4 ಸಚಿವರು ಸೇರಿ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

By Govindaraj S  |  First Published Mar 2, 2023, 10:43 PM IST

ಕೇಂದ್ರದಲ್ಲಿ ಆಗಲಿ, ರಾಜ್ಯದಲ್ಲಿ ಆಗಲಿ ಬಿಜೆಪಿಯವರು ಶಿಷ್ಟಾಚಾರ ಮರೆತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.02): ಕೇಂದ್ರದಲ್ಲಿ ಆಗಲಿ, ರಾಜ್ಯದಲ್ಲಿ ಆಗಲಿ ಬಿಜೆಪಿಯವರು ಶಿಷ್ಟಾಚಾರ ಮರೆತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು. ರಾಮನಗರದಲ್ಲಿ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣಗೌಡ ಅವರು ಪದೇ ಪದೇ ಶಾಸಕರು, ಸಂಸದರನ್ನು ಕಡೆಗಣಿಸುತ್ತಿರುವ ವಿಷಯಕ್ಕೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್ ಅವರು ಸಂವಿಧಾನ ಇದೆ ಎಂಬುದನ್ನು ಬಿಜೆಪಿಯವರು ಮರೆತಿದ್ದಾರೆ. ಬೇರೆ ಪಕ್ಷದ ಎಂಎಲ್ಎಗಳು, ಸಂಸದರು ಇದ್ದಾರೆ ಎನ್ನುವುದನ್ನು ಮರೆತಿದ್ದಾರೆ. ಯಾರೋ ಮಾಡಿದ ಕಾರ್ಯಕ್ರಮಗಳನ್ನು ನಾವು ಮಾಡಿದ್ದೇವೆ ಎಂಬುದಾಗಿ ಸುಳ್ಳು ಬಿಂಬಿಸಿಕೊಳ್ಳುತ್ತಿದ್ದಾರೆ. 

Tap to resize

Latest Videos

undefined

ಇದೆಲ್ಲವೂ ಬಿಜೆಪಿಯದ್ದು ಹಿಟ್ಲರ್ ಸಂಸ್ಕೃತಿ. ಅಶ್ವತ್ಥ್ ನಾರಾಯಣ ಅವರು ಯಾವ ಶಿಷ್ಟಾಚಾರ ಪಾಲಿಸಿದ್ದಾರೆ ಹೇಳಿ ನೋಡೋಣ ಎಂದು ಪ್ರಶ್ನಿಸಿದರು. ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ ಅಲ್ಲಿ ರಾಮ ಮೂರ್ತಿ ಮಾಡುತ್ತೇವೆ ಎಂದು ಹೇಳಿ ಕಮ್ಯುನಲ್ ಗಲಾಟೆ ಮಾಡಲು ಪ್ರಯತ್ನಿಸಿದ್ದಾರೆ. ಆ ಮೂಲಕ ಮತಗಳನ್ನು ಸೆಳೆದು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಅಲ್ಲಿ ಸಂಸದರಾದ ಡಿ. ಕೆ ಸುರೇಶ್ ಇದ್ದಾರೆ, ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದಾರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿದ್ದಾರೆ. ಅವರಿಗೆಲ್ಲಾ ರಾತ್ರಿ 12 ಗಂಟೆ ವೇಳೆಗೆ ಆಹ್ವಾನ ಪತ್ರಿಕೆ ಎಸೆದು, ಇವರ ಪಾಡಿಗೆ ಇವರು ಕಾರ್ಯಕ್ರಮ ನಡೆಸಿಕೊಂಡರೆ ಆಯ್ತೆ ಎಂದು ಪ್ರಶ್ನಿಸಿದರು. 

ಬೊಮ್ಮಾಯಿ ಯಾರೆಂದು ಕೇಳಿದರೆ 40% ಕಮಿಷನ್ ಸರ್ಕಾರದ ಸಿಎಂ ಎನ್ನುತ್ತಿದ್ದಾರೆ: ರಣದೀಪ್ ಸಿಂಗ್ ಸುರ್ಜೇವಾಲ

ವಿರೋಧ ಪಕ್ಷಗಳ ಸಂಸ್ಕೃತಿಯನ್ನೇ ಇವರು ಬಿಟ್ಟಿದ್ದಾರೆ ಎಂದು ಟೀಸಿಕಿಸಿದರು. ಇನ್ನು ಸಚಿವ ಸಚಿವ ನಾರಾಯಣ ಗೌಡ ಅವರು ಕಾಂಗ್ರೆಸ್ಸಿಗೆ ಬರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್ ನಾರಾಯಣಗೌಡ ಅಷ್ಟೇ ಅಲ್ಲ. 4 ಜನ ಮಂತ್ರಿಗಳು, ನಾಲ್ಕು ಬಿಜೆಪಿ ಶಾಸಕರು ಸೇರಿ ಒಟ್ಟು 8 ಜನರು ಕಾಂಗ್ರೆಸ್ ಸೇರುವುದು ಖಚಿತ. ಜೊತೆಗೆ ಜೆಡಿಎಸ್ ನ 9 ಎಂಎಲ್ಎ ಗಳು ಕಾಂಗ್ರೆಸ್ ಗೆ ಬರಲಿದ್ದಾರೆ. ಈಗಾಗಲೇ ಅನ್ ಅಫೀಷಿಯಲ್ ಆಗಿ ಅರ್ಜಿ ಸಲ್ಲಿಸಿದ್ದಾರೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 15 ರೂಪಾಯಿ ಜಾಸ್ತಿ ಆಗಿದ್ದಕ್ಕೆ ಬಿಜೆಪಿಯ ಸ್ಮೃತಿ ಇರಾನಿ, ರಾಜ್ಯದ ಶೋಭಾ ಕರಂದ್ಲಾಜೆ ಉರುಳು ಸೇವೆ ರೀತಿ ಉರುಳಾಡಿದ್ದರು. 

