Asianet Suvarna News Asianet Suvarna News

ಕಲಬುರಗಿ ವಕೀಲನ ಬರ್ಬರ ಹತ್ಯೆ ಪ್ರಕರಣ; 8 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ವಿಡಿಯೋ ಮತ್ತೆ ವೈರಲ್!

ನಗರದ ಕೋರ್ಟ್ ಆವರಣದಲ್ಲೇ ವಕೀಲ ಈರಣ್ಣಗೌಡರ ಭೀಕರ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ, ಹತ್ಯೆಯ ಮಾಸ್ಟರ್‌ಮೈಂಡ್ ನೀಲಕಂಠರಾವ್ ಪಾಟೀಲ್‌, ವಕೀಲ ಈರಣ್ಣಗೌಡ ಪಾಟೀಲರೊಂದಿಗೆ ಜಮೀನು ವಿಚಾರವಾಗಿ ಕಳೆದ ಏಳು ವರ್ಷಗಳಿಂದ ಹಗೆತನ ಸಾಧಿಸುತ್ತಿದ್ದ. ಏಳು ವರ್ಷಗಳ ಹಿಂದೆ ಈರಣ್ಣಗೌಡ ಪಾಟೀಲರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ. 2015 ರಲ್ಲಿ ನಡೆದ ಹಲ್ಲೆಯ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Kalaburagi lawyer Eranna Gowda Patil murder case 8 years ago video viral rav
Author
First Published Dec 12, 2023, 10:38 AM IST

ಕಲಬುರಗಿ (ಡಿ.12): ನಗರದ ಕೋರ್ಟ್ ಆವರಣದಲ್ಲೇ ವಕೀಲ ಈರಣ್ಣಗೌಡರ ಭೀಕರ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಪ್ರಕರಣದ ಪ್ರಮುಖ ಆರೋಪಿ, ಹತ್ಯೆಯ ಮಾಸ್ಟರ್‌ಮೈಂಡ್ ನೀಲಕಂಠರಾವ್ ಪಾಟೀಲ್‌, ವಕೀಲ ಈರಣ್ಣಗೌಡ ಪಾಟೀಲರೊಂದಿಗೆ ಜಮೀನು ವಿಚಾರವಾಗಿ ಕಳೆದ ಏಳು ವರ್ಷಗಳಿಂದ ಹಗೆತನ ಸಾಧಿಸುತ್ತಿದ್ದ. ಏಳು ವರ್ಷಗಳ ಹಿಂದೆ ಈರಣ್ಣಗೌಡ ಪಾಟೀಲರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ. 2015 ರಲ್ಲಿ ನಡೆದ ಹಲ್ಲೆಯ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

8 ವರ್ಷಗಳ ಹಿಂದೆ ಈರಣ್ಣಗೌಡ ಪಾಟೀಲ್ ನ ದೊಡ್ಡಪ್ಪನಾದ ಬಸವಣಪ್ಪ ಮೇಲೆ ಹಲ್ಲೆ ನಡೆಸಿದ್ದ ನೀಲಕಂಠ ಪಾಟೀಲ್. ಅವರ ಮನೆಗೆ ಬಂದು ಅವರ ಮೇಲೆಯೇ ಹಲ್ಲೆ ನಡೆಸಿದ್ದ. ವೃದ್ಧನೆಂಬುದನ್ನ ನೋಡದೇ ಬಸವಣ್ಣಪ್ಪರ ಕಪಾಳ ತಲೆಗೆ ಬಲವಾಗಿ ಹೊಡೆದಿದ್ದ ಆರೋಪಿ ನೀಲಕಂಠ ಪಾಟೀಲ್. ಮೊನ್ನೆ ಡಿ.7ರಂದು ಇದೇ ಪ್ರಕರಣದ ವಿಚಾರಣೆ ನಡೆಯಬೇತ್ತು. ವಿಚಾರಣೆ ದಿನದಂದೇ ಈರಣ್ಣಗೌಡನ ಹತ್ಯೆಯಾಗಿದೆ. ಈರಣ್ಣಗೌಡ ಹತ್ಯೆ ಬಳಿಕ ಏಳು ವರ್ಷಗಳ ಹಿಂದೆ ಈರಣ್ಣಗೌಡನ ದೊಡ್ಡಪ್ಪನಿಗೆ ನೀಲಕಂಠ ಪಾಟೀಲ್ ಹಲ್ಲೆ ನಡೆಸುತ್ತಿರುವ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.

ಇಂಥ ಹತ್ಯೆ ಇಡೀ ವ್ಯವಸ್ಥೆಗೇ ಬೆದರಿಕೆ; ಕಲಬುರಗಿ ವಕೀಲ ಪಾಟೀಲ ಹತ್ಯೆಗೆ ಹೈಕೋರ್ಟ್‌ ಕಳವಳ

ಈರಣ್ಣಗೌಡನ ಆಸ್ತಿ ವಿವಾದ ಬಗೆಹರಿಸುವೆ ಅದರಲ್ಲಿ ನನಗೂ ಪಾಲು ಬೇಕೆಂದು ಬೇಡಿಕೆ ಇಟ್ಟಿದ್ದ ನೀಲಕಂಠಗೌಡ ಪಾಟೀಲ್. ಆದರೆ ನೀಲಕಂಠನ ಬೇಡಿಕೆ ಒಪ್ಪದಿದ್ದ ಈರಣ್ಣಗೌಡ. ಬೇಡಿಕೆ ಈಡೇರದ ಹಿನ್ನೆಲೆ ಅಂದು ವೃದ್ಧನ ಮೇಲೆ ಹಲ್ಲೆ ನಡೆಸಿದ್ದ. ಆ ಪ್ರಕರಣದ ವಿಚಾರಣೆ ನಡೆಯಬೇಕಿದ್ದ ದಿನವೇ ಈರಣ್ಣಗೌಡನ ಕೊಲೆ ಮಾಡಿದ್ದ ನೀಲಕಂಠ ಪಾಟೀಲ್. ಸದ್ಯ ಕೊಲೆ ಪ್ರಕರಣದಲ್ಲಿ ನೀಲಕಂಠ ಪಾಟೀಲ್ ಹಾಗೂ ಆತನ ಪತ್ನಿ ಸಿದ್ದಮ್ಮ ಪಾಟೀಲ್ ಇಬ್ಬರೂ ಬಂಧಿಸಿ ವಿಚಾರಣೆಗೊಳಪಡಿಸಿರುವ ಪೊಲೀಸರು.

Follow Us:
Download App:
  • android
  • ios