ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಕಾಲೇಜು ಆರಂಭವಾಗುತ್ತಿವೆ. ಬಂಗಾರಪ್ಪ ಅವರು ನನ್ನ ಗುರುಗಳು. ಅವರಿಂದ ಅಭಿವೃದ್ಧಿ ಕಾರ್ಯ ಮಾಡುವುದನ್ನು ಕಲಿತಿದ್ದೇನೆ. ಬಂಗಾರಪ್ಪ ಸಿಎಂ ಇದ್ದಾಗ ಆಶ್ರಯ ಮನೆ, ರೈತರಿಗೆ ಉಚಿತ ವಿದ್ಯುತ್ ನೀಡಿದರು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಕುಕನೂರು (ಜು.11): ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಕಾಲೇಜು ಆರಂಭವಾಗುತ್ತಿವೆ. ಬಂಗಾರಪ್ಪ ಅವರು ನನ್ನ ಗುರುಗಳು. ಅವರಿಂದ ಅಭಿವೃದ್ಧಿ ಕಾರ್ಯ ಮಾಡುವುದನ್ನು ಕಲಿತಿದ್ದೇನೆ. ಬಂಗಾರಪ್ಪ ಸಿಎಂ ಇದ್ದಾಗ ಆಶ್ರಯ ಮನೆ, ರೈತರಿಗೆ ಉಚಿತ ವಿದ್ಯುತ್ ನೀಡಿದರು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕೆಕೆಆರ್‌ಡಿಬಿ ಅನುದಾನದಡಿ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸದ್ಯ ಸಿಎಂ ಸಿದ್ದರಾಮಯ್ಯ ಸರ್ಕಾರ ೪.೧೦ ಕೋಟಿ ಜನರಿಗೆ ಅಂದರೆ ಶೇ.೮೫.೩ರಷ್ಟು ಜನರಿಗೆ ಆಹಾರ ಧಾನ್ಯ, ಗೃಹಲಕ್ಷ್ಮೀ ಯೋಜನೆಯಲ್ಲಿ ೧.೨೯ ಕೋಟಿ ಮಹಿಳೆಯರಿಗೆ ₹೨೫೦೦ ಕೋಟಿ ಹಣ, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇದ್ದು, ನಿತ್ಯ ೬೩ ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ವಿದ್ಯುತ್‌ಗಾಗಿ ₹೧.೨೪ ಕೋಟಿ ನೀಡಿದ್ದೇವೆ. ವರ್ಷಕ್ಕೆ ₹65 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಭರಿಸಲಾಗುತ್ತಿದೆ. ₹೧೮ ಸಾವಿರ ಕೋಟಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಬಳಕೆ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಶೂ, ಬಟ್ಟೆ, ಬಿಸಿಯೂಟ, ಪುಸ್ತಕ ವಿತರಣೆ ಮಾಡಿದ್ದೇವೆ ಎಂದರು.
undefined
ದೇಶದಲ್ಲಿಯೇ ನಮ್ಮ ಕರ್ನಾಟಕ ಪೊಲೀಸ್ ಇಲಾಖೆ ನಂ.1: ಗೃಹ ಸಚಿವ ಪರಮೇಶ್ವರ್
ಶಿಕ್ಷಣದ ಗುಣಮಟ್ಟಕ್ಕೆ ಮಧು ಬಂಗಾರಪ್ಪ ಉತ್ತಮ ಕಾರ್ಯ ಮಾಡುತ್ತಿದ್ದು, ಅವರ ಹೇರ್ ಕಟಿಂಗ್, ಬಟ್ಟೆ ಶೈಲಿಗಳ ಬಗ್ಗೆ ಬಿಜೆಪಿ ಟೀಕೆ ಮಾಡುವುದು ಸರಿಯಲ್ಲ. ಅದು ಅವರ ವೈಯಕ್ತಿಕ ಶೈಲಿಯಾಗಿದೆ. ಕ್ಷೇತ್ರದಲ್ಲಿ ೬ ಹೈಸ್ಕೂಲ್ ಮಂಜೂರು ಆಗಿದೆ. ವರ್ಷಕ್ಕೆ ಒಂದು ಹೈಸ್ಕೂಲ್‌ಗೆ ₹೫೦ ಲಕ್ಷ ಹಣ ಬೇಕು. ಕಟ್ಟಡಕ್ಕೆ ₹೨ ಕೋಟಿ ಫರ್ನಿಚರ್‌ಗೆ ₹೫೦ ಲಕ್ಷ ಒದಗಿಸಲಾಗಿದೆ. ೧೯೮೫ರಲ್ಲಿ ೭ ಹೈಸ್ಕೂಲ್ ಮಾತ್ರ ಇದ್ದವು. ಈಗ ಎರಡೇ ಗ್ರಾಮಗಳಲ್ಲಿ ಹೈಸ್ಕೂಲ್ ಇಲ್ಲ. ಕ್ಷೇತ್ರದಲ್ಲಿ ೧೭ ಮೊರಾರ್ಜಿ, ಎಂಜಿನಿಯರಿಂಗ್ ಕಾಲೇಜು, ಕೌಶಲ್ಯ ಅಭಿವೃದ್ಧಿ ಕೇಂದ್ರ ತಂದಿದ್ದೇನೆ ಎಂದರು.
