ಪ್ರಧಾನಿ ಮೋದಿ ದೂರದೃಷ್ಟಿಯಿಂದ ದೇಶಕ್ಕೆ ಉತ್ತಮ ಭವಿಷ್ಯ: ಕೇಂದ್ರ ಸಚಿವ ವಿ.ಸೋಮಣ್ಣ

By Kannadaprabha News  |  First Published Aug 26, 2024, 9:51 PM IST

ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳು ನಡೆಸುವ ಮನ್ ಕೀ ಬಾತ್‌ನಲ್ಲಿ ಸಾಮಾನ್ಯ ಜನರಲ್ಲೂ ಕೂಡಾ ತಾಂತ್ರಿಕತೆ, ನೈಪುಣ್ಯತೆ, ವೈವಿಧ್ಯಮಯ ಚಿಂತನೆ ಅರ್ಹತೆ ಇದೆ ಎಂಬುದನ್ನು ವಿಶ್ವಕ್ಕೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. 


ತುಮಕೂರು (ಆ.26): ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳು ನಡೆಸುವ ಮನ್ ಕೀ ಬಾತ್‌ನಲ್ಲಿ ಸಾಮಾನ್ಯ ಜನರಲ್ಲೂ ಕೂಡಾ ತಾಂತ್ರಿಕತೆ, ನೈಪುಣ್ಯತೆ, ವೈವಿಧ್ಯಮಯ ಚಿಂತನೆ ಅರ್ಹತೆ ಇದೆ ಎಂಬುದನ್ನು ವಿಶ್ವಕ್ಕೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮ ಭಾನುವಾರ ವೀಕ್ಷಿಸಿ ಮಾತನಾಡಿದರು. 

ಇಂದಿನ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ 5 ಜನ ನುರಿತ ತಾಂತ್ರಿಕ ತಜ್ಞರನ್ನು ಮಾತನಾಡಿಸಿ ಅವರಲ್ಲಿರುವ ಅರ್ಹತೆಯನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವ ಕೆಲಸವನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ಚಿಂತನೆ, ದೂರದೃಷ್ಠಿಯಿಂದ ದೇಶಕ್ಕೆ ಇನ್ನಷ್ಟು ಉತ್ತಮ ಭವಿಷ್ಯ ಇದೆ ಎಂಬುದು ಗೊತ್ತಾಗುತ್ತದೆ. ದೇಶದ ಸ್ವಾಭಿಮಾನ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪ್ರಧಾನಿ ಮೋದಿ ದಿನನಿತ್ಯದ ಕಾರ್ಯಕ್ರಮಗಳು ಬಹಳ ಸಹಕಾರಿಯಾಗಿವೆ ಎಂದರು. ಪ್ರಧಾನಿ ನರೇಂದ್ರ ಮೋದಿ ಹೊರ ರಾಷ್ಟ್ರಗಳಿಗೆ ಪ್ರವಾಸ ಹೋಗುವ ಸಂದರ್ಭದಲ್ಲಿ ಭಾರತೀಯ ಸಾರ್ವಭೌಮತ್ವ, ಹೃದಯ ಶ್ರೀಮಂತಿಕೆಯನ್ನು ಪರಿಚಯಿಸುತ್ತಿದ್ದಾರೆ. 

Tap to resize

Latest Videos

undefined

ಅಭಿಷೇಕ್‌ ಬಚ್ಚನ್‌ಗಿಂತ ಐಶ್ವರ್ಯಾ ರೈ ಆಸ್ತಿ ಹೆಚ್ಚು: ವಿವರ ಗೊತ್ತಾದ್ರೆ ನೀವು ಶಾಕ್ ಆಗ್ತೀರ!

ರಷ್ಯಾ -ಉಕ್ರೇನ್ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ಗೆ ಮನವರಿಕೆ ಮಾಡಿಕೊಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು. ಪ್ರತಿ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಬೆಳೆಯುವುದು, ಹೈನುಗಾರಿಕೆಯಿಂದ ಆಗುವ ಉಪಯೋಗಗಳ ಬಗ್ಗೆ ರೈತರು ಸೇರಿದಂತೆ ದೇಶದ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಮುಂದಿನ ಯುವ ಪೀಳಿಗೆ ಇದನ್ನೆಲ್ಲಾ ನೋಡುವ ಮೂಲಕ ಭವ್ಯ ಭಾರತದ ಭವಿಷ್ಯಕ್ಕೆ ಕಾರಣೀ ಭೂತರಾಗಲು ಸಹಕಾರಿಯಾಗಲಿದೆ ಎಂದರು. 

350 ಕೋಟರು..ಗಳ ವೆಚ್ಚದಲ್ಲಿ ರೈಲ್ವೆ ಮೇಲೇತುವೆ ಮಾಡುತ್ತಿರುವ ಕೆಲಸ ನೂರಾರು ವರ್ಷಗಳ ಕಾಲ ಇರಬೇಕು. ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಸಣ್ಣಪುಟ್ಟ ಲೋಪದೋಷಗಳು ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರಬೇಕು ಅಥವಾ ಅಧಿಕಾರಿಗಳ ಗಮನಕ್ಕೆ ತಂದು ಗುಣಮಟ್ಟದ ಕಾಮಗಾರಿ ಮಾಡಲು ಜನಸಾಮಾನ್ಯರು ಸಹಕಾರ ನೀಡಬೇಕು ಎಂದರು. ವಂದೇ ಭಾರತ್ ರೈಲು ಪ್ರಯಾಣ ದರ ದುಬಾರಿ ಎಂಬುದು ನನಗೆ ಗೊತ್ತಿಲ್ಲ, ಆದರೆ ವಿಮಾನದ ರೀತಿಯಲ್ಲಿ ಸೌಲಭ್ಯಗಳು ಲಭ್ಯ ಇದ್ದು, ಅದೇ ರೀತಿಯಲ್ಲಿ ಅನುಭವವಾಗುತ್ತದೆ. 

ಆ ಸಿನಿಮಾಗೋಸ್ಕರವೇ ವಿಭಿನ್ನವಾಗಿ ಲುಕ್‌ ಬದಲಾಯಿಸಿಕೊಂಡ ಸ್ಟಾರ್‌ ನಟಿ ಈಕೆ: ಯಾರು ಅಂತ ಗೊತ್ತಾ?

ಹಾಗಾಗಿ ಈ ರೈಲಿನ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು. ಪ್ರಧಾನಿಗಳ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜಲ ಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ಈಗಾಗಲೇ ತನಿಖೆಗೆ ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಎಸ್. ಶಿವಪ್ರಸಾದ್, ಡಾ. ಎಸ್. ಪರಮೇಶ್, ಭೈರಣ್ಣ, ಪಂಚಾಕ್ಷರಯ್ಯ, ದಿಲೀಪ್‌ು ಮಾರ್, ರುದ್ರೇಶ್, ಮಲ್ಲಿಕಾರ್ಜುನ್, ಸಿ.ಎನ್. ರಮೇಶ್ ಇದ್ದರು.

click me!