ಆದರೆ ಈಗ ಅವರೆಲ್ಲಾ ಎಲ್ಲಿ ಹೋದರು ಎಂದು ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು. ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರು ಧ್ವಜಾರೋಹಣ ನೆರವೇರಿಸುತ್ತಿದ್ದರು.  ಆ ಸಂದರ್ಭದಲ್ಲಿ ಅವರಿಗೆ ಕೊಡೆ ಹಿಡಿಯಲು ಸಾಧ್ಯವಿಲ್ಲ. ಆದರೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರನ್ನು ಅಮಿತ್ ಷಾ, ಪ್ರಧಾನಿ ಮೋದಿ ಅವರು ಏನು ಮಾಡಿದರು. ರಾಜ್ಯದಲ್ಲಿ ಸೈಕಲ್ ಹೊಡೆದು ಪಕ್ಷ ಕಟ್ಟಿದ್ದ ಯಡಿಯೂರಪ್ಪ ಅವರನ್ನು ಏನು ಮಾಡಿದಿರಿ ಎಂದು ಲಕ್ಷ್ಮಣ್ ಪ್ರಶ್ನಿಸಿದರು. 

ಕೇಂದ್ರದ ಬಿಜೆಪಿಯ ಸರ್ಕಾರವೇ ಎನ್ ಪಿಎಸ್ ಜಾರಿಗೆ ತಂದವರು. ಬಿಜೆಪಿಯೇ ಎನ್ ಪಿಎಸ್ ಅಡಿಯಲ್ಲಿ ನೌಕರರಿಂದ ಸಂಗ್ರಹಿಸಿದ 40 ಸಾವಿರ ಕೋಟಿ ಹಣವನ್ನು ಅದಾನಿ ಗ್ರೂಪಿನ ಸ್ಟಾಕ್ ಎಕ್ಸ್‌ಚೇಂಜ್ ಏಜೆನ್ಸಿಯಲ್ಲಿ ಹೂಡಿಕೆ ಮಾಡಿದರು. ಆ ದುಡ್ಡು ಈಗ ಎಲ್ಲಿ ಹೋಯಿತು ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ 10 ಲಕ್ಷ ನೌಕರರ ಬೆನ್ನಿಗೆ ಚೂರಿ ಹಾಕಿದ್ದಾರೆ. ಮುಷ್ಕರ ಎನ್ನುವ ನಾಟಕವಾಡಿ 17 ಪರ್ಸೆಂಟ್ ಫಿಟ್ಮೆಂಟ್ ಕೊಟ್ಟಿದ್ದಾರೆ. ಆದರೆ ನೌಕರರು ಕೇಳಿದ್ದು 40 ಪರ್ಸೆಂಟ್. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 30 ಪರ್ಸೆಂಟ್ ಫಿಟ್ಮೆಂಟ್ ಕೊಟ್ಟಿದ್ದರು. 

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಅದರಲ್ಲೂ 2017 ರ ಜನವರಿಯಿಂದಲೇ ಪೂರ್ವಾನ್ವಯ ಆಗುವಂತೆ ಜಾರಿ ಮಾಡಿದರು. ಆದರೆ ಬಸವರಾಜು ಬೊಮ್ಮಾಯಿ ಅವರು ಏಪ್ರಿಲ್ ಒಂದರಿಂದ ಜಾರಿಯಾಗುವಂತೆ ಆದೇಶಿಸಿದ್ದಾರೆ. ಅಷ್ಟೊತ್ತಿಗೆ ಚುನಾವಣೆ ಘೋಷಣೆಯಾಗಿರುತ್ತದೆ. ಹಾಗಾದರೆ ಅದು ಹೇಗೆ ಜಾರಿಯಾಗುತ್ತದೆ. ಅಷ್ಟಕ್ಕೂ ಷಡಕ್ಷರಿ ಅವರು ಮುಂದಿನ ಚುನಾವಣೆಯಲ್ಲಿ ಈಶ್ವರಪ್ಪ ಅವರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮಾಡಿರುವ ನಾಟಕ ಇದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ ವಾಗ್ದಾಳಿ ಮಾಡಿದರು.

click me!