ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆಯೇ ಸಂಪುಟ ವಿಸ್ತರಣೆ ಮುಹೂರ್ತ ಫಿಕ್ಸ್. ಅಲ್ಲದೇ ಸಂಪುಟದಿಂದ ಒಬ್ಬರನ್ನು ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಈ ಬಗ್ಗೆ ಸಿಎಂ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರು, (ಡಿ.12): ನಾಳೆ ಬುಧವಾರ (ಜ. 13) ಸಾಯಂಕಾಲ 3.50ಕ್ಕೆ 7 ರಿಂದ 8 ಸಚಿವರು ಪ್ರಮಾಣ ವಚನ ಸ್ವೀಕರಿಸ್ತಾರೆ. ಅವರಿಗೆಲ್ಲ ನಾಳೆ 3.30ಕ್ಕೆ ರಾಜಭವನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇಂದು (ಮಂಗಳವಾರ) ಬೆಂಗಳೂರಿನಲ್ಲಿ ಖುದ್ದು ಸಿಎಂ ಬಿಎಸ್‌ವೈ ಸುದ್ದಿಗಾರರೊಂದಿಗೆ ಮಾತನಾಡಿ, 7 ರಿಂದ 8 ಜನ ಸಂಪುಟಕ್ಕೆ ಸೇರಿಕೊಳ್ಳುತ್ತಿದ್ದಾರೆ. ಅವರಿಗೆಲ್ಲರಿಗೂ ನಾಳೆ ಮಧ್ಯಾಹ್ನ 3:30ಕ್ಕೆ ರಾಜಭವನಕ್ಕೆ ಬನ್ನಿ ಎಂದು ಹೇಳಿದ್ದೇನೆ. ಯಾರು ಯಾರು ಎಂಬುದರ ಪಟ್ಟಿಯನ್ನು ಇಂದು (ಮಂಗಳವಾರ) ರಾತ್ರಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಸಂಪುಟ ವಿಸ್ತರಣೆಯೋ..ಪುನಾರಚನೆಯೋ... ಎಂಬ ಗೊಂದಲಕ್ಕೆ ತೆರೆ ಎಳೆದ ಸಿಎಂ
ಸಿಎಂ ಹೇಳಿದಂತಯೇ 8 ಜನ ಪ್ರಮಾಣವಚನ ಸ್ವೀಕರಿಸೋದಾದ್ರೆ ಒಬ್ಬರಿಗೆ ಕೋಕ್ ಸಾಧ್ಯತೆಗಳು ಹೆಚ್ಚಿವೆ. ಈಗ ಬಿಎಸ್ ವೈ ಸಂಪುಟದಲ್ಲಿ 7 ಸಚಿವ ಸ್ಥಾನ ಮಾತ್ರ ಕಾಲಿ ಇರೋದು.
ಸಿಎಂ7 ರಿಂದ 8 ಜನ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಿಕೆ ಕೊಟ್ಟಿರೋದ್ರಿಂದ ಈಗ ಯಾರಿಗೆ ಕೋಕ್ ಕೊಡ್ತಾರೆ ಅನ್ನೋ ಚರ್ಚೆ ಶರುವಾಗಿದೆ.
ಯಾರಿಗೆ ಕೋಕ್?
ಒಬ್ಬರಿಗೆ ಕೊಕ್ ನೀಡುವ ಬಗ್ಗೆ ಸಿಎಂ ಯಡಿಯೂಪರಪ್ಪನವರು ಮುನ್ಸೂಚನೆ ನೀಡಿದ್ದು, ಕೆಲವರಿಗೆ ಸಚಿವರಿಗೆ ಢವ-ಢವ ಶುರುವಾಗಿದೆ. ಯಾರನ್ನು ತೆಗೆಯಹುದು ಎನ್ನುವ ಚರ್ಚೆಗಳು ಸಹ ನಡೆಯುತ್ತಿವೆ.
ಮೂಲಗಳ ಪ್ರಕಾರ ಹಿಟ್ ಲೀಸ್ಟ್‌ನಲ್ಲಿ ಸಚಿವರಾದ ಎಚ್ ನಾಗೇಶ್, ಶಶಿಕಲಾ ಜೊಲ್ಲೆ ಅಥವಾ ಕೋಟಾ ಶ್ರೀನಿವಾಸ ಪೂಜಾರಿ ಇದ್ದಾರೆ. ಇದರಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಅವರನ್ನ ಸಂಪುಟದಿಮದ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿದುಬಂದಿದೆ.
ಸಂಭಾವ್ಯ ಸಚಿವರ ಪಟ್ಟಿ
MTB ನಾಗರಾಜ್, ಆರ್.ಶಂಕರ್, ಮುನಿರತ್ನ ನಾಯ್ಡು, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಅಂಗಾರ ಹಾಗೂ MLC ಸಿ.ಪಿ.ಯೋಗೇಶ್ವರ್ ಹೆಸರು ಬಹುತೇಕ ಅಂತಿಮಗೊಂಡಿದೆ. ಆದ್ರೆ, 8ನೇ ಸಚಿವ ಯಾರಾಗ್ತಾರೆ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.