ಕಾಂಗ್ರೆಸ್‌ ಗ್ಯಾರಂಟಿ ಕೇವಲ ಘೋಷಣೆ, ಅನುಷ್ಠಾನಕ್ಕೆ ಬಂದಿಲ್ಲ: ಮಲ್ಕಪ್ಪಗೋಳ್‌

By Kannadaprabha News  |  First Published Dec 13, 2023, 12:00 AM IST

ಕರ್ನಾಟಕದಲ್ಲಿ ಕಾಂಗ್ರೆಸ್‌ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿದ್ದು, ಆ ಯೋಜನೆಗಳು ಕೇವಲ ಘೋಷಣೆಯಾಗಿದ್ದು, ಅನುಷ್ಠಾನಕ್ಕೆ ಬಂದಿಲ್ಲ. ಈ ಸಂಬಂಧ ಪಕ್ಷವು ಹೋರಾಟ ಮಾಡಲಿದೆ: ಅಶೋಕಕುಮಾರ್ ಜಿ. ಮಲ್ಕಪ್ಪಗೋಳ್ 


ಕಲಬುರಗಿ(ಡಿ.13):  ಕರ್ನಾಟಕದಲ್ಲಿ ಕಾಂಗ್ರೆಸ್‌ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿದ್ದು, ಆ ಯೋಜನೆಗಳು ಕೇವಲ ಘೋಷಣೆಯಾಗಿದ್ದು, ಅನುಷ್ಠಾನಕ್ಕೆ ಬಂದಿಲ್ಲ. ಈ ಸಂಬಂಧ ಪಕ್ಷವು ಹೋರಾಟ ಮಾಡಲಿದೆ ಎಂದು ಅಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜಿ. ಮಲ್ಕಪ್ಪಗೋಳ್ ಅವರು ಹೇಳಿದರು.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರಿಗಾಗಿ ಹೋರಾಟ ಮತ್ತು ಸಂಘಟನೆ ಮಾಡಲು ನಿರ್ಧರಿಸಿದೆ. ನೂತನ ಜಿಲ್ಲಾ ಸಮಿತಿಯು ಜಿಲ್ಲೆಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಿದೆ ಎಂದರು.

Latest Videos

undefined

ಇಂಥ ಹತ್ಯೆ ಇಡೀ ವ್ಯವಸ್ಥೆಗೇ ಬೆದರಿಕೆ; ಕಲಬುರಗಿ ವಕೀಲ ಪಾಟೀಲ ಹತ್ಯೆಗೆ ಹೈಕೋರ್ಟ್‌ ಕಳವಳ

ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಪಂಗಳಲ್ಲಿ ಪಕ್ಷದ ಸಮಿತಿಗಳನ್ನು ರಚಿಸಲಾಗುವುದು. ಮುಂಬರುವ ದಿನಗಳಲ್ಲಿ ಮೊದಲ ಆದ್ಯತೆ ಮೇರೆಗೆ ಎಲ್ಲ ವರ್ಗದ ಮಹಿಳೆಯರಿಗೆ ಪಕ್ಷದಲ್ಲಿ ಜೋಡಿಸುವುದು, ಆಟೋ ಚಾಲಕರ ಸಂಘ, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ನಿವೃತ್ತ ನೌಕರರು, ಮಾಜಿ ಸೈನಿಕರು, ರೈತಾಪಿ ಸಂಘ ಮತ್ತು ಯುವ ಜನತೆಯನ್ನು ಸಹ ಪಕ್ಷಕ್ಕೆ ಕರೆತರಲಾಗುವು ಎಂದು ಅವರು ಹೇಳಿದರು.

ಈಗಾಗಲೇ ಹಿಂದಿನ ಸರ್ಕಾರ ಮತ್ತು ಪ್ರಸ್ತುತ ಸರ್ಕಾರ ನೆಟೆರೋಗ, ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಪರಿಹಾರ ಘೋಷಣೆ ಮಾಡಿದ್ದರೂ ಸಹ ಇಲ್ಲಿಯವರೆಗೆ ರೈತರ ಖಾತೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಸರ್ಕಾರಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿವೆ. ಆದ್ದರಿಂದ ರೈತರ ಬಾಳು ಹಾಳಾಗಿದೆ. ಹೀಗಾಗಿ ಪಕ್ಷವು ಬೃಹತ್ ಹೋರಾಟ ರೂಪಿಸಿ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಕಲಬುರಗಿ ವಕೀಲನ ಬರ್ಬರ ಹತ್ಯೆ ಪ್ರಕರಣ; 8 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ವಿಡಿಯೋ ಮತ್ತೆ ವೈರಲ್!

ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿದೆ. ಮಕ್ಕಳು ಮತ್ತು ಶಿಕ್ಷಕರ ಅನುಪಾತದಲ್ಲಿ ಭಾರಿ ವ್ಯತ್ಯಾಸವಾಗಿದ್ದು, ಸಮಾಜಕ್ಕೆ ಕೊಡುಗೆ ನೀಡಬೇಕಾದಂತಹ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ರೀತಿಯಲ್ಲಿ ಕಾರ್ಯಪ್ರವೃತ್ತವಾಗುತ್ತದೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಪಕ್ಷದ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಅಶೋಕಕುಮಾರ್ ಮಲಕಪ್ಪಗೋಳ್, ಸಂಘಟನಾ ಕಾರ್ಯದರ್ಶಿಗಳಾಗಿ ಜಗದೀಶ್ ಸಾಗರ್, ಕಿರಣ್ ರಾಠೋಡ್, ಈರಣ್ಣಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾಗಿ ಜಗದೀಶ್ ಬಳ್ಳಾರಿ, ಕಾರ್ಯದರ್ಶಿಗಳಾಗಿ ಬಸವರಾಜ್ ತಳೇಕರ್, ಶಿವಕುಮಾರ್ ಖೇಡ್, ಮೊಹ್ಮದ್ ಜಾಗಿರದಾರ್, ಮಾಧ್ಯಮ ಉಸ್ತುವಾರಿಯಾಗಿ ಗೌತಮ್ ಮೋರೆ, ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ಮೀರಾ ಮೌಸೀನ್ ಅಲಿಖಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

click me!