ಬಿ.ಕೆ.ಹರಿಪ್ರಸಾದ ಕೊತ್ವಾಲ ರಾಮಚಂದ್ರನ ಶಿಷ್ಯ; ಪ್ರತಿಪಕ್ಷ ನಾಯಕನ ಜನ್ಮ ಜಾಲಾಡಿದ ಸಚಿವ

Published : Jan 27, 2023, 09:23 AM IST
ಬಿ.ಕೆ.ಹರಿಪ್ರಸಾದ ಕೊತ್ವಾಲ ರಾಮಚಂದ್ರನ ಶಿಷ್ಯ; ಪ್ರತಿಪಕ್ಷ ನಾಯಕನ ಜನ್ಮ ಜಾಲಾಡಿದ ಸಚಿವ

ಸಾರಾಂಶ

ಮೇಲ್ಮನೆಯ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಕೊತ್ವಾಲ ರಾಮಚಂದ್ರನ ಸ್ನೇಹಿತ, ಅವರ ಮಾತನ್ನು ನಿರ್ಲಕ್ಷಿಸಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮಾಧ್ಯಮಗಳಿಗೆ ಮನವಿ ಮಾಡಿದರು.

ಗದಗ (ಜ.27) : ಮೇಲ್ಮನೆಯ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಕೊತ್ವಾಲ… ರಾಮಚಂದ್ರನ ಸ್ನೇಹಿತ, ಅವರ ಮಾತನ್ನು ನಿರ್ಲಕ್ಷಿಸಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮಾಧ್ಯಮಗಳಿಗೆ ಮನವಿ ಮಾಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹರಿಪ್ರಸಾದ ಹಿನ್ನಲೆ ಜಾಲಾಡಿದ ಅಚಿವರು, ಬಿ.ಕೆ. ಹರಿಪ್ರಸಾದ ಮಾತಿಗೆ ಮಾಧ್ಯಮದವರು ಬೆಲೆ ಕೊಡಬೇಡಿ. ಅವರ ಸಂಸ್ಕೃತಿ ಎಲ್ಲಿಂದ ಬಂದಿದೆ ಎಂಬುದು ಸ್ವಲ್ಪ ನೋಡಿಕೊಳ್ಳಿ. ಹರಿಪ್ರಸಾದ ಯಾರ ಶಿಷ್ಯ, ಅವರ ಗುರು ಯಾರಿದ್ದ​ರು, ಏನಿದ್ದರು ​ಎಂಬ ಹಿನ್ನೆಲೆ ತೆಗೆದುಕೊಳ್ಳಿ. ಅವರು ಕೊತ್ವಾಲ… ರಾಮಚಂದ್ರನ ಸ್ನೇಹಿತ ಎಂದರು.

ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ: ಸಂವಿಧಾನ ಜಾರಿಗೊಂಡು 74 ವರ್ಷವಾದರೂ ಅಸ್ಪೃಶ್ಯತೆ ಜೀವಂತ

ಗೋಡ್ಸೆ ರಾಜಕಾರಣ ಬೇಕೋ ಅಥವಾ ಗಾಂಧಿಯ ಅಹಿಂಸೆಯ ರಾಜಕಾರಣ ಬೇಕೋ? ಎನ್ನು​ವ ಬಿ.ಕೆ. ಹರಿಪ್ರಸಾದ ಹೇಳಿಕೆ ವಿಚಾರಕ್ಕೆ ಪ್ರತಿ​ಕ್ರಿಯಿ​ಸಿದ ಅವ​ರು, ಕೊತ್ವಾಲ… ರಾಮಚಂದ್ರ ಯಾರು, ಏನಿದ್ದ ಅನ್ನೋದನ್ನ ತೆಗೆಯಬೇಕಾ? ಸಂಭ್ರದಿಂದ ಗಣರಾಜ್ಯೋತ್ಸವ ಆಚರಿಸುತ್ತೇವೆ, ಆಚರಿಸೋಣ ಹರಿಪ್ರಸಾದ ಮಾತಿಗೆ ನಾನು ಉತ್ತರ ಕೊಡೋದಿಲ್ಲ ಎಂದ​ರು.

ಕಾಂಗ್ರೆಸ್‌ ಪಕ್ಷದವರ ನಡವಳಿಕೆ, ಹೇಳಿಕೆ ಹೇಸಿಗೆ ತರಿಸುವಂತಾಗಿದೆ. ನಾವೆಲ್ಲ ಚುನಾಯಿತ ಪ್ರತಿನಿಧಿಗಳು, ರಾಜ್ಯವನ್ನು ಆಡಳಿತ ಮಾಡ್ತಾ ಇದ್ದೇವೆ. ಯಾವ ಭಾಷೆ ಉಪಯೋಗಿಸಬೇಕು ಎಂದು ವಿಪಕ್ಷ ನಾಯ​ಕ ಸಿದ್ದರಾಮಯ್ಯನವ​ರು ಕಲಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆ​ಸಿ​ದರು.

