ಕಾನೂನು ಪ್ರಕಾರ ಡಿಕೆಶಿ ಕೇಸ್‌ ವಾಪಸ್‌: ಸಚಿವ ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Nov 26, 2023, 1:00 AM IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಸಚಿವ ಸಂಪುಟದ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವ ಪ್ರಿಯಾಂಕ್‌ ಖರ್ಗೆ.


ಬೆಂಗಳೂರು (ನ.26): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಸಚಿವ ಸಂಪುಟದ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಪ್ರಕರಣ ಸಿಬಿಐಗೆ ವಹಿಸುವ ಕುರಿತು ಹಿಂದಿನ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ನಿಯಮ ಬಾಹಿರ ಎಂದು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ತನಿಖೆಗೆ ಆದೇಶ ನೀಡಬೇಕಾದರೆ ಕೇಂದ್ರ ಸರ್ಕಾರವೇ ಕೆಲವೊಂದು ಮಾನದಂಡ ನಿಗದಿ ಮಾಡಿದೆ. 

ಅದರಂತೆ ಡಿ.ಕೆ.ಶಿವಕುಮಾರ್‌ ಅವರ ಕುರಿತ ಪ್ರಕರಣದ ಎಫ್‌ಐಆರ್‌ ದಾಖಲಿಸಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆದಿರಲಿಲ್ಲ. ಅಲ್ಲದೆ, ಪ್ರಕರಣದ ತನಿಖೆಗೆ ನಡೆಸಲು ರಾಜ್ಯ ಪೊಲೀಸ್‌ ಇಲಾಖೆ ಅಥವಾ ತನಿಖಾ ಸಂಸ್ಥೆಗಳಿಂದ ಅಸಾಧ್ಯ ಎಂಬ ಕುರಿತ ಸ್ಪಷ್ಟೀಕರಣವನ್ನೂ ನೀಡಿಲ್ಲ. ಈ ನಿಯಮಗಳನ್ನು ಪಾಲಿಸದೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿರುವುದು ತಪ್ಪಾಗಿತ್ತು. ಅದನ್ನು ನಾವು ನಾವು ಸರಿಪಡಿಸುತ್ತಿದ್ದೇವೆ ಎಂದು ತಿಳಿಸಿದರು.

Tap to resize

Latest Videos

ಡಿಕೆಶಿ ಸಿಬಿಐ ತನಿಖೆ ವಾಪಸ್‌ ಕಾನೂನು ಬಾಹಿರ: ಸಂಸದ ಬಿ.ವೈ.ರಾಘವೇಂದ್ರ

ಬಿಆರ್‌ಎಸ್‌ ಎಂದರೆ ಭ್ರಷ್ಟ ರಾಷ್ಟ್ರ ಸಮಿತಿ: ಈ ಬಾರಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಳಿಕ ಈಗಿನ ಆಡಳಿತಾರೂಢ ಬಿಆರ್‌ಎಸ್‌ ಸರ್ಕಾರವು ಲೂಟಿ ಮಾಡಿರುವ ಹಣವನ್ನು ಹಿಂದಿರುಗಿಸುವ ಮೂಲಕ ಕಾಂಗ್ರೆಸ್‌ ತನ್ನ 6 ಭರವಸೆಗಳನ್ನು ಜಾರಿಗೆ ತರಲಿದೆ ಎಂದು ಕರ್ನಾಟಕ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರವು ‘ಭ್ರಷ್ಟ ರಾಷ್ಟ್ರ ಸಮಿತಿ’ಯಾಗಿದೆ. 

ಪಕ್ಷವು ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಆಗಿದ್ದಾಗ ಅವರ ಭ್ರಷ್ಟಾಚಾರ ತೆಲಂಗಾಣಕ್ಕೆ ಸೀಮಿತವಾಗಿತ್ತು. ದೆಹಲಿಯಲ್ಲಿ ಮದ್ಯ ಹಗರಣ ನಡೆಯಿತು. ಬಳಿಕ ಇಂತಹ ಭ್ರಷ್ಟಾಚಾರವನ್ನು ಎಲ್ಲೆಡೆ ಮಾಡಬಹುದು ಎಂದು ಅವರು ಭಾರತ ರಾಷ್ಟ್ರ ಸಮಿತಿಗೆ ಪಕ್ಷವನ್ನು ಬದಲಾಯಿಸಿದ್ದಾರೆ’ ಎಂದು ಕಿಡಿಕಾರಿದರು. ಇದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ ಮತ್ತು ತೆಲಂಗಾಣದಲ್ಲೂ ಅದು ತನ್ನ 6 ಭರವಸೆಗಳನ್ನು ಈಡೇರಿಸಲು ವಿಫಲವಾಗುತ್ತದೆ ಎಂಬ ಬಿಆರ್‌ಎಸ್‌ ಆರೋಪಕ್ಕೆ ತಿರುಗೇಟು ನೀಡಿದರು.

ಮಹದೇಶ್ವರ ಬೆಟ್ಟಕ್ಕೆ ಹೋಗುವ ಒಂದೇ ವಾಹನಕ್ಕೆ ಎರಡು ಬಾರಿ ಸುಂಕ ವಸೂಲಿ: ಭಕ್ತರ ಆಕ್ಷೇಪ!

‘ತೆಲಂಗಾಣ ಜನತೆಯಿಂದ ಬಿಆರ್‌ಎಸ್‌ ಲೂಟಿ ಮಾಡಿದ ಹಣವನ್ನು ರಾಜ್ಯದ ಜನತೆಗೆ ವಾಪಸ್ ನೀಡಲಾಗುವುದು ಮತ್ತು ಆರು ಭರವಸೆಗಳನ್ನು ಈಡೇರಿಸಲಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಭರವಸೆಗಳನ್ನು ಜಾರಿಗೊಳಿಸಿರುವ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಅಥವಾ ಯಾವುದೇ ಬಿಆರ್‌ಎಸ್ ನಾಯಕರಿಗೆ ಅನುಮಾನಗಳಿದ್ದರೆ, ಅವರು ಕರ್ನಾಟಕಕ್ಕೆ ಬರಲು ಕಾಂಗ್ರೆಸ್‌ ಬಸ್ ವ್ಯವಸ್ಥೆ ಮಾಡುತ್ತದೆ. ಬಂದು ಅವರೇ ಖಚಿತಪಡಿಸಿಕೊಳ್ಳಬಹುದು’ ಎಂದರು.

click me!