ನನ್ನ ಬಿಟ್ಟು ಕ್ಷೇತ್ರದಲ್ಲಿ ಯಾರೂ ಶಾಲಾ-ಕಾಲೇಜು ಮಾಡಿಲ್ಲ. ನನಗೆ ಯಾವ ಶಿಕ್ಷಣ ಪ್ರೇಮಿ ಎಂಬ ಟೈಟಲ್ ಬೇಡ. ಕೋಮಲಾಪುರ ಗ್ರಾಮದಲ್ಲಿ ಸುವರ್ಣ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣದ್ದು ಕಳಪೆ ಕಾಮಗಾರಿಯಾಗಿದೆ. ಕಿತ್ತು ಗುಣಮಟ್ಟದ ಕೆಲಸ ಮಾಡಿಸುತ್ತೇನೆ. ಸಿಸಿ ರಸ್ತೆಗೆ ₹೭೦ ಕೋಟಿ, ಗ್ರಾಮೀಣ ಒಳ ಭಾಗದ ಜಮೀನು ರಸ್ತೆಗೆ ₹೧೦೦ ಕೋಟಿ ತರಲಾಗಿದೆ. ಎಂಜಿನಿಯರಿಂಗ್ ಬಹಳ ಜನರು ಓದಿದ್ದಾರೆ. ಆದರೆ ಯುವಕರಿಗೆ ಕೌಶಲ್ಯ ತರಬೇತಿ ಮುಖ್ಯ. ಹಾಗಾಗಿ ಮಧು ಬಂಗಾರಪ್ಪ ಅವರಿಗೆ ತಮ್ಮ ಕ್ಷೇತ್ರದಲ್ಲಿ ಕೌಶಲ್ಯ ಕೇಂದ್ರ ತೆರೆಯಲು ಹೇಳಿದ್ದೇನೆ ಎಂದರು.
ಯಾರಿಂದಲೂ ಕಾಂಗ್ರೆಸ್ ನಿರ್ನಾಮ ಮಾಡಲು ಸಾಧ್ಯವಿಲ್ಲ: ಸಂಸದ ಸುನಿಲ್ ಬೋಸ್
ಭಾನಾಪುರ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಉಪಾಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ, ಎಸಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ಎಚ್. ಪ್ರಾಣೇಶ, ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ನಿಂಗಪ್ಪ, ಪ್ರಮುಖರಾದ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ್, ಬಸವರಾಜ ಉಳ್ಳಾಗಡ್ಡಿ, ಕೆರಿಸಬಪ್ಪ ನಿಡಗುಂದಿ, ದೇವಪ್ಪ ಅರಕೇರಿ, ಚಂದ್ರಶೇಖರಯ್ಯ ಹಿರೇಮಠ, ಅಶೋಕ ತೋಟದ ಇತರರಿದ್ದರು. ಉದ್ಘಾಟನೆ ವೇಳೆ ಶಾಲಾ ಮಕ್ಕಳನ್ನು ಸಚಿವ ಮಧು ಬಂಗಾರಪ್ಪ ಕರೆದು ಜ್ಯೋತಿ ಬೆಳಗಿಸಿದರು.