿವ ಈಶ್ವರ್ ಖಂಡ್ರೆ

By Kannadaprabha News  |  First Published Jun 16, 2024, 12:12 PM IST

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಅಭಿವೃದ್ಧಿ ಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. 


ಮೈಸೂರು (ಜೂ.16): ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಅಭಿವೃದ್ಧಿ ಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಮೈಸೂರು ಮೃಗಾಲಯದಲ್ಲಿ ಶನಿವಾರ ನೂತನವಾಗಿ ಜಾರಿಗೆ ತಂದಿರುವ ವಾಟ್ಸಪ್ ಮೂಲಕ ಟಿಕೆಟ್ ಖರೀದಿ ಮತ್ತು ವಿಸ್ತೃತ ಲೈವ್ ಫೀಡ್ ಘಟಕಕ್ಕೆ ಚಾಲನೆ, ಜಿರಾಫೆಗೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದ ಬಳಿಕ ಅವರು ಮಾತನಾಡಿದರು.

ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ, ಈಗ ವಾಟ್ಸಪ್ ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದ್ದು, ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇದೇ ವೇಳೆ ಮೃಗಾಲಯದ ಪ್ರಾಣಿಗಳ ಚಿಕಿತ್ಸೆಗಾಗಿ ವನ್ಯಜೀವಿ ಆಂಬ್ಯುಲೆನ್ಸ್ ಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಮುಖಂಡರಾದ ವರುಣ ಮಹೇಶ್ ಮೊದಲಾದವರು ಇದ್ದರು.

Tap to resize

Latest Videos

undefined

ಮೃಗಾಲಯಕ್ಕೆ ವಾಟ್ಸಪ್ ಟಿಕೆಟ್: ತೊಂದರೆ ರಹಿತ, ಸುಲಭವಾದ ಮೃಗಾಲಯದ ಭೇಟಿಗಾಗಿ ವೀಕ್ಷಕರು ಕೇವಲ ತಮ್ಮ ವಾಟ್ಸಪ್ ಮೊಬೈಲ್ ಸಂಖ್ಯೆ 96866 68818 ಹಾಯ್ ಎಂಬ ಸಂದೇಶ ಕಳುಹಿಸುವ ಮೂಲಕ ಟಿಕೆಟ್ ಪಡೆಯಬಹುದು. ಈ ಸೌಲಭ್ಯದಡಿ ಸಾರ್ವಜನಿಕರು ಮೃಗಾಲಯ ಟಿಕೆಟ್ ಪಡೆಯಲು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಿ, ಆಪ್ ಬಳಸಿ ಮೃಗಾಲಯವನ್ನು ವೀಕ್ಷಣೆ ಮಾಡಬಹುದಾಗಿದೆ ಎಂದರು.

ಕಾವೇರಿ ವಿಚಾರದಲ್ಲಿ ರಾಜ್ಯ, ಜಿಲ್ಲೆಗಾಗಿರುವ ಅನ್ಯಾಯ ಸರಿಪಡಿಸುವೆ: ಎಚ್.ಡಿ.ಕುಮಾರಸ್ವಾಮಿ

ವಿಸ್ತೃತ ಲೈವ್ ಫೀಡ್ ಘಟಕ: ಈ ಹಿಂದೆ ಮೃಗಾಲಯದ ಆವರಣದಲ್ಲಿ ಸಣ್ಣದಾಗಿ ಸ್ಥಾಪಿಸಿದ ಲೈವ್ ಫೀಡ್ ಘಟಕವನ್ನು ವಿಸ್ತಾರವಾಗಿ ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ ಸರ್ಪಗಳ ಆಹಾರಕ್ಕಾಗಿ ಇಲ್ಲಿ ಮತ್ತು ಮೊಲಗಳನ್ನು ಬೆಳಸಿ ಪೋಷಿಸಲಾಗುತ್ತಿದ್ದು, ಮೇಲಿನ ಜೀವಂತ ಪ್ರಾಣಿಗಳನ್ನು ರೋಗಮುಕ್ತ, ನೈರ್ಮಲ್ಯದ ಪರಿಸರದಲ್ಲಿ ಬೆಳಸಿ, ಉತ್ತಮ ಗುಣಮಟ್ಟ ಹಾಗೂ ಪೌಷ್ಠಿಂಕಾಂಶವುಳ್ಳ ಒದಗಿಸಲು ಮತ್ತು ಪ್ರಾಣಿಗಳ ಒಟ್ಟಾರೆ ಆರೋಗ್ಯ ಮತ್ತು ಯೋಗ ಕ್ಷೇಮಕ್ಕೆ ಈ ಲೈವ್ ಫೀಡ್ ಘಟಕದವು ಕೊಡುಗೆ ನೀಡಲಿದೆ.

click me!