ಡಿ.ಕೆ. ಶಿವ​ಕು​ಮಾ​ರ ಮಾತನಾಡಿದ ಪದ ಪ್ರಯೋಗ ಬಹಳ ಅಶ್ಲೀಲವಾದದ್ದು, ಇವರು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು. ಸಿದ್ದರಾಮಯ್ಯ ಹಾಗೂ ಡಿಕೆಶಿ ಕನಸಿನಲ್ಲಿ ರಾಜ್ಯ​ದ ಮುಖ್ಯಮಂತ್ರಿ ಆಗಿದ್ದೇವೆ ಎಂದುಕೊಂಡಿದ್ದಾರೆ. ಕೀಳು ಮಟ್ಟದ ಭಾಷೆ ಪ್ರಯೋಗ ಸಿದ್ದರಾಮಯ್ಯನವರಿಗೆ ಶೋಭೆ ತರೋದಿಲ್ಲ. ಅವರ ಕೀಳು ಮಟ್ಟದ ಶಬ್ದ ಪ್ರಯೋಗ ನಿಲ್ಲಿಸಲಿ ಎಂದು ಮನವಿ ಮಾಡು​ತ್ತೇನೆ. ನಮ್ಮ ಹತ್ತಿರವೂ ಬೇಕಾದಂತಹÜ ಶಬ್ದ ಭಂಡಾರ ಇದೆ, ಪದ- ಪುಂಜಗಳಿವೆ. ಆದರೆ, ನಮ್ಮ ಪಕ್ಷ ಅಂತ​ಹ ಕೀಳು ಮಟ್ಟದ ಸಂಸ್ಕೃತಿಯನ್ನು ನಮಗೆ ಕಲಿಸಿಕೊಟ್ಟಿಲ್ಲ. ನಾವು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೇವೆ ಅಂದರೆ ನಮ್ಮ ದೌರ್ಬಲ್ಯವಲ್ಲ ಎಂದು ಎಚ್ಚರಿಸಿದರು.

ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ

ಡಿಕೆಶಿ ಕ್ಷಮೆ ಕೇಳಲಿ:

5 ಸಾವಿರ ಕೋಟಿ ಮತದಾರರಿಗೆ ಹಣ ಹಂಚಲು ಬಿಜೆಪಿ ಹಣ ಸಂಗ್ರ​ಹಿ​ಸು​ತ್ತಿದೆ ಎಂಬ ಡಿಕೆಶಿ ಆರೋಪಿಸಿದ್ದಾರೆ. ಆ 5 ಸಾವಿರ ಕೋಟಿ ಮತದಾರರಲ್ಲಿ ಅವರೂ ಒಬ್ಬರಾಗುತ್ತಾರೆ. ಡಿಕೆಶಿ ಹಣ ತೆಗೆದುಕೊಳ್ಳುತ್ತಾರೆ ಅಂತ ಆಯಿತಲ್ಲ. ನಿಮ್ಮ ರಾಜಕೀಯ ಚಪಲಕ್ಕೆ 5 ಸಾವಿರ ಕೋಟಿ ಮತದಾರರನ್ನು ಯಾಕೆ ಅವಮಾನ ಮಾಡುತ್ತೀರಿ, ಕರ್ನಾಟಕದ ಎಲ್ಲ ಮತದಾರರು ದುಡ್ಡು ತೆಗೆದುಕೊಳ್ತಾರೆ ಎಂದ​ರೆ ಏನರ್ಥ? ಚುನಾವಣೆಯಲ್ಲಿ ದುಡ್ಡು ಕೊಡ್ತಾರೆ, ದುಡ್ಡು ತೆಗೆದುಕೊಳ್ತಾರೆ ಅನ್ನೋ ಡಿಕೆಶಿ ಹೇಳಿಕೆ ಕನ್ನಡಿಗರಿಗೆ ಮಾಡಿದಂಥ ಘೋರ ಅಪಮಾನ. ಡಿ.ಕೆ. ಶಿವಕುಮಾರ ಕರ್ನಾಟಕ ಜನತೆಯ ಕ್ಷಮೆ ಕೇಳಬೇಕು ಎಂದು ಸಚಿವ ಸಿ.ಸಿ.ಪಾಟೀಲ್‌ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?